Unemployment Rate: ಭಾರತದಲ್ಲಿ ನಿರುದ್ಯೋಗ ಶೇ. 7.45ಕ್ಕೆ ಹೆಚ್ಚಳ: ಸಿಎಂಐಇ ವರದಿ

| Updated By: Digi Tech Desk

Updated on: Mar 01, 2023 | 3:06 PM

CMIE Data of Unemployment Rate in February: 2023 ಜನವರಿಯಲ್ಲಿ ಶೇ. 7.14ರಷ್ಟಿದ್ದ ನಿರುದ್ಯೋಗ ಫೆಬ್ರುವರಿಯಲ್ಲಿ ಶೇ. 7.45ಕ್ಕೆ ಏರಿದೆ. ಕಳೆದ ವರ್ಷದ ನವೆಂಬರ್, ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ನಿರುದ್ಯೋಗ ತುಸು ಕಡಿಮೆಯೇ ಇದೆ.

Unemployment Rate: ಭಾರತದಲ್ಲಿ ನಿರುದ್ಯೋಗ ಶೇ. 7.45ಕ್ಕೆ ಹೆಚ್ಚಳ: ಸಿಎಂಐಇ ವರದಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಭಾರತದಲ್ಲಿ ನಿರುದ್ಯೋಗ ಪ್ರಮಾಣ ಮತ್ತೆ ಹೆಚ್ಚಾಗಿದೆ. 2023ರ ಜನವರಿಯಲ್ಲಿ ಶೇ. 7.14ರಷ್ಟು ಇದ್ದ ನಿರುದ್ಯೋಗ ಫೆಬ್ರುವರಿ ತಿಂಗಳಲ್ಲಿ ಶೇ. 7.45ಕ್ಕೆ ಏರಿದೆ. ಇದು ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರ (CMIE- Center For Monitoring Indian Economy) ಇಂದು ಬುಧವಾರ (ಮಾ. 1) ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದುಬಂದಿದೆ. ಫೆಬ್ರುವರಿ ತಿಂಗಳಲ್ಲಿ ನಗರ ಭಾಗದಲ್ಲಿ ನಿರುದ್ಯೋಗ ಪ್ರಮಾಣ ಶೇ. 7.93ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ. 7.23ರಷ್ಟಿದೆ ಎನ್ನಲಾಗಿದೆ.

ಅತಿಹೆಚ್ಚು ಉದ್ಯೋಗಗಳಿರುವ ಗ್ರಾಮೀಣ ಭಾಗದಲ್ಲಿ ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ನಿರುದ್ಯೋಗ ತೀವ್ರವಾಗಿ ಹೆಚ್ಚಾಗಿದೆ. ಜನವರಿಯಲ್ಲಿ ಇಲ್ಲಿ ಶೇ. 6.48ರಷ್ಟು ಮಾತ್ರ ನಿರುದ್ಯೋಗ ಇತ್ತು. ಫೆಬ್ರುವರಿಯಲ್ಲಿ ಅದು ಶೇ. 7.23ಕ್ಕೆ ಏರಿದೆ. ನಗರ ಪ್ರದೇಶದಲ್ಲಿ ನಿರುದ್ಯೋಗ ಏರಿಕೆ ಕಡಿಮೆ ಆಗಿರುವುದು ಗಮನಾರ್ಹ. ಜನವರಿಯಲ್ಲಿ ನಗರ ಭಾಗದಲ್ಲಿ ಶೇ. 8.55ರಷ್ಟಿದ್ದ ನಿರುದ್ಯೋಗ ಫೆಬ್ರುವರಿಗೆ ಶೇ. 7.93ಕ್ಕೆ ಬಂದು ಮುಟ್ಟಿದೆ.

ಜನರಿಗೂ ಮುಂಚೆ, ಅಂದರೆ 2022 ಡಿಸೆಂಬರ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ. 8.3ರಷ್ಟಿತ್ತು. ನವೆಂಬರ್​ನಲ್ಲಿ ಶೇ. 8ರಷ್ಟಿತ್ತು. ಅದಾದ ಬಳಿಕ ಪರಿಸ್ಥಿತಿ ತುಸು ಸುಧಾರಣೆ ಕಂಡಿದೆ. ಹರ್ಯಾಣ ರಾಜ್ಯದಲ್ಲಿ ಅತಿ ಹೆಚ್ಚು ನಿರುದ್ಯೋಗ ಇದೆ. ಇಲ್ಲಿ ಉದ್ಯೋಗ ಇಲ್ಲದೇ ಇರುವವರ ಸಂಖ್ಯೆ ಶೇ. 30ಕ್ಕಿಂತಲೂ ಹೆಚ್ಚು. ಒಡಿಶಾ ರಾಜ್ಯದಲ್ಲಿ ಅತಿ ಕಡಿಮೆ ನಿರುದ್ಯೋಗ ಇದೆ.

ಇದನ್ನೂ ಓದಿPost Office Savings: ಆನ್​ಲೈನ್, ಆಫ್​​ಲೈನ್​ನಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್​ ಪರಿಶೀಲಿಸಲು ಹೀಗೆ ಮಾಡಿ

ವಿವಿಧ ವರ್ಷಗಳಲ್ಲಿನ ನಿರುದ್ಯೋಗ ಪ್ರಮಾಣ

2018: ಶೇ. 5.33

2019: ಶೇ. 5.27

2020: ಶೇ. 8.00

2021: ಶೇ. 5.98

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Wed, 1 March 23