ಎನ್​ಪಿಎಸ್​-ವಾತ್ಸಲ್ಯ ಯೋಜನೆ ಎಂದರೇನು? ಇದರಿಂದ ಪೋಷಕರು, ಮಕ್ಕಳಿಗೇನು ಪ್ರಯೋಜನ

NPS Vatsalya Scheme: ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಇದರಲ್ಲಿ ಎನ್​ಪಿಎಸ್ ವಾತ್ಸಲ್ಯ ಯೋಜನೆ(ಯ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಇದಾಗಿದ್ದು, ಸರ್ಕಾರದಿಂದ ನಡೆಸಲ್ಪಡುವ ಪಿಂಚಣಿ ಯೋಜನೆಯಾಗಿದೆ. ನಿವೃತ್ತಿಯ ನಂತರವೂ ಆದಾಯ ಪಡೆಯಬಹುದು.

ಎನ್​ಪಿಎಸ್​-ವಾತ್ಸಲ್ಯ ಯೋಜನೆ ಎಂದರೇನು? ಇದರಿಂದ ಪೋಷಕರು, ಮಕ್ಕಳಿಗೇನು ಪ್ರಯೋಜನ
Follow us
ನಯನಾ ರಾಜೀವ್
|

Updated on:Jul 23, 2024 | 1:39 PM

ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಇದರಲ್ಲಿ ಎನ್​ಪಿಎಸ್ ವಾತ್ಸಲ್ಯ ಯೋಜನೆ(NPS Vatsalya Scheme)ಯ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಇದಾಗಿದ್ದು, ಸರ್ಕಾರದಿಂದ ನಡೆಸಲ್ಪಡುವ ಪಿಂಚಣಿ ಯೋಜನೆಯಾಗಿದೆ. ನಿವೃತ್ತಿಯ ನಂತರವೂ ಆದಾಯ ಪಡೆಯಬಹುದು.

ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದ ನಂತರ ಯೋಜನೆಯನ್ನು ಸುಲಭವಾಗಿ ಎನ್‌ಪಿಎಸ್ ಅಲ್ಲದ ಯೋಜನೆಯಾಗಿ ಪರಿವರ್ತಿಸಬಹುದು ಎಂದು ಹೇಳಿದ್ದಾರೆ. ಈ ಯೋಜನೆಯ ಅಡಿಯಲ್ಲಿ, ನಿಮ್ಮ ಕೆಲಸದ ಜೀವನದಲ್ಲಿ ನೀವು ದೀರ್ಘಾವಧಿಯವರೆಗೆ ಹೂಡಿಕೆ ಮಾಡಬೇಕು. ಆದರೆ ಈಗ ಪೋಷಕರು ಈ ಯೋಜನೆಯಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಇಂದು ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎನ್ ಪಿಎಸ್ ವಾತ್ಸಲ್ಯ ಯೋಜನೆಯನ್ನು ಘೋಷಿಸಿದ್ದಾರೆ.

ಮೊದಲು ಈ ಯೋಜನೆಯನ್ನು ಸರ್ಕಾರಿ ನೌಕರರಿಗೆ ಮಾತ್ರ ಪ್ರಾರಂಭಿಸಲಾಯಿತು, ಆದರೆ 2009 ರಿಂದ ಸರ್ಕಾರವು ಖಾಸಗಿ ವಲಯದ ಉದ್ಯೋಗಿಗಳಿಗೂ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿತು. ಇದರಲ್ಲಿ ಎರಡು ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಲಾಗುತ್ತದೆ. ಮೊದಲ ಶ್ರೇಣಿ-1 ಮತ್ತು ಶ್ರೇಣಿ-2. NPS ಶ್ರೇಣಿ-1 ನಿವೃತ್ತಿ ಖಾತೆಯಾಗಿದ್ದು, ಶ್ರೇಣಿ-2 ಸ್ವಯಂಪ್ರೇರಿತ ಖಾತೆಯಾಗಿದೆ.

ಖಾತೆಯನ್ನು ತೆರೆಯುವಾಗ, ನೀವು ಶ್ರೇಣಿ 1 ರಲ್ಲಿ 500 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇದರ ನಂತರ, 1000 ರೂಗಳನ್ನು ಟೈರ್ 2 ರಲ್ಲಿ ಠೇವಣಿ ಮಾಡಬೇಕು. ಪ್ರತಿ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡಬೇಕು.

ನಿವೃತ್ತಿಯ ಸಮಯದಲ್ಲಿ NPS ನಲ್ಲಿ ಠೇವಣಿ ಮಾಡಿದ ಒಟ್ಟು ಮೊತ್ತದ 60 ಪ್ರತಿಶತವನ್ನು ನೀವು ಒಟ್ಟು ಮೊತ್ತದಲ್ಲಿ ಹಿಂಪಡೆಯಬಹುದು, ಉಳಿದ 40 ಪ್ರತಿಶತ ಮೊತ್ತವು ಪಿಂಚಣಿ ಯೋಜನೆಗೆ ಹೋಗುತ್ತದೆ. ಎನ್‌ಪಿಎಸ್‌ನಲ್ಲಿ ಹೂಡಿಕೆಗೆ ಯಾವುದೇ ಮಿತಿಯಿಲ್ಲ.

ಮತ್ತಷ್ಟು ಓದಿ: Budget 2024: 5 ಕೆಜಿ ಉಚಿತ ಪಡಿತರ ಗಡುವು 5 ವರ್ಷ ವಿಸ್ತರಣೆ, ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣು

ಎನ್‌ಪಿಎಸ್ ಕುರಿತು ಸರ್ಕಾರಿ ನೌಕರರ ಕಳವಳಗಳನ್ನು ಪರಿಹರಿಸಲು ಶೀಘ್ರದಲ್ಲೇ ಹೊಸ ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.

ನರೇಂದ್ರ ಮೋದಿಯವರ ಮೂರನೇ ಅವಧಿಯ ಪ್ರಧಾನಿಯಾದ ಮೊದಲ ಕೇಂದ್ರ ಬಜೆಟ್ ಇದಾಗಿದೆ. ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು 1860 ರಲ್ಲಿ ಮಂಡಿಸಲಾಯಿತು. ಈ ಬಜೆಟ್ ಅನ್ನು ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಮಂಡಿಸಿದರು.

ನವೆಂಬರ್ 26, 1947 ರಂದು ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಬಜೆಟ್ ಅನ್ನು ಮಂಡಿಸಲಾಯಿತು, ಇದನ್ನು ಆಗಿನ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಮಂಡಿಸಿದರು.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:36 pm, Tue, 23 July 24