AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income tax slab rates: ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ; ಸ್ಲ್ಯಾಬ್ ದರ ಪರಿಷ್ಕರಣೆ; ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ರೂಗೆ ಏರಿಕೆ

Union Budget 2024: ನಿರೀಕ್ಷೆಯಂತೆ ಆದಾಯ ತೆರಿಗೆ ಸ್ಲ್ಯಾಬ್ ದರಗಳಲ್ಲಿ ತುಸು ಬದಲಾವಣೆ ಮಾಡಲಾಗಿದೆ. 12 ಲಕ್ಷ ರೂ ಒಳಗಿನ ಆದಾಯಕ್ಕೆ ತೆರಿಗೆಯಲ್ಲಿ ಸ್ವಲ್ಪ ಕಡಿಮೆ ಆಗಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000 ರೂನಿಂದ 75,000 ರೂಗೆ ಹೆಚ್ಚಿಸಲಾಗಿದೆ. ಮೂರು ಲಕ್ಷ ರೂನಿಂದ 6 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5 ತೆರಿಗೆ ಇತ್ತು. ಅದನ್ನು ಏಳು ಲಕ್ಷ ರೂಗೆ ಹೆಚ್ಚಿಸಲಾಗಿದೆ. ಪೂರ್ಣ ವಿವರ ಇಲ್ಲಿದೆ...

Income tax slab rates: ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ; ಸ್ಲ್ಯಾಬ್ ದರ ಪರಿಷ್ಕರಣೆ; ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ರೂಗೆ ಏರಿಕೆ
ಆದಾಯ ತೆರಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 23, 2024 | 2:06 PM

Share

ನವದೆಹಲಿ, ಜುಲೈ 23: ನಿರೀಕ್ಷೆಯಂತೆ ಈ ಬಜೆಟ್​ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ದರಗಳನ್ನು ಪರಿಷ್ಕರಿಸಲಾಗಿದೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಎಲ್ಲಾ ಬದಲಾವಣೆ ಮಾಡಲಾಗಿದೆ. ಹಳೆಯ ಟ್ಯಾಕ್ಸ್ ರೆಜಿಮೆ ದರ ಹಾಗೆಯೇ ಮುಂದುವರಿಯುತ್ತದೆ. ನ್ಯೂ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ಎಕ್ಸೆಂಪ್ಷನ್ ಮಿತಿ 3 ಲಕ್ಷ ರೂನಷ್ಟಿದೆ. ಮೂರರಿಂದ ಏಳು ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಇದೆ. ಈ ಹಿಂದೆ ಇದು 3ರಿಂದ 6 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಇತ್ತು. ಇದನ್ನು ಈಗ ಏಳು ಲಕ್ಷ ರೂಗೆ ಹೆಚ್ಚಿಸಲಾಗಿದೆ.

ಹತ್ತು ಲಕ್ಷ ರೂ ಒಳಗಿನ ಆದಾಯಕ್ಕೆ ತೆರಿಗೆ ದರ ಕಡಿಮೆ ಮಾಡಲಾಗಿದೆ. ಏಳರಿಂದ 10 ಲಕ್ಷ ರೂವರೆಗಿನ ಆದಾಯಕ್ಕೆ ಶೆ. 10ರಷ್ಟು ತೆರಿಗೆ ಇದೆ. ಈ ಹಿಂದೆ ಇದು ಆರರಿಂದ ಒಂಬತ್ತು ಲಕ್ಷ ರೂವರೆಗಿನ ಆದಾಯಕ್ಕೆ ಶೇ. 10 ಇತ್ತು. ಇನ್ನುಳಿದಂತೆ 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಹಿಂದಿನ ಸ್ಲ್ಯಾಬ್ ದರಗಳೇ ಅನ್ವಯ ಆಗುತ್ತವೆ.

ಪ್ರಮುಖ ಬದಲಾವಣೆ ಎಂದರೆ ಸ್ಟ್ಯಾಂಡರ್ಡ್ ಡಿಡಕ್ಷನ್​ನದ್ದು. ಸಂಬಳದಾರರಿಗೆ 50,000 ರೂ ಇದ್ದ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 75,000 ರೂಗೆ ಹೆಚ್ಚಿಸಲಾಗಿದೆ. ಪಿಂಚಣಿದಾರರ ಪೆನ್ಸನ್ ಹಣಕ್ಕೆ ಇದ್ದ ಡಿಡಕ್ಷನ್ ಮಿತಿಯನ್ನು 15,000 ರೂನಿಂದ 25,000 ರೂಗೆ ಹೆಚ್ಚಿಸಲಾಗಿದೆ. ಇದು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಮುಂದುವರಿಯುತ್ತಿರುವವರನ್ನು ಹೊಸ ಟ್ಯಾಕ್ಸ್ ರೆಜಿಮೆಗೆ ಕರೆತರುವ ಪ್ರಯತ್ನವಾಗಿರಬಹುದು.

ಇದನ್ನೂ ಓದಿ: Budget 2024: ₹10 ಲಕ್ಷದವರೆಗಿನ ವಿದ್ಯಾರ್ಥಿ ಸಾಲಗಳಿಗೆ ಆರ್ಥಿಕ ನೆರವು ಘೋಷಣೆ

ಹೊಸ ಟ್ಯಾಕ್ಸ್ ರೆಜಿಮೆ ಅಪ್​ಡೇಟ್ ಇದು

  • ಮೂರು ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
  • 3ರಿಂದ 7 ಲಕ್ಷ ರೂವರೆಗಿನ ಆದಾಯಕ್ಕೆ: ಶೇ. 5 ತೆರಿಗೆ
  • 7ರಿಂದ 10 ಲಕ್ಷ ರೂ ಆದಾಯಕ್ಕೆ: ಶೇ. ಶೇ. 10 ತೆರಿಗೆ
  • 10ರಿಂದ 12 ಲಕ್ಷ ರೂ ಆದಾಯಕ್ಕೆ: ಶೇ. 15 ತೆರಿಗೆ
  • 12ರಿಂದ 15 ಲಕ್ಷ ರೂ ಆದಾಯಕ್ಕೆ: ಶೇ. 20 ತೆರಿಗೆ
  • 15 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ: ಶೇ. 30 ತೆರಿಗೆ

ಹಿಂದಿನ ಟ್ಯಾಕ್ಸ್ ದರಗಳ ವಿವರ ಇಲ್ಲಿದೆ…

  • ಮೂರು ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
  • 3ರಿಂದ 6 ಲಕ್ಷ ರೂವರೆಗಿನ ಆದಾಯಕ್ಕೆ: ಶೇ. 5 ತೆರಿಗೆ
  • 7ರಿಂದ 10 ಲಕ್ಷ ರೂ ಆದಾಯಕ್ಕೆ: ಶೇ. ಶೇ. 10 ತೆರಿಗೆ
  • 10ರಿಂದ 12 ಲಕ್ಷ ರೂ ಆದಾಯಕ್ಕೆ: ಶೇ. 15 ತೆರಿಗೆ
  • 12ರಿಂದ 15 ಲಕ್ಷ ರೂ ಆದಾಯಕ್ಕೆ: ಶೇ. 20 ತೆರಿಗೆ
  • 15 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ: ಶೇ. 30 ತೆರಿಗೆ

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ