‘ಸೈಯಾರ’ ಹೀರೋ-ಹೀರೋಯಿನ್ ಮಧ್ಯೆ ನಿಜ ಜೀವನದಲ್ಲಿ ಮೂಡಿತು ಪ್ರೀತಿ?
‘ಸೈಯಾರಾ’ ಚಿತ್ರದ ಭಾರೀ ಯಶಸ್ಸಿನ ನಂತರ, ಅಹಾನ್ ಪಾಂಡೆ ಮತ್ತು ಅನಿತ್ ಪಡ್ಡಾ ಅವರ ನಡುವಿನ ನಿಕಟ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಕ್ಸಸ್ ಪಾರ್ಟಿಯ ಫೋಟೋಗಳು ಮತ್ತು ವೀಡಿಯೋಗಳು ಇಬ್ಬರ ನಡುವಿನ ಆತ್ಮೀಯತೆಯನ್ನು ತೋರಿಸುತ್ತವೆ. ಶಾಪಿಂಗ್ ಮಾಡುವಾಗ ಕೈ ಹಿಡಿಯುವ ಪ್ರಯತ್ನ ಮತ್ತು ಸಾಮೀಪ್ಯದ ಫೋಟೋಗಳು ಪ್ರೇಮ ಸಂಬಂಧದ ಊಹಾಪೋಹಗಳಿಗೆ ಕಾರಣವಾಗಿವೆ.

‘ಎಕ್ ವಿಲನ್’, ‘ಆಶಿಕಿ 2’ ರೀತಿಯ ಸಿನಿಮಾ ನೀಡಿದ ಮೋಹಿತ್ ಸೂರಿ ಅವರು ‘ಸೈಯಾರಾ’ ಚಿತ್ರ (Saiaayara ) ನಿರ್ದೇಶಿಸಿದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಚಿತ್ರ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ನಟರಾದ ಅಹಾನ್ ಪಾಂಡೆ ಮತ್ತು ಅನಿತ್ ಪಡ್ಡಾ ಈ ಚಿತ್ರದ ಮೂಲಕ ಪ್ರಮುಖ ಪಾತ್ರಗಳಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಇಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಭಾರಿ ಹಿಟ್ ಆಗಿತ್ತು. ಇವರ ಮಧ್ಯೆ ಈಗ ನಿಜವಾದ ಪ್ರೀತಿ ಮೂಡಿತೇ ಎನ್ನುವ ಪ್ರಶ್ನೆ ಮೂಡಿದೆ.
‘ಸೈಯಾರಾ’ ಯಶಸ್ಸಿನ ನಂತರ, ಶನಿವಾರ ಸಕ್ಸಸ್ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಯ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದರಲ್ಲಿ, ಅಹಾನ್ ಮತ್ತು ಅನೀತ್ ನಡುವಿನ ನಿಕಟತೆ ಸ್ಪಷ್ಟವಾಗಿ ಗೋಚರಿಸುತ್ತದೆ.
ಅಹಾನ್ ಮತ್ತು ಅನಿತ್ ನಡುವೆ ಹೆಚ್ಚುತ್ತಿರುವ ಆತ್ಮೀಯತೆಯನ್ನು ನೋಡಿ, ನೆಟ್ಟಿಗರು ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆಯೇ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಇಬ್ಬರ ಡೇಟಿಂಗ್ ವದಂತಿಗಳು ವ್ಯಾಪಕವಾಗಿ ಹರಡಿವೆ. ಅಹಾನ್ ಪಾಂಡೆ ಅವರ ತಾಯಿ ಈ ಪಾರ್ಟಿಯ ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ವೀಡಿಯೊದಲ್ಲಿ, ಅಹಾನ್ ಮತ್ತು ಅನಿತ್ ಒಟ್ಟಿಗೆ ಶಾಪಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಅಂಗಡಿಯಿಂದ ಹೊರಬಂದ ನಂತರ, ಅಹಾನ್ ಅನಿತ್ ಕೈ ಹಿಡಿಯಲು ತನ್ನ ಕೈಯನ್ನು ಚಾಚಿದ್ದ. ಆದರೆ ಪಾಪರಾಜಿಗಳನ್ನು ನೋಡಿದ ನಂತರ ಅನಿತ್ ಅಹಾನ್ ಕೈಯನ್ನು ಬಿಡಲಿಲ್ಲ. ಆ ಬಳಿಕ ಅವರು ತಮ್ಮ ಕೈಯನ್ನು ಹಿಂತೆಗೆದುಕೊಂಡರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿಯೂ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಆರೇ ದಿನಕ್ಕೆ 150 ಕೋಟಿ ಕಲೆಕ್ಷನ್ ಮಾಡಿದ ‘ಸೈಯಾರಾ’; ಹರಿಯುತ್ತಲೇ ಇದೆ ಹಣ ಹಾಗೂ ಕಣ್ಣೀರ ಹೊಳೆ
ಅಹನ್ ಪಾಂಡೆ ನಟಿ ಅನನ್ಯಾ ಪಾಂಡೆ ಅವರ ಸೋದರ ಸಂಬಂಧಿ. ಅಹನ್ ‘ಸೈಯಾರಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದು ನಾಯಕಿಯಾಗಿ ಅನೀತ್ ಪಡ್ಡಾ ಅವರ ಮೊದಲ ಚಿತ್ರ. ಅವರು ಈ ಹಿಂದೆ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗ ಇವರಿಬ್ಬರೂ ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







