ಏಳು ಬಜೆಟ್- ಏಳು ಸೀರೆ- ಏಳು ಬಣ್ಣಗಳು: ಕರ್ನಾಟಕದ ಸಂಸದೆ-ವಿತ್ತ ಸಚಿವೆ ನೀಡಿದ ನಿರ್ಮಲ ಸಂದೇಶ ಏನು?
Nirmala Sitharaman 7th budget in a row: ತಾವು ನಿರಂತರವಾಗಿ ಮಂಡಿಸಿದ ಏಳು ಬಜೆಟ್‌ಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಏಳೂ ಬಾರಿಯೂ ಸೀರೆಗಳನ್ನೇ ಧರಿಸಿ ಲೋಕಸಭೆಯಲ್ಲಿ ಮಿಂಚಿದ್ದಾರೆ. ಪ್ರಸಕ್ತ 2024 ರ ಬಜೆಟ್‌ಗಾಗಿ ಅವರು ಧರಿಸಿರುವ ಸೀರೆ ಆಂಧ್ರಪ್ರದೇಶ ರಾಜ್ಯದ ಶೈಲಿಯದ್ದಾಗಿದೆ. ಆಫ್-ವೈಟ್ ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು.

Modi 3.0 budget: ಕರ್ನಾಟಕದ ಸಂಸದೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಮೂರೂ ಅವಧಿಯ ಆಡಳಿತದಲ್ಲಿ ಸತತವಾಗಿ 7 ಬಜೆಟ್ ಗಳನ್ನು ಮಂಡಿಸುವ ಮೂಲಕ ಮೋದಿ ಆಡಳಿತದಲ್ಲಿ ಕಾಮನಬಿಲ್ಲು ಮೂಡಿಸಿದ್ದಾರೆ. ಅಂದರೆ ಸತತವಾಗಿ ಏಳೂ ಬಜೆಟ್ಗಳ ಮಂಡನೆ ವೇಳೆ ಏಳು ಬಣ್ಣಗಳ ವಿವಿಧ ಸೀರೆಗಳನ್ನು ಧರಿಸುವ ಮೂಲಕ ಆಧ್ಯಾತ್ಮಿಕತೆ ಸೇರಿದಂತೆ ಸಾಕಷ್ಟು ಆಯಾಮಗಳನ್ನು ಪ್ರತಿನಿಧಿಸಿದ್ದಾರೆ. ಹಾಗಾದರೆ, ದೇಶದ ವಿತ್ತ ವಲಯಕ್ಕೆ ಸಚಿವೆ ನೀಡಿದ ನಿರ್ಮಲ ಸಂದೇಶ ಏನು? ತಾವು ನಿರಂತರವಾಗಿ ಮಂಡಿಸಿದ ಏಳು ಬಜೆಟ್‌ಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಏಳೂ ಬಾರಿಯೂ ಸೀರೆಗಳನ್ನೇ ಧರಿಸಿ ಲೋಕಸಭೆಯಲ್ಲಿ ಮಿಂಚಿದ್ದಾರೆ. ಪ್ರಸಕ್ತ 2024 ರ ಬಜೆಟ್‌ಗಾಗಿ ಅವರು ಧರಿಸಿರುವ ಸೀರೆ ಆಂಧ್ರಪ್ರದೇಶ ರಾಜ್ಯದ ಶೈಲಿಯದ್ದಾಗಿದೆ. ಆಫ್-ವೈಟ್ ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು. ಇದನ್ನೂ ಓದಿ: ಮೂರನೇ ವ್ಯಕ್ತಿ ಗ್ಯಾರಂಟಿ ಇಲ್ಲದೆಯೇ MSME ಗಳಿಗೆ ಟರ್ಮ್ ಲೋನ್ ಲಭ್ಯ- ವಿತ್ತ ಸಚಿವೆ ಸೀತಾರಾಮನ್ ಘೋಷಣೆ ತನ್ಮೂಲಕ ಕೇಂದ್ರ ಮೈತ್ರಿ ಸರ್ಕಾರದ ಜೊತೆ ಕೈಜೋಡಿಸಿರುವ ಆಂಧ್ರದ ಟಿಡಿಪಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಡಳಿತಕ್ಕೆ ಸಿಂಹಪಾಲು ಯೋಜನೆಗಳನ್ನು ನೀಡಿದ್ದಾರೆ. ಈ ಸೂಕ್ಷ್ಮ ಸುಳಿವನ್ನು ಗಮನಿಸಿದಾಗ ತಾವು ಇಂದು ಧರಿಸಿರುವ ಸೀರೆಗೆ ತಕ್ಕಂತೆ ದಕ್ಷಿಣ ರಾಜ್ಯಕ್ಕೆ ಭಾರಿ ಹಣಕಾಸು ಹಂಚಿಕೆ ನೀಡಿರುವುದನ್ನು ಎತ್ತಿತೋರಿಸಿದ್ದಾರೆ. ಕೆಂಪು, ನೀಲಿ, ಹಳದಿ, ಕಂದು ಮತ್ತು ಆಫ್ ವೈಟ್… ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಅವರ ಸೀರೆಗಳ ಛಾಯೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕಥೆಯಿದೆ. ಪ್ರತಿಯೊಂದು ಸೀರೆಯು ಭಾರತದ ಒಂದು ಮೂಲೆಯಿಂದ ವಿಭಿನ್ನ ಸಾಂಸ್ಕೃತಿಕ ಕಥೆಯನ್ನು...
Published On - 1:24 pm, Tue, 23 July 24