ವಿದ್ಯುತ್ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ಮೈಸೂರಿನ ಅಶೋಕಪುರಂ ಅರಣ್ಯ ಭವನದಿಂದ ದಸರಾ ಆನೆಗಳು ಆಗಸ್ಟ್ 10 ರಂದು ಮೈಸೂರು ಅರಮನೆಗೆ ಆಗಮಿಸಿದವು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಜಗಮಗಿಸುವ ಅರಮನೆಯ ದೀಪಾಲಂಕಾರವನ್ನು ನೋಡುತ್ತಾ ಬಂದವು. ಅರಣ್ಯ ಭವನದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸುವಾಗ ಮಳೆಯಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾಂಪ್ರದಾಯಿಕವಾಗಿ ಆನೆಗಳಿಗೆ ಬೀಳ್ಕೊಟ್ಟರು. ಆನೆಗಳು ಆಗಸ್ಟ್ 4 ರಂದು ಕಾಡಿನಿಂದ ಬಂದಿದ್ದವು.
ಮೈಸೂರು, ಆಗಸ್ಟ್ 10: ಮೈಸೂರಿನ ಅಶೋಕಪುರಂ ಅರಣ್ಯ ಭವನದಿಂದ ದಸರಾ ಗಜಪಡೆ ರವಿವಾರ (ಆ.10) ಅರಮನೆಗೆ ಆಗಮಿಸಿದವು. ಸಂಜೆ ಹೊತ್ತು ಜಗಮಗಿಸುವ ಅರಮನೆಯ ವಿದ್ಯುತ್ ದೀಪಾಲಂಕಾರವನ್ನು ನೋಡುತ್ತಾ ಆನೆಗಳು ಬಂದವು. ಇನ್ನು ಮೈಸೂರು ಅರಣ್ಯ ಭವನದಲ್ಲಿ ಆನೆಗಳಿಗೆ ಪೂಜೆ ಮಾಡುತ್ತಿರುವ ವೇಳೆ ಮಳೆ ಬಂತು. ಮಳೆಯಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳಿಂದ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಅರಣ್ಯ ಭವನದಿಂದ ಬೀಳ್ಕೊಟ್ಟರು. ದಸರಾ ಆನೆಗಳು ಆಗಸ್ಟ್ 4ರಂದು ಕಾಡಿನಿಂದ ನಾಡಿಗೆ ಬಂದಿದ್ದವು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಬಂದಿದ್ದವು. ಇಂದು ಅರಮನೆಯನ್ನು ಪ್ರವೇಶಿಸಿದವು.
