
ನವದೆಹಲಿ, ಜನವರಿ 23: ಟ್ಯಾರಿಫ್, ಯುದ್ಧ, ದರ್ಪ, ಭಯ, ಅನಿಶ್ಚಿತತೆ ಇತ್ಯಾದಿ ಬಿಕ್ಕಟ್ಟಿನ ಸ್ಥಿತಿಯಲ್ಲಿ ಜಗತ್ತು ಇರುವ ಹೊತ್ತಲ್ಲೇ ಭಾರತ ಸರ್ಕಾರ ಮುಂಬರುವ ವರ್ಷಕ್ಕೆ ಬಜೆಟ್ (Union Budget) ರೂಪಿಸಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಆರ್ಥಿಕತೆ ಬೆಳವಣಿಗೆಗೆ ಪೂರಕವಾಗುವ ಅಂಶಗಳನ್ನು ಬಜೆಟ್ನಿಂದ ನಿರೀಕ್ಷಿಸಲಾಗುತ್ತಿದೆ. ಸಾಮಾನ್ಯ ರೀಟೇಲ್ ಹೂಡಿಕೆದಾರರು ಈ ಬಜೆಟ್ನಲ್ಲಿ ಏನು ನಿರೀಕ್ಷಿಸಬಹುದು, ಅಥವಾ ಗಮನಿಸಬಹುದು? ಇಲ್ಲಿದೆ ಒಂದಷ್ಟು ವಿವರ.
ಸರ್ಕಾರ ಕಳೆದ ಒಂದು ವರ್ಷದಲ್ಲಿ ಜಿಎಸ್ಟಿ ಮತ್ತು ಆದಾಯ ತೆರಿಗೆಯನ್ನು ಕಡಿಮೆಗೊಳಿಸಿದೆ ಮತ್ತು ಸರಳೀಕೃತಗೊಳಿಸಿದೆ. ಆದರೆ, ಷೇರು ಮಾರುಕಟ್ಟೆಯ ರೀಟೇಲ್ ಹೂಡಿಕೆದಾರರಿಗೆ ಟ್ಯಾಕ್ಸ್ ಹೊರೆ ಹೆಚ್ಚು ಇದೆ. ಎರಡು ವರ್ಷದ ಹಿಂದಿನ ಬಜೆಟ್ನಲ್ಲಿ ಸರ್ಕಾರ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ. 12.5ಕ್ಕೆ ಏರಿಸಿತ್ತು. ಅದರ ಜೊತೆಗೆ, ವಿನಾಯಿತಿ ಮಿತಿಯನ್ನು 1 ಲಕ್ಷ ರೂನಿಂದ 1.25 ಲಕ್ಷ ರೂಗೂ ಏರಿಸಿತ್ತು. ಈಗ ಎಲ್ಟಿಸಿಜಿ ಟ್ಯಾಕ್ಸ್ ಅನ್ನು ಕಡಿಮೆಗೊಳಿಸಲಿ ಮತ್ತು ಎಕ್ಸೆಂಪ್ಷನ್ ಲಿಮಿಟ್ ಏರಲಿ ಎಂದು ರೀಟೇಲ್ ಹೂಡಿಕೆದಾರರು ಬಯಸುತ್ತಿದ್ದಾರೆ. ಎಲ್ಟಿಸಿಜಿಯನ್ನು ಕಡಿಮೆ ಮಾಡಿದರೆ ದೀರ್ಘಾವಧಿ ಹೂಡಿಕೆಗೆ ಉತ್ತೇಜನ ಸಿಕ್ಕಬಹುದು.
ಇದನ್ನೂ ಓದಿ: ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್ನಲ್ಲಿ ಈಡೇರುತ್ತಾ?
ಷೇರು ಖರೀದಿಸಿ 12 ತಿಂಗಳ ನಂತರ ಮಾರಿದರೆ ಅದಕ್ಕೆ ಎಲ್ಟಿಸಿಜಿ ಅನ್ವಯ ಆಗುತ್ತದೆ. 12 ತಿಂಗಳ ಒಳಗೆ ಮಾರಿದರೆ, ಅದಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಸದ್ಯ ಎಸ್ಟಿಸಿಜಿ ಷೇರುಗಳಿಗೆ ಶೇ. 20ರಷ್ಟಿದೆ. ಷೇರುಗಳು, ಈಕ್ವಿಟಿ ಫಂಡ್ಗಳಿಗೆ ಶೇ. 20 ಎಲ್ಟಿಸಿಜಿ ಇದೆ. ಬೇರೆ ಆಸ್ತಿಗಳ ಮಾರಾಟದಿಂದ ಬಂದ ಲಾಭವಾದರೆ ಅದು ವ್ಯಕ್ತಿಯ ಆದಾಯ ತೆರಿಗೆ ಸ್ಲಾಬ್ ದರಗಳು ಅನ್ವಯ ಆಗುತ್ತದೆ.
ಕಳೆದ ಕೆಲ ವರ್ಷಗಳಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಮುಖ್ಯ ಶಕ್ತಿಯಾಗಿರುವುದು ಸರ್ಕಾರದ ಬಂಡವಾಳ ವೆಚ್ಚ. ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಗಳಿಗೆ ಸರ್ಕಾರದಿಂದ ಸಾಕಷ್ಟು ಬಂಡವಾಳ ವೆಚ್ಚ ಬೇಕಾಗುತ್ತದೆ. ಹಾಗೆಯೇ, ಡಿಫೆನ್ಸ್, ವಿದ್ಯುತ್, ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲೂ ಸರ್ಕಾರದಿಂದ ಹಣ ಹರಿದುಹೋಗಬೇಕಾಗುತ್ತದೆ. ಆರ್ಥಿಕ ಪ್ರಗತಿಗೆ ಕಾರಣವಾಗುವ ಸೆಕ್ಟರ್ಗಳಿಗೆ ಬಜೆಟ್ನಲ್ಲಿ ಎಷ್ಟು ಮಹತ್ವ ಕೊಡಲಾಗುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ.
ಇದನ್ನೂ ಓದಿ: ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಹೆಲ್ತ್ಕೇರ್ ಉದ್ಯಮದ ಬಜೆಟ್ ನಿರೀಕ್ಷೆಗಳು…
ಸರ್ಕಾರವು ವಿತ್ತೀಯ ಕೊರತೆ ಅಥವಾ ಫಿಸ್ಕಲ್ ಡೆಫಿಸಿಟ್ ಅನ್ನು ತಗ್ಗಿಸುವತ್ತ ಗಮನ ಕೊಡುತ್ತಿದೆ. ಸಾಲವನ್ನೂ ಕೂಡ ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ. ಮುಂದಿನ ಐದಾರು ವರ್ಷದಲ್ಲಿ ಸಾಲವು ದೇಶದ ಜಿಡಿಪಿಯ ಶೇ. 50ಕ್ಕಿಂತ ಕಡಿಮೆ ಇರಲಾಗುವಂತೆ ಸರ್ಕಾರ ಗುರಿ ಇಟ್ಟಿದೆ. ಈ ರೀತಿ ಸರ್ಕಾರವು ಆರ್ಥಿಕ ಶಿಸ್ತು ಕಾಯ್ದುಕೊಂಡಾಗ ವಿದೇಶೀ ಹೂಡಿಕೆದಾರರು ದೇಶದ ಮಾರುಕಟ್ಟೆಗೆ ಬರುವುದು ಹೆಚ್ಚಾಗುತ್ತದೆ. ಹೂಡಿಕೆಗಳು ಹೆಚ್ಚಾದಾಗ ಮಾರುಕಟ್ಟೆ ಬೆಳೆಯುತ್ತದೆ, ಹೆಚ್ಚು ರಿಟರ್ನ್ಸ್ ಕೊಡುತ್ತದೆ. ಹೀಗಾಗಿ, ಬಜೆಟ್ನಲ್ಲಿ ಫಿಸ್ಕಲ್ ಡೆಫಿಸಿಟ್ಗೆ ಸರ್ಕಾರ ಎಷ್ಟು ಗುರಿ ಇಟ್ಟಿದೆ ಎಂದು ಗಮನಿಸಬೇಕಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ