Green energy corridor: 12 ಸಾವಿರ ಕೋಟಿ ರೂಪಾಯಿಯ ಗ್ರೀನ್ ಎನರ್ಜಿ ಕಾರಿಡಾರ್​ಗೆ ಕೇಂದ್ರ ಸಂಪುಟದ ಅನುಮೋದನೆ

| Updated By: Srinivas Mata

Updated on: Jan 06, 2022 | 5:59 PM

ಕೇಂದ್ರ ಸಚಿವ ಸಂಪುಟವು 12 ಸಾವಿರ ಕೋಟಿ ರೂಪಾಯಿಯ ಗ್ರೀನ್ ಎನರ್ಜಿ ಕಾರಿಡಾರ್​ಗೆ ಗುರುವಾರದಂದು ಅನುಮೋದನೆಯನ್ನು ನೀಡಿದೆ.

Green energy corridor: 12 ಸಾವಿರ ಕೋಟಿ ರೂಪಾಯಿಯ ಗ್ರೀನ್ ಎನರ್ಜಿ ಕಾರಿಡಾರ್​ಗೆ ಕೇಂದ್ರ ಸಂಪುಟದ ಅನುಮೋದನೆ
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಸಚಿವ ಸಂಪುಟವು 12,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತರ ರಾಜ್ಯ ಪ್ರಸರಣ ವ್ಯವಸ್ಥೆಯ ಎರಡನೇ ಹಂತದ ಗ್ರೀನ್ ಎನರ್ಜಿ ಕಾರಿಡಾರ್ ಅನ್ನು ಅನುಮೋದಿಸಿದೆ. ಈ ಯೋಜನೆಯು ದೇಶದಾದ್ಯಂತ 10,750 ಕಿಲೋಮೀಟರ್ ಉದ್ದದ ಸರ್ಕ್ಯೂಟ್ ಟ್ರಾನ್ಸ್‌ಮಿಷನ್ ಲೈನ್‌ಗಳನ್ನು ನಿರ್ಮಿಸುವುತ್ತದೆ ಮತ್ತು 20 GW (ಗಿಗಾವ್ಯಾಟ್) ವಿದ್ಯುತ್ ತೆರವು ಮಾಡಲು ಸಹಾಯ ಮಾಡುತ್ತದೆ. ತಮಿಳುನಾಡು, ಗುಜರಾತ್, ಕೇರಳ, ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಏಳು ರಾಜ್ಯಗಳು 2025-26ರವರೆಗೆ ಐದು ವರ್ಷಗಳ ಕಾಲ ಈ ಯೋಜನೆಯಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

10,142 ಕೋಟಿ ರೂಪಾಯಿಗಳ ಈ ಹಂತವು ಶೇ 80ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಈ ಯೋಜನೆಯು 2030ರ ವೇಳೆಗೆ 500 GW ನವೀಕರಿಸಬಹುದಾದ (ರಿನೀವಬಲ್) ಇಂಧನವನ್ನು ಉತ್ಪಾದಿಸುವ ಭಾರತದ ಯೋಜನೆಗಳ ನಿರ್ಣಾಯಕ ಅಂಶವಾಗಿದೆ. ಜರ್ಮನ್ ಸರ್ಕಾರಿ ಸ್ವಾಮ್ಯದ ಹೂಡಿಕೆ ಮತ್ತು ಅಭಿವೃದ್ಧಿ ಬ್ಯಾಂಕ್ ಗುಂಪು KfW ಯೋಜನೆಗೆ ಸಾಲಗಳನ್ನು ಒದಗಿಸುತ್ತದೆ. ಇದು ವಿಶ್ವದ ಅತಿದೊಡ್ಡ ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್ ಆಗಿದೆ.

ನೇಪಾಳವನ್ನು ಸಂಪರ್ಕಿಸುವ ಸೇತುವೆ
ನೇಪಾಳದ ಗಡಿಯಲ್ಲಿ ಮಹಾಕಾಳಿ ನದಿಗೆ ಸೇತುವೆ ನಿರ್ಮಾಣಕ್ಕೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಉತ್ತರಾಖಂಡದ ಎತ್ತರದ ಧಾರ್ಚುಲಾ ಪ್ರದೇಶದಲ್ಲಿ ನಿರ್ಮಾಣ ಆಗಲಿರುವ ಈ ಸೇತುವೆಯು ಅಂತರಾಷ್ಟ್ರೀಯ ಗಡಿಯಾಗಿ ಕಾರ್ಯ ನಿರ್ವಹಿಸುವ ನದಿಯ ಎರಡೂ ಬದಿಗಳಲ್ಲಿ ವಾಸಿಸುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ, ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಧಾರ್ಚುಲಾ ಪಟ್ಟಣವನ್ನು ನೇಪಾಳದ ಅದೇ ಹೆಸರಿನ ನಗರದೊಂದಿಗೆ ಸಂಪರ್ಕಿಸುವ ಹಳೆಯ ಸೇತುವೆ ಇದೆ.

ಇದನ್ನೂ ಓದಿ: PM MITRA ₹4,445 ಕೋಟಿ ವೆಚ್ಚದಲ್ಲಿ 7 ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ

Published On - 5:57 pm, Thu, 6 January 22