AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಮತ್ತು ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡುವ 16ನೇ ಹಣಕಾಸು ಆಯೋಗದ ನಿಬಂಧನೆಗಳಿಗೆ ಕ್ಯಾಬಿನೆಟ್ ಅನುಮೋದನೆ

16th Finance commission: ಪ್ರಧಾನಿ ನೇತೃತ್ವದ ಕೇಂದ್ರ ಸಂಪುಟವು 16ನೇ ಹಣಕಾಸು ಆಯೋಗದ ಟರ್ಮ್ಸ್ ಆಫ್ ರೆಫರೆನ್ಸ್​ಗೆ ಅನುಮೋದನೆ ನೀಡಿದೆ. ದೇಶಾದ್ಯಂತ ಸಿಕ್ಕಿದ ತೆರಿಗೆ ಆದಾಯವನ್ನು ಕೇಂದ್ರ ಹಾಗೂ ರಾಜ್ಯಗಳಿಗೆ ಹೇಗೆ ಹಂಚಿಕೆ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ವಿಚಾರಗಳಲ್ಲಿ ಈ ಆಯೋಗ ಶಿಫಾರಸು ಮಾಡಬಹುದು. 2026ರ ಏಪ್ರಿಲ್ 1ರಿಂದ ಆರಂಭವಾಗಿ 5 ವರ್ಷ ಕಾಲ 16ನೇ ಹಣಕಾಸು ಆಯೋಗದ ನಿಬಂಧನೆಗಳು ಅಥವಾ ಶಿಫಾರಸುಗಳು ಮಾನ್ಯವಾಗಿರುತ್ತವೆ.

ಕೇಂದ್ರ ಮತ್ತು ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡುವ 16ನೇ ಹಣಕಾಸು ಆಯೋಗದ ನಿಬಂಧನೆಗಳಿಗೆ ಕ್ಯಾಬಿನೆಟ್ ಅನುಮೋದನೆ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 29, 2023 | 5:39 PM

ನವದೆಹಲಿ, ನವೆಂಬರ್ 29: ಮಹತ್ವದ ಹೆಜ್ಜೆಯಲ್ಲಿ 16ನೇ ಹಣಕಾಸು ಆಯೋಗದ ನಿಬಂಧನೆಗಳಿಗೆ (Terms of Reference for 16th Finance Commission) ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಇದೂ ಸೇರಿದಂತೆ ವಿವಿಧ ಯೋಜನೆ ಮತ್ತು ಪ್ರಸ್ತಾಪಗಳಿಗೆ ಸಮ್ಮತಿ ನೀಡಲಾಗಿದೆ. ಮುಂದೆ ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಈ 16ನೇ ಹಣಕಾಸು ಆಯೋಗ ಶಿಫಾರಸುಗಳನ್ನು (recommendations) ಮಾಡಬಹುದು. 2026ರ ಏಪ್ರಿಲ್ 1ರಿಂದ ಆರಂಭವಾಗಿ ಐದು ವರ್ಷ ಅವಧಿಗೆ ಪ್ರಧಾನಿ ಅನುಮೋದನೆಗೆ ಬದ್ಧವಾಗಿ ಈ ಆಯೋಗದ ಶಿಫಾರಸುಗಳು ಮಾನ್ಯವಾಗಿರುತ್ತವೆ.

ಸದ್ಯ 15ನೇ ಹಣಕಾಸು ಆಯೋಗದ ನಿಯಮಗಳು 2025-26ರ ಹಣಕಾಸು ವರ್ಷದವರೆಗೂ ಮಾನ್ಯವಾಗಿರುತ್ತವೆ. ಅದಾದ ಬಳಿಕ 16ನೇ ಹಣಕಾಸು ಆಯೋಗದ ಶಿಫಾರಸುಗಳು ಗಣನೆಗೆ ಬರುತ್ತವೆ. ಹಣಕಾಸು ಆಯೋಗವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತೆರಿಗೆ ಆದಾಯದಲ್ಲಿ ಎಷ್ಟು ಪಾಲು ಹಂಚಿಕೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತದೆ.

ಇದನ್ನೂ ಓದಿ: 81 ಕೋಟಿ ಬಡವರಿಗೆ ಉಚಿತ ಪಡಿತರ ವಿತರಣೆ; 5 ವರ್ಷ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ

16ನೇ ಹಣಕಾಸು ಆಯೋಗದ ನಿಬಂಧನೆಗಳೇನು?

ತೆರಿಗೆ ಆದಾಯವನ್ನು ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೆ ಮಾಡಲು ಸೂತ್ರ ರೂಪಿಸುವುದು ಸೇರಿದಂತೆ ಕೆಲವೊಂದಿಷ್ಟು ಸಂಗತಿಗಳಲ್ಲಿ ಶಿಫಾರಸು ಮಾಡಲು 15ನೇ ಹಣಕಾಸು ಆಯೋಗವು ಅಧಿಕಾರ ಹೊಂದಿರುತ್ತದೆ. ಆದರೆ, ಆಯೋಗದ ಶಿಫಾರಸು ಜಾರಿಯಾಗಬೇಕಾದರೆ ಪ್ರಧಾನಿಯ ಅನುಮೋದನೆ ಬೇಕಾಗುತ್ತದೆ.

ಇದನ್ನೂ ಓದಿ: Jeevan Utsav: ಎಲ್​ಐಸಿಯಿಂದ ಇಂದು ಹೊಸ ಜೀವನ್ ಉತ್ಸವ್ ಪಾಲಿಸಿ ಬಿಡುಗಡೆ; ಇದರ ವಿಶೇಷತೆಗಳೇನು?

ಸಾಮಾನ್ಯವಾಗಿ ಹಣಕಾಸು ಆಯೋಗವು ವರದಿ ಪ್ರಸ್ತುತಪಡಿಸಲು 2 ವರ್ಷ ಬೇಕಾಗುತ್ತದೆ. ಇಂದು ಸುದ್ದಿಗೋಷ್ಠಿಯಲ್ಲಿ ಸಚಿವ ಅನುರಾಗ್ ಠಾಕೂರ್ ನೀಡಿದ ಮಾಹಿತಿ ಪ್ರಕಾರ 16ನೇ ಹಣಕಾಸು ಆಯೋಗವು ತನ್ನ ವರದಿಯನ್ನು 2025ರ ಅಕ್ಟೋಬರ್​ನೊಳಗೆ ಸಲ್ಲಿಸಲಿದೆ. ಅದು ಮಾಡುವ ಶಿಫಾರಸುಗಳು 2026ರ ಏಪ್ರಿಲ್​ನಿಂದ ಚಾಲನೆಗೆ ಬರಲಿದ್ದು ಅಲ್ಲಿಂದ 5 ವರ್ಷ ಮಾನ್ಯವಾಗಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Wed, 29 November 23

ಕಾಶ್ಮೀರದ ಶೋಪಿಯಾನ್​ನಲ್ಲಿ ಮೂವರು ಲಷ್ಕರ್ ಉಗ್ರರ ಎನ್​ಕೌಂಟರ್
ಕಾಶ್ಮೀರದ ಶೋಪಿಯಾನ್​ನಲ್ಲಿ ಮೂವರು ಲಷ್ಕರ್ ಉಗ್ರರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು