ನವದೆಹಲಿ: ಯುವ ಶಕ್ತಿಯ ಉದ್ಯಮಶೀಲತಾ ಉತ್ಸಾಹ ಹಾಗೂ ಹೊಸ ಆಲೋಚನೆಗಳಿಂದ ಬಲ ಪಡೆದ ಭಾರತ ಹೊಸ ಹಂತಕ್ಕೆ ಕಾಲಿಡುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Union Education Minister Dharmendra Pradhan) ಅಭಿಪ್ರಾಯಪಟ್ಟಿದ್ದಾರೆ. ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿ ಮತ್ತು ಐಆರ್ಎಂಎ ಐಸೀಡ್ ಫೌಂಡೇಶನ್ (IRMA iSeed Foundation) ವತಿಯಿಂದ ಆಯೋಜಿಸಲಾಗಿದ್ದ ಎರಡನೇ ಆವೃತ್ತಿಯ ಸೋಷಿಯಲ್ ಟ್ರೇಲ್ಬ್ಲೇಜರ್ (Social Trailblazer) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಧರ್ಮೇಂದ್ರ ಪ್ರಧಾನ್, ತಳಮಟ್ಟದಲ್ಲಿ ಸಾಮಾಜಿಕ ಉದ್ಯಮಶೀಲತಾ ವ್ಯವಸ್ಥೆಗೆ ಉತ್ತೇಜನ ತುಂಬುವ ಕೆಲಸವಾಗಬೇಕು ಎಂದಿದ್ದಾರೆ.
20 ಸಾಮಾಜಿಕ ಉದ್ದಿಮೆದಾರರನ್ನು ಸೃಷ್ಟಿಸಿ ಸಮಾಧಾನಗೊಳ್ಳಬಾರದು ಎಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಗೆ ತಿಳಿಹೇಳಿದ ಕೇಂದ್ರ ಸಚಿವರು, ಸೋಷಿಯಲ್ ಟ್ರೇಲ್ಬ್ಲೇಜರ್ನಂತಹ ನವೀನ ಕಾರ್ಯಕ್ರಮಗಳು ಸಮಾಜಕ್ಕೆ ಒಳಿತು ಮಾಡುವ ಯುವಸಮುದಾಯದ ಪ್ರಯತ್ನಗಳಿಗೆ ಶಕ್ತಿ ತುಂಬಬಲ್ಲುವು ಎಂದಿದ್ದಾರೆ. ಹಾಗೆಯೇ, ಎಲ್ಐಸಿ ಎಚ್ಎಫ್ಎಲ್ ಮತ್ತು ಐಆರ್ಎಂಎ ಈ ಎರಡೂ ಸಂಸ್ಥೆಗಳು ಸರಿಯಾದ ಜಾಗದಲ್ಲಿ ಒಟ್ಟಿಗೆ ಸೇರಿರುವುದನ್ನು ಧರ್ಮೇಂದ್ರ ಪ್ರಧಾನ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Inspiring: ಕಾಲೇಜು ಶುಲ್ಕ ಕಟ್ಟಲು ಚಹಾ ಮಾರುತ್ತಿದ್ದ ವಿಜಯ್ ಇವತ್ತು ಸಾವಿರ ಕೋಟಿ ರೂ ರಾಯಲ್ ಓಕ್ ಒಡೆಯ
‘ಐಆರ್ಎಂಎ ಮತ್ತು ಎಲ್ಐಸಿ ಎಚ್ಎಫ್ಎಲ್ ಸಂಸ್ಥೆಗಳು ಸಾಮಾಜಿಕ ಉದ್ದಿಮೆಗಳಿಗೆ ಸಹಾಯವಾಗಲು ಒಟ್ಟಿಗೆ ಪ್ರಯತ್ನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಯುವ ಶಕ್ತಿಯ ಉದ್ಯಮಶೀಲತಾ ಶಕ್ತಿಯೊಂದಿಗೆ ನವ ಭಾರತ ಹೊಸ ಹಂತಕ್ಕೆ ಪ್ರವೇಶಿಸುತ್ತದೆ. ಇಂಥ ಅನನ್ಯ ಕಾರ್ಯಕ್ರಮಗಳು ಯುವಜನರ ಸಮಾಜಸೇವಾ ಕೈಂಕರ್ಯಕ್ಕೆ ಹೊಸ ಉತ್ಸಾಹ ತುಂಬುತ್ತದೆ’ ಎಂದು ಕೇಂದ್ರ ಶಿಕ್ಷಣ ಸಚಿವರೂ ಆದ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
Speaking at the Social Enterprise Conclave by @iseedirma and @LIC_HFL. https://t.co/itqct3U7Fb
— Dharmendra Pradhan (@dpradhanbjp) July 4, 2023
ಈ ಕಾರ್ಯಕ್ರಮದಲ್ಲಿ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉಮಾಕಾಂತ್ ದಾಶ್ ಹಾಗೂ ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯ ಸಿಇಒ ಮತ್ತು ಎಂಡಿ ವೈ ವಿಶ್ವನಾಥ್ ಗೌಡ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: Jio Bharat: 999 ರೂ ಬೆಲೆಯ ಜಿಯೋ ಭಾರತ್ ಫೋನ್; 10ಕೋಟಿ 2ಜಿ ಗ್ರಾಹಕರ ಸೆಳೆಯುವ ನಿರೀಕ್ಷೆ; ಷೇರುಪೇಟೆಯಲ್ಲಿ ಏರ್ಟೆಲ್ ತತ್ತರ
ಎಲ್ಐಸಿ ಎಚ್ಎಫ್ಎಲ್ ಮತ್ತು ಐಆರ್ಎಂಎ ಸಂಸ್ಥೆಗಳು ಒಟ್ಟುಗೂಡಿ ನಡೆಸುತ್ತಿರುವ ಸೋಷಿಯಲ್ ಟ್ರೇಲ್ಬ್ಲೇಜರ್ ಕಾರ್ಯಕ್ರಮವು ದೇಶದ ಯುವ ಸಮುದಾಯದವರಲ್ಲಿ ಸಾಮಾಜಿಕ ಕಾಳಜಿ ಇರುವ ಉದ್ಯಮಶೀಲತೆಗೆ ಉತ್ತೇಜನ ತುಂಬುವ ಉದ್ದೇಶ ಹೊಂದಿದೆ. ಆರೋಗ್ಯ, ಕಸತ್ಯಾಜ್ಯ ನಿರ್ವಹಣೆ, ಸ್ವಚ್ಛ ಇಂಧನ, ಕೃಷಿ ವ್ಯವಹಾರ, ಶಿಕ್ಷಣ, ಕೌಶಲ್ಯ ಅಭಿವೃದ್ದಿ ಕ್ಷೇತ್ರಗಳಲ್ಲಿ ನವ ಉದ್ದಿಮೆದಾರರನ್ನು ಬೆಳೆಸುವುದು ಈ ಕಾರ್ಯಕ್ರಮದ ಗುರಿ ಎಂದೆನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ