AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Bharat: 999 ರೂ ಬೆಲೆಯ ಜಿಯೋ ಭಾರತ್ ಫೋನ್; 10ಕೋಟಿ 2ಜಿ ಗ್ರಾಹಕರ ಸೆಳೆಯುವ ನಿರೀಕ್ಷೆ; ಷೇರುಪೇಟೆಯಲ್ಲಿ ಏರ್​ಟೆಲ್ ತತ್ತರ

4G Phone For 2G Subscribers: 4ಜಿ ಎನೇಬಲ್ ಆಗಿರುವ 999 ರೂ ಬೆಲೆಯ ಜಿಯೋ ಭಾರತ್ ಫೋನ್ ಅನಾವರಣಗೊಂಡಿದ್ದು, ವೊಡಾಫೋನ್ ಮತ್ತು ಏರ್ಟೆಲ್​ನ 21 ಕೋಟಿ 2ಜಿ ಗ್ರಾಹಕರಲ್ಲಿ ಅರ್ಧದಷ್ಟು ಮಂದಿಯನ್ನು ಸೆಳೆಯುವ ನಿರೀಕ್ಷೆ ಇದೆ.

Jio Bharat: 999 ರೂ ಬೆಲೆಯ ಜಿಯೋ ಭಾರತ್ ಫೋನ್; 10ಕೋಟಿ 2ಜಿ ಗ್ರಾಹಕರ ಸೆಳೆಯುವ ನಿರೀಕ್ಷೆ; ಷೇರುಪೇಟೆಯಲ್ಲಿ ಏರ್​ಟೆಲ್ ತತ್ತರ
ಜಿಯೋ ಭಾರತ್ ಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 04, 2023 | 5:59 PM

Share

ನವದೆಹಲಿ: ರಿಲಾಯನ್ಸ್ ಜಿಯೋ 2 ಜಿ ಗ್ರಾಹಕರನ್ನು ಸೆಳೆಯುವ ಕಸರತ್ತಿನಲ್ಲಿ ಹೊಸ ಪ್ರಯೋಗ ಮಾಡಿದೆ. ಸ್ಮಾರ್ಟ್​ಫೋನ್​ನಲ್ಲಿಯಂತೆ ಸೌಲಭ್ಯಗಳಿರುವ ಫೀಚರ್ ಫೋನ್ ಅನ್ನು ಜಿಯೋ ಹಿಂದೆ (2018ರಲ್ಲಿ) ಬಿಡುಗಡೆ ಮಾಡಿತ್ತು. ಇದು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಇದೀಗ ಪ್ರಯತ್ನ ಮುಂದುವರಿಸಿರುವ ರಿಲಾಯನ್ಸ್, ಜಿಯೋ ಭಾರತ್ (Jio Bharat) ಎಂಬ ಹೊಸ ಫೋನ್ ಅನ್ನು ಅನಾವರಣಗೊಳಿಸಿದೆ. ಇದರ ಬೆಲೆ ಕೇವಲ 999 ರೂ ಆಗಿದೆ. ತಜ್ಞರ ಪ್ರಕಾರ ಟೆಲಿಕಾಂ ಮಾರುಕಟ್ಟೆಯಲ್ಲಿ ಈ ಫೋನ್ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಜಿಯೋ ಪ್ರತಿಸ್ಪರ್ಧಿ ಭಾರ್ತಿ ಏರ್ಟೆಲ್ (Bharti Airtel) ಕಂಪನಿಯ ಷೇರುಗಳ ಬೆಲೆ ದಿಢೀರನೇ ಕುಸಿಯತೊಡಗಿದೆ.

ಜಿಯೋ ಭಾರತ್ ಫೋನ್ 4ಜಿ ಶಕ್ತವಾಗಿದ್ದು, 2ಜಿ ಬೆಲೆಗೆ 4ಜಿ ಸೇವೆಗಳನ್ನು ನೀಡಬಲ್ಲುದು. 28 ದಿನಗಳ ರೀಚಾರ್ಜ್ ಪ್ಲಾನ್ 123 ರೂ ಇದ್ದು, ಇದರಲ್ಲಿ 14ಜಿಬಿಯಷ್ಟು 4ಜಿ ಡಾಟಾ ಕೊಡಲಾಗುತ್ತದೆ. ಜಿಯೋಯೇತರ ಯಾವುದೇ ಟೆಲಿಕಾಂ ಕಂಪನಿಗಳಿಗಿಂತ ತೀರಾ ಅಗ್ಗದ ದರದಲ್ಲಿ ರೀಚಾರ್ಜ್ ಪ್ಲಾನ್​ಗಳನ್ನು ಜಿಯೋ ಭಾರತ್​ಗೆ ಒದಗಿಸಲಾಗುತ್ತಿದೆ.

ಇದನ್ನೂ ಓದಿ: Jio Bharat 4G: ಯಾವುದೇ ಸೂಚನೆಯಿಲ್ಲದೆ ಕೇವಲ 999 ರೂ. ಗೆ ಜಿಯೋ ಭಾರತ್ 4G ಫೋನ್ ಬಿಡುಗಡೆ ಮಾಡಿದ ಜಿಯೋ

2018ರಲ್ಲಿ ಬಂದ ಜಿಯೋ ಫೋನ್​ಗಿಂತಲೂ ಈಗ ಬಿಡುಗಡೆ ಆಗಿರುವ ಜಿಯೋ ಭಾರತ್ ಫೋನ್ ಹೆಚ್ಚು ಯಶಸ್ಸು ಸಾಧಿಸುವ ನಿರೀಕ್ಷೆ ಇದೆ. 2ಜಿ ಗ್ರಾಹಕರೇ ಈ ಫೋನ್​ನ ಟಾರ್ಗೆಟ್ ಆಗಿದೆ. ವೊಡಾಫೋನ್ ಐಡಿಯಾ ಸುಮಾರು 10.3 ಕೋಟಿಯಷ್ಟು 2ಜಿ ಗ್ರಾಹಕರನ್ನು ಹೊಂದಿದೆ. ಏರ್ಟೆಲ್ 11.1 ಕೋಟಿ 2ಜಿ ಗ್ರಾಹಕರನ್ನು ಹೊಂದಿದೆ. ಈಗ 1,000 ರೂ ಒಳಗಿನ ಜಿಯೋ ಭಾರತ್ ಫೋನ್ ಬಂದ ಬಳಿಕ ವೊಡಾಫೋನ್ ಮತ್ತು ಏರ್ಟೆಲ್​ನಿಂದ ಬಹಳಷ್ಟು 2ಜಿ ಬಳಕೆದಾರರು ಜಿಯೋಗೆ ವಲಸೆ ಹೋಗುವ ಸಾಧ್ಯತೆ ದಟ್ಟವಾಗಿದೆ. ತಜ್ಞರ ಅಂದಾಜಿನ ಪ್ರಕಾರ 10 ಕೋಟಿಯಷ್ಟು 2ಜಿ ಗ್ರಾಹಕರನ್ನು ಜಿಯೋ ಸೆಳೆಯಬಹುದು ಎನ್ನಲಾಗಿದೆ.

ಇದನ್ನೂ ಓದಿ: Stock Market Advice: ಈಗ ಷೇರುಪೇಟೆ ಚಿಂತೆ ಬೇಡ; ನಿಯಮಿತ ಹೂಡಿಕೆಯತ್ತ ಗಮನ ಕೊಡಿ: ದೇವೇನ್ ಚೋಕ್ಸಿ ಸಲಹೆಗಳಿವು

ಕುಸಿಯುತ್ತಿರುವ ಏರ್ಟೆಲ್ ಷೇರು ಬೆಲೆ

ಜಿಯೋ ಭಾರತ್ ಫೋನ್​ನಿಂದಾಗಿ ಏರ್ಟೆಲ್​ನ ಶೇ. 40ರಷ್ಟು 2ಜಿ ಗ್ರಾಹಕರು ನಿರ್ಗಮಿಸಿದರೂ ಅದು ಆದಾಯಕ್ಕೆ ತಕ್ಕಮಟ್ಟಕ್ಕಾದರೂ ಕುತ್ತು ಕೊಟ್ಟಂತಾಗುತ್ತದೆ. ಈ ಸಾಧ್ಯತೆ ಗೋಚರಿಸುತ್ತಲೇ ಷೇರುಪೇಟೆಯಲ್ಲಿ ಭಾರ್ತಿ ಏರ್ಟೆಲ್ ಕಂಪನಿಯ ಷೇರು ಬೆಲೆ ಜುಲೈ 4ರಂದು ಸುಮಾರು 13 ರುಪಾಯಿಯಷ್ಟು ಕುಸಿದಿದೆ. 879.15 ರೂ ಇದ್ದ ಅದರ ಷೇರುಬೆಲೆ ಇದೀಗ 866 ರೂಗೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಪತ್ನಿ ಉಷಾ, ಕುಟುಂಬಸ್ಥರ ಜೊತೆಗೆ ಆಯುಧ ಪೂಜೆ ಮಾಡಿದ ಸಿಎಂ ಡಿಕೆ ಶಿವಕುಮಾರ್
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು