US Tariffs list: ಮಿತ್ರದೇಶಗಳಿಗೂ ಟ್ರಂಪ್ ಟ್ಯಾರಿಫ್ ಬರೆ; ವಿವಿಧ ದೇಶಗಳಿಗೆ ಅಮೆರಿಕ ವಿಧಿಸಿದ ಸುಂಕಗಳ ಪಟ್ಟಿ

Countrywise list of US tariffs: ಆಗಸ್ಟ್ 1, ಶುಕ್ರವಾರದಿಂದ ಜಾರಿಯಾಗುವಂತೆ ಅಮೆರಿಕವ ವಿವಿಧ ದೇಶಗಳ ಮೇಲೆ ಟ್ಯಾರಿಫ್ ದರಗಳನ್ನು ಪ್ರಕಟಿಸಿದೆ. ಯೂರೋಪಿಯನ್ ಯೂನಿಯನ್, ಯುಕೆ ಇತ್ಯಾದಿ ದೇಶಗಳಿಗೆ ಅತಿಕಡಿಮೆ ಸುಂಕ ವಿಧಿಸಲಾಗಿದೆ. ಭಾರತದ ನೆರೆಯ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ, ಮಾರಿಷಸ್​ಗೆ ಭಾರತದಕ್ಕಿಂತ ಕಡಿಮೆ ಟ್ಯಾರಿಫ್ ಅನ್ನು ಅಮೆರಿಕ ಹಾಕಿದೆ.

US Tariffs list: ಮಿತ್ರದೇಶಗಳಿಗೂ ಟ್ರಂಪ್ ಟ್ಯಾರಿಫ್ ಬರೆ; ವಿವಿಧ ದೇಶಗಳಿಗೆ ಅಮೆರಿಕ ವಿಧಿಸಿದ ಸುಂಕಗಳ ಪಟ್ಟಿ
ಡೊನಾಲ್ಡ್ ಟ್ರಂಪ್

Updated on: Aug 01, 2025 | 12:54 PM

ನವದೆಹಲಿ, ಆಗಸ್ಟ್ 1: ಡೊನಾಲ್ಡ್ ಟ್ರಂಪ್ (Donald Trump) ಅವರು 68 ದೇಶ ಅಥವಾ ಗುಂಪಿನ ಸರಕುಗಳ ಮೇಲೆ ಆಮದು ಸುಂಕವನ್ನು ಪ್ರಕಟಿಸಿದ್ದಾರೆ. ಆಗಸ್ಟ್ 1, ಇಂದಿನಿಂದ ಈ ಪರಿಷ್ಕೃತ ಟ್ಯಾರಿಫ್ ದರಗಳು ಅನ್ವಯ ಆಗುತ್ತಿವೆ. ಇದರಲ್ಲಿ 27 ದೇಶಗಳಿರುವ ಐರೋಪ್ಯ ಒಕ್ಕೂಟವೂ ಸೇರಿದೆ. ಅತ್ಯಧಿಕ ಸುಂಕ ವಿಧಿಸಲಾದ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಅಮೆರಿಕದ ಮಿತ್ರವೃಂದದಲ್ಲಿರುವ ದೇಶಗಳಿಗೂ ಅಧಿಕ ಟ್ಯಾರಿಫ್ ಬಿಟ್ಟಿಲ್ಲ. ಅಮೆರಿಕಕ್ಕೆ ವಿರುದ್ಧವಾಗಿರುವ ದೇಶಗಳು, ಹಾಗೂ ಅಮೆರಿಕದೊಂದಿಗೆ ಟ್ರೇಡ್ ಸರ್​ಪ್ಲಸ್ ಇರುವ ದೇಶಗಳಿಗೆ ಹೆಚ್ಚಿನ ಆಮದು ಸುಂಕವನ್ನು ವಿಧಿಸಲಾಗಿದೆ.

ಸಿರಿಯಾ ದೇಶಕ್ಕೆ ಗರಿಷ್ಠ ಶೇ. 41ರಷ್ಟು ಸುಂಕ ಹಾಕಲಾಗಿದೆ. ಮಯನ್ಮಾರ್, ಲಾವೋಸ್, ಸ್ವಿಟ್ಜರ್​ಲ್ಯಾಂಡ್, ಇರಾಕ್ ಮೊದಲಾದ ದೇಶಗಳೂ ಅಧಿಕ ಟ್ಯಾರಿಫ್ ಸಾಲಿಗೆ ಬರುತ್ತವೆ.

ಇದನ್ನೂ ಓದಿ: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿ ಶಾಪ

ಇದನ್ನೂ ಓದಿ
ಅಮೆರಿಕದ ಎಫ್-35 ಯುದ್ಧವಿಮಾನ ಖರೀದಿಸುತ್ತಿಲ್ಲ ಭಾರತ
‘ಸತ್ತ ಆರ್ಥಿಕತೆ’ ಎಂದು ಹೇಳಿ ಟ್ರೋಲ್ ಆದ ರಾಹುಲ್ ಗಾಂಧಿ
ಪಾಕಿಸ್ತಾನಕ್ಕೆ ಟ್ರಂಪ್ ಆಯಿಲ್ ಡೀಲ್; ಏನಿದು ರಹಸ್ಯ?
ಭಾರತವನ್ನು ಸತ್ತ ಆರ್ಥಿಕತೆ ಎಂದು ನಿಂದಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕದಿಂದ ವಿವಿಧ ದೇಶಗಳಿಗೆ ಹೇರಿಕೆ ಮಾಡಲಾದ ಆಮದು ಸುಂಕಗಳ ಪಟ್ಟಿ

  1. ಸಿರಿಯಾ: ಶೇ. 41
  2. ಮಯನ್ಮಾರ್: ಶೇ. 40
  3. ಲಾವೋಸ್: ಶೇ. 40
  4. ಸ್ವಿಟ್ಜರ್​ಲ್ಯಾಂಡ್: ಶೇ. 39
  5. ಇರಾಕ್: ಶೇ. 35
  6. ಸರ್ಬಿಯಾ: ಶೇ. 35
  7. ಸೌತ್ ಆಫ್ರಿಕಾ: ಶೇ. 30
  8. ಲಿಬಿಯಾ: ಶೇ. 30
  9. ಆಲ್ಜೀರಿಯಾ: ಶೇ. 30
  10. ಬೋಸ್ನಿಯಾ ಹರ್ಜೆಗೋವಿನಾ: ಶೇ. 30
  11. ಭಾರತ: ಶೇ. 25
  12. ಬ್ರೂನೇ: ಶೇ. 25
  13. ಕಜಕಸ್ತಾನ್: ಶೇ. 25
  14. ಮಾಲ್ಡೋವಾ: ಶೇ. 25
  15. ಟುನಿಶಿಯಾ: ಶೇ. 25
  16. ಬಾಂಗ್ಲಾದೇಶ: ಶೇ. 20
  17. ಶ್ರೀಲಂಕಾ: ಶೇ. 20
  18. ತೈವಾನ್: ಶೇ. 20
  19. ವಿಯೆಟ್ನಾಂ: ಶೇ. 20
  20. ಪಾಕಿಸ್ತಾನ್: ಶೇ. 19
  21. ಇಂಡೋನೇಷ್ಯಾ: ಶೇ. 19
  22. ಥಾಯ್ಲೆಂಡ್: ಶೇ. 19
  23. ಕಾಂಬೋಡಿಯಾ: ಶೇ. 19
  24. ಮಲೇಷ್ಯಾ: ಶೇ. 19
  25. ಫಿಲಿಪ್ಪೈನ್ಸ್: ಶೇ. 19
  26. ನಿಕರಾಗುವಾ: ಶೇ. 18
  27. ಟರ್ಕಿ: ಶೇ. 15
  28. ಉಗಾಂಡ: ಶೇ. 15
  29. ಟ್ರಿನಿಡಾಡ್ ಟೊಬಾಗೊ: ಶೇ. 15
  30. ಸೌತ್ ಕೊರಿಯಾ: ಶೇ. 15
  31. ಪಪುವಾ ನ್ಯೂಗಿನಿಯಾ: ಶೇ. 15
  32. ನಾರ್ವೆ: ಶೇ. 15
  33. ನೈಜೀರಿಯ: ಶೇ. 15
  34. ನಾರ್ತ್ ಮಸಿಡೋನಿಯಾ: ಶೇ. 15
  35. ಮೊಜಾಂಬಿಕ್: ಶೇ. 15
  36. ಮಾರಿಷಸ್: ಶೇ. 15
  37. ಲೆಸೊತೋ: ಶೇ. 15
  38. ಲಿಕ್ಟನ್​ಸ್ಟೈನ್: ಶೇ. 15
  39. ಮಲಾವಿ: ಶೇ. 15
  40. ಇಸ್ರೇಲ್: ಶೇ. 15
  41. ಜಪಾನ್: ಶೇ. 15
  42. ನಮೀಬಿಯಾ: ಶೇ. 15
  43. ನೌರು: ಶೇ. 15
  44. ನ್ಯೂಜಿಲೆಂಡ್: ಶೇ. 15
  45. ಜೋರ್ಡಾನ್: ಶೇ. 15
  46. ಕ್ಯಾಮರೂನ್: ಶೇ. 15
  47. ಚಾಡ್: ಶೇ. 15
  48. ಕೋಸ್ಟರಿಕಾ: ಶೇ. 15
  49. ಕೋಟೆ ಡಿ ಐವೋರೆ: ಶೇ. 15
  50. ಕಾಂಗೋ ರಿಪಬ್ಲಿಕ್: ಶೇ. 15
  51. ಈಕ್ವಡರ್: ಶೇ. 15
  52. ಈಕ್ವಟೊರಿಯಲ್ ಗಿನಿಯಾ: ಶೇ. 15
  53. ಬೋಟ್ಸವಾನ: ಶೇ. 15
  54. ಬೊಲಿವಿಯಾ: ಶೇ. 15
  55. ಅಫ್ಗಾನಿಸ್ತಾನ್: ಶೇ. 15
  56. ಅಂಗೋಲ: ಶೇ. 15
  57. ಫಿಜಿ: ಶೇ 15
  58. ಘಾನಾ: ಶೇ. 15
  59. ಗಯಾನ: ಶೇ. 15
  60. ಐಸ್​ಲ್ಯಾಂಡ್: ಶೇ. 15
  61. ವನೋಟು:ಶೇ. 15
  62. ವೆನಿಜುವೆಲಾ: ಶೇ. 15
  63. ಜಾಂಬಿಯಾ: ಶೇ. 15
  64. ಜಿಂಬಾಬ್ವೆ: ಶೇ. 15
  65. ಬ್ರಿಟನ್: ಶೇ. 10
  66. ಬ್​ರೆಜಿಲ್: ಶೇ. 10
  67. ಫಾಲ್ಕ್​ಲ್ಯಾಂಡ್ ಐಲ್ಯಾಂಡ್ಸ್: ಶೇ. 10
  68. ಐರೋಪ್ಯ ಒಕ್ಕೂಟ: 0-15

ಇದನ್ನೂ ಓದಿ: ಅಮೆರಿಕದೊಂದಿಗೆ ಎಫ್-35 ಫೈಟರ್ ಜೆಟ್ ಡೀಲ್​ನಿಂದ ಹಿಂದಕ್ಕೆ ಸರಿದ ಭಾರತ; ಇದು ಟ್ರಂಪ್ ಟ್ಯಾರಿಫ್​ಗೆ ಭಾರತ ಕೊಟ್ಟ ಪ್ರತ್ಯುತ್ತರವಾ?

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ