ಭಾರತದಲ್ಲಿ ತರಕಾರಿ ಬೆಲೆ ಎಷ್ಟು ಹೆಚ್ಚಿದೆ? ಯಾವಾಗ ಬೆಲೆ ಇಳಿಕೆ ಆಗುತ್ತೆ? ಆರ್​ಬಿಐ ಸಮಾಧಾನ ಇಲ್ಲಿದೆ

RBI Expectation On Vegetable Price: ಟೊಮೆಟೋ ಸೇರಿದಂತೆ ಭಾರತದಲ್ಲಿ ತರಕಾರಿ ಬೆಲೆ ಬಹಳ ಹೆಚ್ಚಾಗಿದೆ. ಇದರ ಪರಿಣಾಮ ಹಣದುಬ್ಬರ ಶೇ. 7.44ರ ಮಟ್ಟಕ್ಕೆ ಹೋಗುವಂತೆ ಮಾಡಿದೆ. ಜುಲೈನಿಂದ ಹೆಚ್ಚಳ ಕಂಡಿದ್ದ ತರಕಾರಿ ಬೆಲೆ ಸೆಪ್ಟಂಬರ್​ನಿಂದ ಕಡಿಮೆ ಆಗಬಹುದು ಎಂದು ಆರ್​ಬಿಐ ನಿರೀಕ್ಷಿಸಿದೆ.

ಭಾರತದಲ್ಲಿ ತರಕಾರಿ ಬೆಲೆ ಎಷ್ಟು ಹೆಚ್ಚಿದೆ? ಯಾವಾಗ ಬೆಲೆ ಇಳಿಕೆ ಆಗುತ್ತೆ? ಆರ್​ಬಿಐ ಸಮಾಧಾನ ಇಲ್ಲಿದೆ
ತರಕಾರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 24, 2023 | 11:35 AM

ನವದೆಹಲಿ, ಆಗಸ್ಟ್ 24: ಭಾರತದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮೆಟೋದಿಂದ ಶುರುವಾದ ಬೆಲೆ ಏರಿಕೆ, ಈಗ ಬಹುತೇಕ ಎಲ್ಲಾ ತರಕಾರಿಗಳನ್ನೂ ದುಬಾರಿಯನ್ನಾಗಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ತರಕಾರಿ ಬೆಲೆ (Vegetable Price) ಶೇ. 37ರಷ್ಟು ಹೆಚ್ಚಿದೆ. ಟೊಮೆಟೋ ಬೆಲೆಯಂತೂ ಶೇ. 201ರಷ್ಟು ಹೆಚ್ಚಾಗಿದೆ. ಈರುಳ್ಳಿ ಬೆಲೆ ಏರತೊಡಗಿದೆ. ಈ ಆಹಾರವಸ್ತುಗಳ ಬೆಲೆ ಏರಿಕೆ ಪರಿಣಾಮ ಜುಲೈ ತಿಂಗಳಲ್ಲಿ ಹಣದುಬ್ಬರ (Inflation) ಶೇ. 7.44ರಷ್ಟು ಮಟ್ಟಕ್ಕೆ ಹೋಗಿದೆ. ಇದು ಕಳೆದ 15 ತಿಂಗಳಲ್ಲೇ ಗರಿಷ್ಠ ಹಣದುಬ್ಬರ ಎನಿಸಿದೆ. ಆರ್​ಬಿಐನ ತಾಳಿಕೆ ಮಿತಿಯ ಒಳಗಿದ್ದ ಹಣದುಬ್ಬರ ಈಗ ಕೈಮೀರಿ ಹೋಗುವಂತಿದೆ. ಸರ್ಕಾರ ಇನ್ನಷ್ಟು ಹಣದುಬ್ಬರ ಹೆಚ್ಚಳ ತಪ್ಪಿಸಲು ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹಾಕಿದೆ. ಸಕ್ಕರೆ ರಫ್ತು ನಿಷೇಧಿಸುವ ಆಲೋಚನೆಯಲ್ಲಿದೆ.

ಸೆಪ್ಟೆಂಬರ್​ನಲ್ಲಿ ತರಕಾರಿ ಬೆಲೆ ಇಳಿಕೆ ಸಾಧ್ಯತೆ

ಟೊಮೆಟೋ ಇತ್ಯಾದಿ ತರಕಾರಿ ಬೆಲೆಗಳ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ತುಸು ಕೊಡುವ ಸುದ್ದಿಯನ್ನು ಆರ್​ಬಿಐ ಕೊಟ್ಟಿದೆ. ಸೆಪ್ಟೆಂಬರ್​ನಿಂದ ತರಕಾರಿ ಬೆಲೆಗಳು ಕಡಿಮೆ ಆಗಬಹುದು ಎಂದು ಆರ್​ಬಿಐ ಹೇಳಿದೆ.

ಇದನ್ನೂ ಓದಿ: ಭಾರತದಿಂದ ಏಳು ವರ್ಷದಲ್ಲಿ ಮೊದಲ ಬಾರಿಗೆ ಸಕ್ಕರೆ ರಫ್ತು ನಿಷೇಧ ಸಾಧ್ಯತೆ

ಜುಲೈನಲ್ಲಿ ಏರತೊಡಗಿದ ತರಕಾರಿ ಬೆಲೆಗಳು ಕಡಿಮೆ ಆಗತೊಡಗಿವೆ. ಹೊಸ ತರಕಾರಿ ಆವಕದಿಂದ ಬೆಲೆ ಕಡಿಮೆ ಆಗುತ್ತಿದೆ. ಈರುಳ್ಳಿ ಬೆಲೆ ಕೈಮೀರಿ ಹೋಗುವ ಮುನ್ನ ತಹಬದಿಗೆ ತರಲಾಗುತ್ತಿದೆ. ಸೆಪ್ಟಂಬರ್​ನಿಂದ ತರಕಾರಿ ಹಣದುಬ್ಬರ ಸಾಕಷ್ಟು ಕಡಿಮೆ ಆಗಬಹುದು ಎಂದು ನಿರೀಕ್ಷಿಸಿದ್ದೇವೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಆಗಸ್ಟ್ 23ರಂದು ಹೇಳಿದ್ದಾರೆ.

ಜಾಗತಿಕ ರಾಜಕೀಯ ಬಿಕ್ಕಟ್ಟುಗಳಿಂದಾಗಿ ಆಹಾರ ಬೆಲೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದ್ದರೂ ಬೇಳೆ ಕಾಳುಗಳ ಬೆಲೆ ನಿಯಂತ್ರಣದಲ್ಲಿ ಇರುವ ಸಾಧ್ಯತೆ ಇದೆ. ಆದರೆ, ಆಹಾರ ವಸ್ತು ಬೆಲೆ ಏರಿಕೆಯ ಬಿಸಿ ಪದೇ ಪದೇ ತಾಕುತ್ತಿರುವುದರಿಂದ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತಿದೆ. ನಾವು ಈ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್