
ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಪತಂಜಲಿ ಆಯುರ್ವೇದ ಕಂಪನಿಯ ‘ದಂತ ಕಾಂತಿ’ ಟೂತ್‌ಪೇಸ್ಟ್ (Patanjali Dant Kanti toothpaste) ಇಂದು ಭಾರತದ ಅತಿದೊಡ್ಡ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಇಂದಿನ ಇದರ ಮಾರುಕಟ್ಟೆ ಮೌಲ್ಯ 500 ಕೋಟಿ ರೂ.ಗಳಿಗಿಂತ ಹೆಚ್ಚು. ಸಾಮಾನ್ಯ ಜನರ ಮನೆಗಳಲ್ಲಿ ಕಂಡುಬರುವ ಈ ಟೂತ್‌ಪೇಸ್ಟ್ ಈ ಜನರಿಗೆ ಏಕೆ ಇಷ್ಟವಾಗುತ್ತದೆ? ಈ ಕುರಿತು ಜನರ ಅನಿಸಿಕೆ ಕುತೂಹಲಕಾರಿ ಎನಿಸುತ್ತದೆ.
ಪತಂಜಲಿ ದಂತ ಕಾಂತಿ ಟೂತ್‌ಪೇಸ್ಟ್, ಈ ಕಂಪನಿಯ ಆರಂಭಿಕ ಉತ್ಪನ್ನಗಳಲ್ಲಿ ಒಂದಾಗಿದೆ. ಮೊದಲು ಹಲ್ಲಿನ ಪುಡಿಯಾಗಿದ್ದ ಇದನ್ನು ನಂತರ ಟೂತ್‌ಪೇಸ್ಟ್‌ನ ರೂಪಕ್ಕೆ ತರಲಾಯಿತು. ಇಷ್ಟೇ ಅಲ್ಲ, ಪತಂಜಲಿ ಟೂತ್‌ಪೇಸ್ಟ್ ಮಾರುಕಟ್ಟೆಯಲ್ಲಿ ಎಂತಹ ಬದಲಾವಣೆಯನ್ನು ತಂದಿತೆಂದರೆ, ದೇಶದ ಇತರ FMCG ಕಂಪನಿಗಳು ಆಯುರ್ವೇದ ಆಧಾರಿತ ಟೂತ್‌ಪೇಸ್ಟ್ ಅನ್ನು ಬಿಡುಗಡೆ ಮಾಡಬೇಕಾಯಿತು. ಎಂಎನ್ಸಿ ಕಂಪನಿಗಳ ಆಯುರ್ವೇದ ಆಧಾರಿತ ಟೂತ್ಪೇಸ್ಟ್ಗಳ ನಡುವೆ ಪತಂಜಲಿಯ ದಂತಕಾಂತಿ ವಿಭಿನ್ನವಾಗಿ ನಿಲ್ಲುವುದು ಹೇಗೆ? ಜನರಿಗೆ ಈಗಲೂ ಅದು ನೆಚ್ಚಿನ ಟೂತ್‌ಪೇಸ್ಟ್ ಎನಿಸಿರುವುದು ಯಾಕೆ? ಇದಕ್ಕೆ ಜನರು ಬೇರೆ ಬೇರೆ ಕಾರಣಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಪತಂಜಲಿ ದಂತಕಾಂತಿ ಇತರ ಟೂತ್ಪೇಸ್ಟ್ಗಳಿಗಿಂತ ಹೇಗೆ ವಿಭಿನ್ನ? ಇದರ ಜನಪ್ರಿಯತೆಗೆ ಇಲ್ಲಿವೆ ಕಾರಣಗಳು…
ಪತಂಜಲಿ ಆಯುರ್ವೇದದ ಬ್ರಾಂಡ್ ಅಂಬಾಸಡರ್ ಎಂದರೆ ಅದರ ಸಹ-ಸಂಸ್ಥಾಪಕ ಬಾಬಾ ರಾಮದೇವ್ ಅವರೇ. ಪತಂಜಲಿ ದಂತ ಕಾಂತಿ ಜನಪ್ರಿಯವಾಗಲು ಅವರ ಇಮೇಜ್ ಬಹಳಷ್ಟು ಸಹಾಯ ಮಾಡಿದೆ. ಒಂದು ಸಮೀಕ್ಷೆಯ ಪ್ರಕಾರ, ಶೇಕಡಾ 89 ರಷ್ಟು ಜನರು ಪತಂಜಲಿ ದಂತ ಕಾಂತಿ ಅನ್ನು ಅದರ ಬ್ರ್ಯಾಂಡ್ ನಿಷ್ಠೆಗಾಗಿ ಖರೀದಿಸುತ್ತಾರೆ. ಪತಂಜಲಿ ದಂತ ಕಾಂತಿಗೆ ಬಹಳಷ್ಟು ಪುನರಾವರ್ತಿತ ಬಳಕೆದಾರರಿರುವುದು ಇದಕ್ಕೆ ಒಂದು ಸಾಕ್ಷಿ. ಪತಂಜಲಿಯ ಬಗ್ಗೆ ಬಳಕೆದಾರರಿಗೆ ಇರುವ ಬ್ರ್ಯಾಂಡ್ ನಿಷ್ಠೆ ಶೇಕಡಾ 89 ರಷ್ಟಿದ್ದರೆ, ಇತರ ಟೂತ್‌ಪೇಸ್ಟ್ ಬ್ರಾಂಡ್‌ಗಳಿಗೆ ಈ ನಿಷ್ಠೆ ಕೇವಲ 76 ಪ್ರತಿಶತ ಮಾತ್ರ.
ಇಷ್ಟೇ ಅಲ್ಲ, ಪತಂಜಲಿ ದಂತ ಕಾಂತಿ ಖರೀದಿಸುವ ನಿರ್ಧಾರ ತೆಗೆದುಕೊಳ್ಳಲು ಜನರಿಗೆ ಬಾಬಾ ರಾಮದೇವ್ ಅವರ ಇಮೇಜ್ (ಬ್ರಾಂಡ್ ಅಂಬಾಸಿಡರ್) ಬಹಳ ಪ್ರಭಾವ ಬೀರುತ್ತದೆ. ಪತಂಜಲಿಯ ಬ್ರ್ಯಾಂಡ್ ಅಂಬಾಸಡರ್ ಅವರನ್ನು (ಬಾಬಾ ರಾಮದೇವ್) ನೋಡಿ ಸ್ಫೂರ್ತಿಗೊಂಡು ದಂತ ಕಾಂತಿ ಖರೀದಿಸುತ್ತಿರುವುದಾಗಿ ಶೇ. 58 ಜನರು ಹೇಳಿದ್ದಾರೆ. ಈ ರೀತಿಯ ಬ್ರ್ಯಾಂಡ್ ಅಂಬಾಸಡರ್ ಪ್ರಭಾವವು ಇತರ ಬ್ರ್ಯಾಂಡ್ಗಳಿಗೆ ಶೇ. 32 ಮಾತ್ರವೇ ಇದೆಯಂತೆ.
ಇದನ್ನೂ ಓದಿ: ನದಿ ತಟದಲ್ಲಿ ಉಚಿತವಾಗಿ ಹಂಚಲಾಗುತ್ತಿದ್ದ ಹಲ್ಲಿನ ಪೌಡರ್ ಇವತ್ತು ಭಾರೀ ಮೌಲ್ಯದ ಟೂತ್‌ಪೇಸ್ಟ್ ಬ್ರ್ಯಾಂಡ್ ಆದ ಕಥೆ
ಪತಂಜಲಿ ದಂತ ಕಾಂತಿಯಲ್ಲಿ ಜನರಿಗೆ ಅತ್ಯಂತ ಪ್ರಿಯವಾದದ್ದು ಯಾವುದು? ಸಮೀಕ್ಷೆಯ ಪ್ರಕಾರ, ಆಯುರ್ವೇದಿಕ್ ಉತ್ಪನ್ನವಾದ್ದರಿಂದ ಶೇ. 41ರಷ್ಟು ಜನರು ಇದನ್ನು ಇಷ್ಟಪಡುತ್ತಾರೆ. 22 ಪ್ರತಿಶತ ಜನರು ಹಲ್ಲುಗಳನ್ನು ಬಿಳುಪುಗೊಳಿಸಲು ಮತ್ತು 22 ಪ್ರತಿಶತ ಜನರು ಹಲ್ಲುಗಳನ್ನು ಬಲಪಡಿಸಲು ಇದನ್ನು ಇಷ್ಟಪಡುತ್ತಾರೆ. ಆದರೆ ಶೇಕಡ 15 ರಷ್ಟು ಜನರು ತಾಜಾ ಉಸಿರು ಹೊಂದಲು ಇದನ್ನು ಇಷ್ಟಪಡುತ್ತಾರೆ.
ದಂತ ಕಾಂತಿ ಬಳಸಿದ ನಂತರದ ಅನುಭವ ಹೇಗಿತ್ತು ಎಂಬುದನ್ನೂ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ. ದಂತ ಕಾಂತಿ ಟೂತ್ ಪೇಸ್ಟ್ ಬಗ್ಗೆ ಶೇ. 36ರಷ್ಟು ಜನರು ತೃಪ್ತಿಕರ ಎನ್ನುವ ಅಭಿಪ್ರಾಯ ನೀಡಿದ್ದಾರೆ. ಶೇ. 31ರಷ್ಟು ಜನರು ಅತ್ಯಂತ ತೃಪ್ತಿ ತೋರ್ಪಡಿಸಿದ್ದಾರೆ. ಇತರ ಬ್ರ್ಯಾಂಡ್ಗಳ ವಿಚಾರದಲ್ಲಿ ತೃಪ್ತಿ ಶೇ. 30ರಷ್ಟಿದ್ದರೆ, ಅತಿ ತೃಪ್ತಿಯು ಶೇ. 34ರಷ್ಟಿದೆ. ತೃಪ್ತಿ ಬಗ್ಗೆ ಅನಿಶ್ಚಿತವಾಗಿರುವವರ ಸಂಖ್ಯೆ ಶೇ. 21-22ರಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ