I-WFA: ಎಲ್ಲಿಂದಾದರೂ ಕೆಲಸ ಮಾಡುವ ಫ್ರೇಮ್ವರ್ಕ್ ಅಭಿವೃದ್ಧಿಗೆ ಹಾರ್ವರ್ಡ್ ಜತೆಗೆ ಐಟಿಸಿ ಇನ್ಫೋಟೆಕ್ ಸಹಭಾಗಿತ್ವ
ಬೆಂಗಳೂರು ಮೂಲದ ಐಟಿಸಿ ಇನ್ಫೋಟೆಕ್ನಿಂದ ಐ- ಡಬ್ಲ್ಯುಎಫ್ಎ ಫ್ರೇಮ್ವರ್ಕ್ ಅನ್ನು ಬೆಂಗಳೂರು ಮೂಲದ ಐಟಿ ಕಂಪೆನಿ ಐಟಿಸಿ ಇನ್ಫೋಟೆಕ್ನಿಂದ ಅಭಿವೃದ್ಧಿ ಮಾಡಲಾಗುತ್ತಿದೆ.
ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಕಂಪೆನಿಯಾದ ಐಟಿಸಿ ಇನ್ಫೋಟೆಕ್ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ಸಹಯೋಗದಲ್ಲಿ “ವಿಶಿಷ್ಟ ಮತ್ತು ಕೈಗಾರಿಕೆಯಿಂದ ವ್ಯಾಖ್ಯಾನಿಸಲಾದ” ಉತ್ಪಾದಕತೆ ವ್ಯಾಪ್ತಿಯನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕಾಗಿ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ನ ಲುಮ್ರಿ ಫ್ಯಾಮಿಲಿ ಅಸೋಸಿಯೇಟ್ ಪ್ರೊಫೆಸರ್ ಪೃಥ್ವಿರಾಜ್ ಚೌಧರಿ ಜತೆಯಾಗಲಿದೆ. ಐಟಿಸಿ ಇನ್ಫೋಟೆಕ್ನ ವರ್ಕ್ ಫ್ರಮ್ ಎನಿವೇರ್ (I-WFA) ಫ್ರೇಮ್ವರ್ಕ್ ಗುರಿಯು ಅತ್ಯುತ್ತಮ ಫಲಿತಾಂಶ ನೀಡಲು ಗ್ರಾಹಕರು ಮತ್ತು ಉದ್ಯೋಗಿಗಳಿಗೆ ದಕ್ಷವಾದ ಮತ್ತು ತಡೆರಹಿತವಾದ ಕಾರ್ಯ ನಿರ್ವಹಣೆ ಫ್ರೇಮ್ವರ್ಕ್ ಒದಗಿಸುವುದಾಗಿದೆ. ಫೀಡ್ಬ್ಯಾಕ್ ಇನ್ಸೈಟ್ಸ್ ಎಂಬ ಸಂಶೋಧನಾ ಸಂಸ್ಥೆಯು ವಿವಿಧ ಭೌಗೋಳಿಕ ಪ್ರದೇಶದಲ್ಲಿ ಕೈಗೊಂಡ ಉದ್ಯೋಗಿಗಳು ಮತ್ತು ಗ್ರಾಹಕರ ಸಮೀಕ್ಷೆಗಳ ದತ್ತಾಂಶದ ಆಧಾರದಲ್ಲಿ ಈ ಫ್ರೇಮ್ವರ್ಕ್ ರೂಪಿಸಲಾಗುವುದು. ಐಟಿಸಿ ಇನ್ಫೋಟೆಕ್ನ ಗ್ರಾಹಕರ ಮತ್ತು ಸಿಬ್ಬಂದಿ ಕೇಂದ್ರಿತ ಕಾರ್ಯತಂತ್ರ ಸ್ತಂಬದಂತೆ ಈ ಫ್ರೇಮ್ವರ್ಕ್ ಇರಲಿದೆ.
ತಂತ್ರಜ್ಞಾನವು ಕೇವಲ ಉದ್ಯಮದ ಫಲಿತಾಂಶಕ್ಕೆ ಮಾತ್ರ ಸಹಾಯ ಮಾಡುತ್ತಿರುವುದಲ್ಲ. ಇದರ ಜತೆಗೆ ಭವಿಷ್ಯದಲ್ಲಿನ ಉದ್ಯೋಗಗಳು- ಡಿಜಿಟಲ್, ವಿತರಣೆ, ಆರಾಮ, ಫಲಿತಾಂಶ ಆಧಾರಿತ ಮತ್ತು ಸುರಕ್ಷತೆಯ ಮರುವ್ಯಾಖ್ಯಾನ ಇದಾಗಲಿದೆ. ಐಟಿಸಿ ಇನ್ಫೋಟೆಕ್ ಹೇಳಿರುವಂತೆ, ಹೊಸ ರೀತಿಯ ಆವಿಷ್ಕಾರದ ಮಾರ್ಗದಲ್ಲಿ ಹಂಚಿಕೆಯಾದ ಉದ್ಯೋಗ ಸ್ಥಳ ಮಾದರಿಯಲ್ಲಿ ಈ ಫ್ರೇಮ್ವರ್ಕ್ನಿಂದ ವಿಕೇಂದ್ರೀಕೃತ ಉದ್ಯೋಗಿಗಳ ಬಲದ ಮೂಲಕ ಸಾಧ್ಯವಾಗುತ್ತದೆ.
“ಪೃಥ್ವಿ ಅವರ ಜತೆಗೆ ಕೆಲಸ ಮಾಡುತ್ತಾ ನಾವು ಈ ಫ್ರೇಮ್ವರ್ಕ್ ನಿರ್ಮಿಸುತ್ತಿದ್ದೇವೆ. ಗ್ರಾಹಕರ ದೃಷ್ಟಿಯಿಂದ ಉತ್ಪಾದಕತೆ ಹಾಗೂ ಉದ್ಯೋಗಿಗಳ ದೃಷ್ಟಿಯಿಂದ ಆರಾಮದಾಯಕ ಆಗಿದೆಯೇ ಎಂದು ದತ್ತಾಂಶದ ಭದ್ರತೆಯನ್ನು ಪ್ರಮುಖವಾಗಿ ಗಮನದಲ್ಲಿ ಇಟ್ಟುಕೊಳ್ಳುತ್ತೇವೆ. ಈ ಡೇಟಾ ಚಾಲಿತ ಫ್ರೇಮ್ವರ್ಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಬಗೆಯ ಉದ್ಯೋಗ ಸ್ಥಳ ಮಾಡೆಲ್ ಅನ್ನು ರೂಪಿಸಲು ಸಹಾಯ ಆಗುತ್ತದೆ. ಮತ್ತು ಅದರಲ್ಲಿ ನಾವಿರುತ್ತೇವೆ ಎಂಬ ವಿಶ್ವಾಸ ಇದೆ,” ಎಂದು ಐಟಿಸಿ ಇನ್ಫೋಟೆಕ್ ಎಂ.ಡಿ. ಮತ್ತು ಸಿಇಒ ಸುದೀಪ್ ಸಿಂಗ್ ಹೇಳಿದ್ದಾರೆ.
ಇಡೀ ವಿಶ್ವದಾದ್ಯಂತ ಈಗಿರುವ ಪ್ರಶ್ನೆ ಏನೆಂದರೆ, ಎಲ್ಲ ಕೈಗಾರಿಕೆಗಳವರು ಎಲ್ಲಿಂದಾದರೂ ಕೆಲಸ ಮಾಡುವ ಸಾಧ್ಯತೆ ಇದೆಯಾ? ಇದು ಸಾಧ್ಯವಾಗಲು ಏನು ಮಾಡಬೇಕಿದೆ ಎಂದು ನೋಡುತ್ತಿದ್ದಾರೆ. I-WFA ಎಂಬುದು ಕಂಪೆನಿಗೆ ಮೌಲ್ಯ ತುಂಬುವ ಶಕ್ತಿ ಹೊಂದಿದೆ. ಎಲ್ಲಿಂದ ಬೇಕಾದರೂ ನೇಮಿಸಿಕೊಳ್ಳುವ ಅವಕಾಶ ಒದಗಿಸುತ್ತದೆ. ಉದ್ಯೋಗಸ್ಥಳ ಒಳಗೊಳ್ಳುವಿಕೆ, ಹೆಚ್ಚಿದ ಉತ್ಪಾದಕತೆ, ವೆಚ್ಚ ಉಳಿತಾಯ ಮತ್ತು ಕಾರ್ಯ ನಿರ್ವಹಣೆ ಅನುಕೂಲಗಳನ್ನು ಒದಗಿಸುತ್ತದೆ ಎಂದು ಹಾರ್ವರ್ಡ್ ಬಿಜಿನೆಸ್ ಸ್ಕೂಲ್ನ ಚೌಧರಿ ಹೇಳುತ್ತಾರೆ.
ಇದನ್ನೂ ಓದಿ: ಡಿಸೆಂಬರ್ಗೆ ವರ್ಕ್ ಫ್ರಮ್ ಹೋಮ್ ಕೊನೆ? ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆತರಲು ಐಟಿ ಕಂಪೆನಿಗಳ ಯೋಜನೆ
Published On - 1:39 pm, Thu, 11 November 21