World Bank’s India Development Update: ಭಾರತದ ಜಿಡಿಪಿ ಬೆಳವಣಿಗೆ ದರ ಹೆಚ್ಚಿಸಿದ ವಿಶ್ವಬ್ಯಾಂಕ್; ಶೇ 6.9ರ ವೃದ್ಧಿ ನಿರೀಕ್ಷೆ

| Updated By: Ganapathi Sharma

Updated on: Dec 06, 2022 | 12:50 PM

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಹಣದುಬ್ಬರ ಪ್ರಮಾಣ ಶೇಕಡಾ 7.1ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಇದರೊಂದಿಗೆ, ಸದ್ಯಕ್ಕೆ ಹಣದುಬ್ಬರ ಮತ್ತಷ್ಟು ನಿಯಂತ್ರಣಕ್ಕೆ ಬರುವ ಸಾಧ್ಯತೆ ಇಲ್ಲ ಎಂಬುದನ್ನು ವಿಶ್ವಬ್ಯಾಂಕ್ ತಿಳಿಸಿದಂತಾಗಿದೆ.

World Banks India Development Update: ಭಾರತದ ಜಿಡಿಪಿ ಬೆಳವಣಿಗೆ ದರ ಹೆಚ್ಚಿಸಿದ ವಿಶ್ವಬ್ಯಾಂಕ್; ಶೇ 6.9ರ ವೃದ್ಧಿ ನಿರೀಕ್ಷೆ
ಸಾಂದರ್ಭಿಕ ಚಿತ್ರ
Image Credit source: PTI
Follow us on

ನವದೆಹಲಿ: ಅಮೆರಿಕ, ಯುರೋಪ್ ಹಾಗೂ ಚೀನಾ ಆರ್ಥಿಕತೆಯು ಭಾರತದ (India) ಮೇಲೂ ಪರಿಣಾಮ ಬೀರಿದೆ. 23ನೇ ಹಣಕಾಸು ವರ್ಷದಲ್ಲಿ ಭಾರತವು ಶೇಕಡಾ 6.9ರ ಜಿಡಿಪಿ ಬೆಳವಣಿಗೆ (GDP growth) ಸಾಧಿಸಲಿದೆ ಎಂದು ಭಾರತದ ಅಭಿವೃದ್ಧಿ ಮುನ್ಸೂಚನೆ ಕುರಿತು ವಿಶ್ವಬ್ಯಾಂಕ್ (World Bank) ಪ್ರಕಟಿಸಿರುವ ವರದಿ ತಿಳಿಸಿದೆ. 23ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇಕಡಾ 6.5ರಷ್ಟಿರಲಿದೆ ಎಂದು ಈ ಹಿಂದೆ ವಿಶ್ವಬ್ಯಾಂಕ್ ಮುನ್ಸೂಚನೆ ನೀಡಿತ್ತು. ಇದೀಗ ಪರಿಷ್ಕರಿಸಿದ್ದು, ಹೆಚ್ಚು ಜಿಡಿಪಿ ಬೆಳವಣಿಗೆಯ ಮುನ್ಸೂಚನೆ ನೀಡಿದೆ. ಭಾರತದ ವಿತ್ತೀಯ ಕೊರತೆ 23ನೇ ಹಣಕಾಸು ವರ್ಷದಲ್ಲಿ ಶೇಕಡಾ 6.4ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್​ನ ‘ಇಂಡಿಯಾ ಡೆವಲಪ್​ಮೆಂಟ್ ಅಪ್​ಡೇಟ್​ (India Development Update) ತಿಳಿಸಿದೆ.

ಶೇ 7.1ರಷ್ಟಿರಲಿದೆ ಹಣದುಬ್ಬರ

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಹಣದುಬ್ಬರ ಪ್ರಮಾಣ ಶೇಕಡಾ 7.1ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಇದರೊಂದಿಗೆ, ಸದ್ಯಕ್ಕೆ ಹಣದುಬ್ಬರ ಮತ್ತಷ್ಟು ನಿಯಂತ್ರಣಕ್ಕೆ ಬರುವ ಸಾಧ್ಯತೆ ಇಲ್ಲ ಎಂಬುದನ್ನು ವಿಶ್ವಬ್ಯಾಂಕ್ ತಿಳಿಸಿದಂತಾಗಿದೆ. ದೇಶದಲ್ಲಿ ಸುಮಾರು ಒಂದು ವರ್ಷದಿಂದ ಚಿಲ್ಲರೆ ಹಣದುಬ್ಬರ ಪ್ರಮಾಣ ಸಹನೆಯ ಮಟ್ಟವಾದ ಶೇಕಡಾ 6ಕ್ಕಿಂತ ಮೇಲ್ಮಟ್ಟದಲ್ಲಿದೆ. ಚಿಲ್ಲರೆ ಹಣದುಬ್ಬರ ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಸಂಬಂಧಿಸಿ ನವೆಂಬರ್ 3ರಂದು ವಿಶೇಷ ಸಭೆ ನಡೆಸಿದ್ದ ಹಣಕಾಸು ನೀತಿ ಸಮಿತಿ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.

ಇದನ್ನೂ ಓದಿ: Forbes Asia Philanthropy List: ಫೋರ್ಬ್ಸ್ ಏಷ್ಯಾ ದಾನಿಗಳ ಪಟ್ಟಿಯಲ್ಲಿ ಗೌತಮ್ ಅದಾನಿ ಸೇರಿ ಮೂವರು ಭಾರತೀಯರು

ಸೆಪ್ಟೆಂಬರ್​ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ದೇಶವು ಶೇಕಡಾ 6.3ರ ಜಿಡಿಪಿ ಬೆಳವಣಿಗೆ ದರ ದಾಖಲಿಸಿರುವುದು ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದುಬಂದಿತ್ತು. ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಸಿಮೆಂಟ್ ಉತ್ಪಾದನೆಯಲ್ಲಿ 20 ತಿಂಗಳ ಕುಸಿತ ಕಾಣಿಸಿದ್ದು, ಇದುವೇ ಜಿಡಿಪಿ ಬೆಳವಣಿಗೆ ಕುಸಿತ ಕಾಣಲು ಕಾರಣ ಎಂದು ಸರ್ಕಾರ ತಿಳಿಸಿತ್ತು. ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಹಳಿಕೆ ಮರಳಿದೆ. ಶೇಕಡಾ 6.8 ರಿಂದ 7ರ ಬೆಳವಣಿಗೆಯನ್ನು ದಾಖಲಿಸುವ ಹಾದಿಯಲ್ಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅಭಿಪ್ರಾಯಪಟ್ಟಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Tue, 6 December 22