Sign In

By signing in or creating an account, you agree with Associated Broadcasting Company's Terms & Conditions and Privacy Policy.

SDB Record: ಸೂರತ್ ಡೈಮಂಡ್ ಬೂರ್ಸ್, ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಟ್ಟಡ; ಏನಿದರ ವಿಶೇಷತೆಗಳು? ಇಲ್ಲಿದೆ ಡೀಟೇಲ್ಸ್

Surat Diamond Bourse: ಗುಜರಾತ್​ನ ಸೂರತ್ ನಗರದ ಡ್ರೀಮ್ ಸಿಟಿಯಲ್ಲಿ ಎಸ್​ಡಿಬಿ ಎಂಬ ಡೈಮಂಡ್ ಟ್ರೇಡ್ ಸೆಂಟರ್ ಸ್ಥಾಪನೆಯಾಗುತ್ತಿದ್ದು ನವೆಂಬರ್ 21ರಂದು ಪ್ರಧಾನಿ ಉದ್ಘಾಟಿಸುವ ಸಾಧ್ಯತೆ ಇದೆ. ಇದು ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಟ್ಟಡ ಎನಿಸಿದೆ.

SDB Record: ಸೂರತ್ ಡೈಮಂಡ್ ಬೂರ್ಸ್, ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಟ್ಟಡ; ಏನಿದರ ವಿಶೇಷತೆಗಳು? ಇಲ್ಲಿದೆ ಡೀಟೇಲ್ಸ್
ಸೂರತ್ ಡೈಮಂಡ್ ಬೂರ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 17, 2023 | 5:00 PM

ಸೂರತ್, ಜುಲೈ 17: ಷೇರುಮಾರುಕಟ್ಟೆ, ಚಿನಿವಾರಪೇಟೆಗಳಂತೆ ಡೈಮಂಡ್ ಬೂರ್ಸ್​ಗಳು (Diamond Bourse) ಹಲವುಂಟು. ಭಾರತದ ಸೂರತ್​ನಲ್ಲಿ ಇಂಥದ್ದೊಂದು ಡೈಮಂಡ್ ಟ್ರೇಡ್ ಸೆಂಟರ್ (Diamond Trade Center) ಸ್ಥಾಪಿಸಲಾಗಿದೆ. ಸೂರತ್ ಡೈಮಂಡ್ ಬೂರ್ಸ್ ಎನ್ನಲಾದ ಇದು 2023ರ ನವೆಂಬರ್ 21ರಂದು ಲೋಕಾರ್ಪಣೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಡೈಮಂಡ್ ಬೂರ್ಸ್, ವಿಶ್ವದ ಅತಿ ದೊಡ್ಡ ಕಾರ್ಪೊರೇಟ್ ಕಟ್ಟಡವಾಗಿದ್ದು, ಮುಂಬೈ ಬಳಿಕ ಭಾರತದ ಎರಡನೇ ಡೈಮಂಡ್ ಟ್ರೇಡ್ ಸೆಂಟರ್ ಆಗಿದೆ. 35.54 ಎಕರೆ ಪ್ರದೇಶದಲ್ಲಿ ಪಂಚತತ್ವ ನಿಯಮಗಳ ಅನುಸಾರವಾಗಿ ಕಟ್ಟಲಾದ ಈ ಕಟ್ಟಡದಲ್ಲಿ 15 ಮಹಡಿಗಳಿದ್ದು, ಬರೋಬ್ಬರಿ 4,200 ಕಚೇರಿಗಳಿಗೆ ಅವಕಾಶ ಇದೆ. ಬೆಲ್ಜಿಯಂ, ಇಸ್ರೇಲ್ ಮೊದಲಾದ ಕಡೆ ಇರುವ ಡೈಮಂಡ್ ಎಕ್ಸ್​ಚೇಂಜ್ ಕೇಂದ್ರಗಳಿಗಿಂತಲೂ ಬೃಹತ್ ಆದುದು ಸೂರತ್​ನ ಡೈಮಂಡ್ ಬೂರ್ಸ್.

ನವೆಂಬರ್ 21ರಿಂದ 350 ಕಂಪನಿಗಳು ವಹಿವಾಟು ಆರಂಭಿಸಲಿವೆ

160ಕ್ಕೂ ಹೆಚ್ಚು ಕಂಪನಿಗಳು ವಹಿವಾಟು ಆರಂಭಿಸಲು ಲಿಖಿತ ಒಪ್ಪಿಗೆಯನ್ನು ಕಳುಹಿಸಿವೆ ಎಂದು ಡೈಮಂಡ್ ಲೀಡರ್ ದಿನೇಶ್ ನವ್ಡಿಯಾ ತಿಳಿಸಿದ್ದಾರೆ. ನವೆಂಬರ್ 21ರಿಂದ 350 ಕಂಪನಿಗಳು ವಹಿವಾಟು ಆರಂಭಿಸಲಿವೆ. ಇತರ ಕಂಪನಿಗಳು ಸಹ ಮೂರು ದಿನಗಳೊಳಗೆ ಒಪ್ಪಿಗೆ ಪತ್ರಗಳನ್ನು ಕಳುಹಿಸಲು ಹೇಳಿರುವುದನ್ನು ಪರಿಗಣಿಸಿ, ನಾವು ಮೂರು ದಿನಗಳ ನಂತರ ಮೂರನೇ ಪಟ್ಟಿಯನ್ನು ಪ್ರಕಟಿಸುತ್ತೇವೆ. ಈ ಹಿಂದೆ, ಸ್ಟಾಕ್ ಎಕ್ಸ್‌ಚೇಂಜ್ ಕಮಿಟಿಯ ವಕ್ತಾರ ಪದ್ಮಶ್ರೀ ಮಾಥುರ್‌ಭಾಯ್ ಸವಾನಿ ಅವರು ಡೈಮಂಡ್ ಬರ್ಸ್‌ನಲ್ಲಿರುವ ವಜ್ರ ಕಂಪನಿಗಳು ಮುಂದಿನ ದಸರಾ ದಿನದಂದು ತಮ್ಮ ಕಚೇರಿಗಳಲ್ಲಿ ಕುಂಭ ಘೋಡಾವನ್ನು ಇರಿಸಲಿದ್ದು, ನವೆಂಬರ್ 21 ರಿಂದ ವಹಿವಾಟು ಪ್ರಾರಂಭಿಸುತ್ತವೆ ಎಂದು ಘೋಷಿಸಿದ್ದಾರೆ.‘

ಇದನ್ನೂ ಓದಿAlia Bhatt, Reliance: ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಅವರ ಕಂಪನಿ ಸೇಲ್; ಅಂಬಾನಿ ಪಾಲಾಗಲಿದೆಯಾ ಎಡ್ಡೇ ಮಮ್ಮಾ?

SDBಯಲ್ಲಿ ಸುಮಾರು 4,500 ಕಛೇರಿಗಳಿಗೆ ಅವಕಾಶ

ನವೆಂಬರ್ 21 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಡೈಮಂಡ್ ಬೂರ್ಸ್ ಜೊತೆಗೆ ಸೂರತ್​ನಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಇತರ ಲಾಜಿಸ್ಟಿಕ್ಸ್ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡುವ ಸಾಧ್ಯತೆಯಿದೆ. 5,55,720 ಚದರ ಅಡಿ ವಿಸ್ತೀರ್ಣದ ಎಸ್​ಡಿಬಿಯ ಕಛೇರಿಗಳ ಒಳಾಂಗಣ ಕಾಮಗಾರಿ ಪೂರ್ಣಗೊಳ್ಳಲಿದೆ. ಸೂರತ್ ಡೈಮಂಡ್ ಬೂರ್ಸ್ ಕಟ್ಟಡವನ್ನು 3000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸುಮಾರು 4600 ಕಚೇರಿಗಳಿರಲಿವೆ.

ಪಂಚತತ್ವ ಆಧಾರಿತವಾದ ಕಟ್ಟಡ

ಸೂರತ್ ಡೈಮಂಡ್ ಬೂರ್ಸ್ ಕಟ್ಟಡವನ್ನು ಐದು ಅಂಶ ಅಥವಾ ಪಂಚತತ್ವದ ಆಧಾರದ ಮೇಲೆ ಕಟ್ಟಲಾಗಿದೆ. ಭೂಮಿ, ಆಕಾಶ, ಪ್ರಕೃತಿ, ವಾಯು, ಜಲ ಈ ಪಂಚತತ್ವದ ಮೇಲೆ ಕಟ್ಟಡದ ಪ್ರತಿಯೊಂದು ಕಚೇರಿಯನ್ನೂ ಕಟ್ಟಲಾಗಿದೆ. ಇಡೀ ಕಟ್ಟಡಕ್ಕೆ ವಾಟರ್ ಕೂಲ್ಡ್ ಚಿಲ್ಲರ್ ಸಿಸ್ಟಂ ಬಳಸಿ ಕೇಂದ್ರೀಕೃತ ಎಸಿ ವ್ಯವಸ್ಥೆ ಮಾಡಲಾಗಿದೆ. ಸೂರ್ಯನ ಬಿಸಿಲು ಪ್ರಖರವಾಗಿ ಬರದಂತೆ ನಿಯಂತ್ರಣ; ಸೂರ್ಯನ ಬೆಳಕು ಕಟ್ಟಡಕ್ಕೆ ಗರಿಷ್ಠ ಬಳಕೆ; ಎಲ್ಲಿಯೂ ಉಷ್ಣಾಂಶ ವ್ಯತ್ಯಯವಾಗದಂತೆ ಕಟ್ಟಡದ ವಿನ್ಯಾಸ ಮಾಡಲಾಗಿದೆ.

ಇದನ್ನೂ ಓದಿTomato: 2021ರಲ್ಲಿ ಟೊಮೆಟೋದಿಂದ 20 ಲಕ್ಷ ನಷ್ಟ ಮಾಡಿಕೊಂಡಿದ್ದ ರೈತನಿಗೆ ಈ ಬಾರಿ 3 ಕೋಟಿ ರೂ ಬಂಪರ್

ಪ್ರಸ್ತುತ, 350 ವಜ್ರ ಕಂಪನಿಗಳು ನವೆಂಬರ್ 21 ರಿಂದ ವಹಿವಾಟು ಪ್ರಾರಂಭಿಸಲು ತಮ್ಮ ಸಿದ್ಧತೆಯನ್ನು ತೋರಿಸಿವೆ. ನವೆಂಬರ್ 21 ರಿಂದ ವಜ್ರ ವಿತರಕರ ಕಚೇರಿಗಳಲ್ಲದೆ, ಸುರಕ್ಷಿತ ಠೇವಣಿ ಕಮಾನುಗಳು, ಕಸ್ಟಮ್ಸ್ ವಲಯಗಳು, ಬ್ಯಾಂಕ್‌ಗಳು ಮತ್ತು ರೆಸ್ಟೋರೆಂಟ್ ಸೌಲಭ್ಯಗಳು ಕಾರ್ಯನಿರ್ವಹಿಸಲಿವೆ ಎಂದು ಎಸ್‌ಡಿಬಿ ಮುಖ್ಯಸ್ಥ ದಿನೇಶ್ ನವ್ಡಿಯಾ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಸುಮುಲ್ ಡೈರಿ ಇಲ್ಲಿ ಮಾಸ್ಟರ್ ಚೆಫ್ ರೆಸ್ಟೋರೆಂಟ್ ತೆರೆಯಲು ಮುಂದಾಗಿದೆ. ಅಮುಲ್ ಕೂಡ ಇಲ್ಲಿ ಔಟ್ ಲೆಟ್ ತೆರೆಯುವ ಸಾಧ್ಯತೆ ಇದೆ.

ಎಸ್​ಡಿಬಿಯಿಂದ ಏನು ಪ್ರಯೋಜನ?

ಭಾರತದಲ್ಲಿ ಡೈಮಂಡ್ ಬ್ಯುಸಿನೆಸ್ ಎಂದರೆ ಮೊದಲಿಗೆ ಬರುವ ಹೆಸರು ಸೂರತ್. ಗುಜರಾತ್​ನ ಈ ನಗರ ಡೈಮಂಡ್ ನಗರಿಯೂ ಹೌದು. ವಿಶ್ವದ ಶೇ. 90ರಷ್ಟು ಡೈಮಂಡ್ ಸಂಸ್ಕರಣೆಗೊಳ್ಳುವುದು ಇಲ್ಲಿಯೇ. ಕಳೆದ ನಾಲ್ಕೈದು ದಶಕಗಳಿಂದ ಇಲ್ಲಿಯ ಡೈಮಂಡ್ ಉದ್ಯಮ ಬಹಳಷ್ಟು ಆಧುನೀಕರಣಗೊಂಡಿದೆ. ಈಗ ಹೊಸ ಡೈಮಂಡ್ ಬೂರ್ಸ್ ಸ್ಥಾಪನೆಯಾಗುವುದರೊಂದಿಗೆ ವ್ಯವಹಾರ ಹೆಚ್ಚಳವಾಗುವ ನಿರೀಕ್ಷೆ ಇದೆ. ಒಂದು ಅಂದಾಜು ಪ್ರಕಾರ ಡೈಮಂಡ್ ಉದ್ಯಮ ವರ್ಷಕ್ಕೆ 90,000 ಕೋಟಿ ರೂನಷ್ಟು ವ್ಯವಹಾರ ಕಾಣಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!