Record: ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಆಹಾರಧಾನ್ಯ ಸಂಗ್ರಹ ಯೋಜನೆಗೆ ಕೇಂದ್ರ ಅನುಮೋದನೆ

|

Updated on: Jun 01, 2023 | 11:06 AM

World's Largest Food Grain Storage Programme: ಮುಂದಿನ 5 ವರ್ಷದಲ್ಲಿ ಆಹಾರಧಾನ್ಯ ಸಂಗ್ರಹ ಸಾಮರ್ಥ್ಯವನ್ನು 700 ಲಕ್ಷ ಟನ್​ಗಳಷ್ಟು ಹೆಚ್ಚು ಮಾಡಲು ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಭಾರತದಲ್ಲಿ 5 ವರ್ಷದ ಬಳಿಕ ಆಹಾರಧಾನ್ಯ ಸಂಗ್ರಹ ಸಾಮರ್ಥ್ಯ 2,150 ಲಕ್ಷ ಟನ್​ನಷ್ಟು ಇರಲಿದೆ.

Record: ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಆಹಾರಧಾನ್ಯ ಸಂಗ್ರಹ ಯೋಜನೆಗೆ ಕೇಂದ್ರ ಅನುಮೋದನೆ
ಆಹಾರಧಾನ್ಯ ಸಂಗ್ರಹ
Follow us on

ನವದೆಹಲಿ: ಸಹಕಾರಿ ಸೊಸೈಟಿ ವಲಯದ ಅಡಿಯಲ್ಲಿ ವಿಶ್ವದ ಅತಿದೊಡ್ಡ ಆಹಾರಧಾನ್ಯ ಸಂಗ್ರಹ ಯೋಜನೆಯನ್ನು (Food Grain Storage Programme) ತರಲು ಸರ್ಕಾರ ನೀತಿ ಜಾರಿಗೆ ತರಲಿದೆ. ಇದಕ್ಕೆ ಕೇಂದ್ರ ಸಂಪುಟದ ಅನುಮೋದನೆ ಕೂಡ ದೊರೆತಿರುವುದು ತಿಳಿದುಬಂದಿದೆ. ಮೇ 31ರಂದು ಕೇಂದ್ರ ಸಂಪುಟ ಸಭೆ ನಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಉದ್ದೇಶಿತ ಯೋಜನೆಯು ಕೋ ಆಪರೇಟಿವ್ ಸೆಕ್ಟರ್​ನಲ್ಲಿ ವಿಶ್ವದ ಅತಿದೊಡ್ಡ ಆಹಾರಧಾನ್ಯ ಸಂಗ್ರಹ ಯೋಜನೆಯಾಗಿರಲಿದೆ ಎಂದು ಹೇಳಿದ್ದಾರೆ. ಈ ಯೋಜನೆಗೆ ಸರ್ಕಾರ ಸುಮಾರು 1 ಲಕ್ಷ ಕೋಟಿ ರೂ ವಿನಿಯೋಗ ಮಾಡಲಿದೆ.

ಈ ಯೋಜನೆಯು ಸಹಕಾರಿ ಕ್ಷೇತ್ರಕ್ಕೆ ಪುಷ್ಟ ಕೊಡಲಿದೆ. ಭಾರತದಲ್ಲಿ ಆಹಾರಧಾನ್ಯ ಸಂಗ್ರಹ ವ್ಯವಸ್ಥೆಯನ್ನು ಬಲಯುತಗೊಳಿಸುವ ಒಟ್ಟಾರೆ ಗುರಿಯ ಭಾಗವಾಗಿ ಈ ಯೋಜನೆ ಇದೆ. ಸದ್ಯ ಭಾರತದಲ್ಲಿ ಆಹಾರಧಾನ್ಯ ಸಂಗ್ರಹ ಸಾಮರ್ಥ್ಯ 1,450 ಲಕ್ಷ ಟನ್​ನಷ್ಟಿದೆ. ಈ ಉದ್ದೇಶಿತ ಯೋಜನೆ ಮೂಲಕ ಈ ಸಾಮರ್ಥ್ಯವನ್ನು ಹೆಚ್ಚುವರಿ 700 ಲಕ್ಷ ಟನ್​ನಷ್ಟು ಏರಿಸುವ ಗುರಿ ಇದೆ. ಅಂದರೆ ಭಾರತದಲ್ಲಿ 2,100 ಲಕ್ಷ ಟನ್​ನಷ್ಟು ಆಹಾರಧಾನ್ಯ ಸಂಗ್ರಹ ಸಾಮರ್ಥ್ಯ ನಿರ್ಮಿಸುವುದು ಈ ಸ್ಕೀಮ್​ನಿಂದ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿLPG Cylinder Price: 19 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆ, ವಿವರಗಳು ಇಲ್ಲಿವೆ

ಮುಂದಿನ 5 ವರ್ಷಗಳಲ್ಲಿ ಅಳವಡಿಕೆ ಆಗುವ ಈ ಯೋಜನೆಯಲ್ಲಿ ದೇಶದ ಪ್ರತಿಯೊಂದು ಬ್ಲಾಕ್​ನಲ್ಲೂ 2000 ಟನ್​ಗಳಷ್ಟು ಆಹಾರಧಾನ್ಯ ಸಂಗ್ರಹ ಸಾಮರ್ಥ್ಯ ಇರುವ ಗೋಡೌನ್​ಗಳನ್ನು ನಿರ್ಮಿಸುವ ಪ್ಲಾನ್ ಇದೆ. ಇದಕ್ಕಾಗಿ ಅಂತರ್ಸಚಿವೀಯ ಸಮಿತಿಯನ್ನು ರಚಿಸಲಾಗುತ್ತದೆ.

ಆಹಾರಧಾನ್ಯ ಸಂಗ್ರಹದಿಂದ ಏನು ಲಾಭ?

ರೈತರು ಬೆಳೆಯುವ ಆಹಾರಧಾನ್ಯ ಅಥವಾ ಇನ್ಯಾವುದೇ ಬೆಳೆಯಾಗಲೀ ಸ್ವಾಭಾವಿಕವಾಗಿ ಹೆಚ್ಚು ದಿನ ಬರುವುದಿಲ್ಲ. ಇವುಗಳನ್ನು ಹೆಚ್ಚು ದಿನ ಸಂಗ್ರಹಿಸಿ ಇಟ್ಟುಕೊಳ್ಳಲು ಉಗ್ರಾಣಗಳು, ಸಂಗ್ರಹಗಾರಗಳು, ಕೋಲ್ಡ್ ಸ್ಟೋರೇಜ್​ಗಳು ಇತ್ಯಾದಿ ವ್ಯವಸ್ಥೆ ಬೇಕು. ಆಹಾರಧಾನ್ಯಗಳನ್ನು ಕೆಡದಂತೆ ಹೆಚ್ಚು ದಿನ ಇಟ್ಟುಕೊಳ್ಳುವುದರಿಂದ ಬೆಲೆ ನಿಯಂತ್ರಣ ಸಾಧ್ಯವಾಗುತ್ತದೆ. ಪಡಿತರ ವಿತರಣೆಗೆ ಅನುಕೂಲವಾಗುತ್ತದೆ. ಯಾವುದಾದರೂ ಆಹಾರಧಾನ್ಯದ ಕೊರತೆ ಉಂಟಾದಾಗ ಸಂಗ್ರಹಾಗಾರಗಳಿಂದ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಇದರಿಂದ ಆ ಆಹಾರಧಾನ್ಯದ ಬೆಲೆ ವಿಪರೀತ ಏರಿಕೆಯಾಗುವುದನ್ನು ಅಥವಾ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬಹುದು.

ಇದನ್ನೂ ಓದಿIndian Growth: 2013ಕ್ಕೆ ಮುಂಚಿನ ಭಾರತವೇ ಬೇರೆ, ಈಗಿನ ಭಾರತವೇ ಬೇರೆ; ಶಹಬ್ಬಾಸ್​ಗಿರಿ ನೀಡಿದ ಜಾಗತಿಕ ಹಣಕಾಸು ದೈತ್ಯ ಮಾರ್ಗನ್ ಸ್ಟಾನ್ಲೀ

ಸಂಗ್ರಹ ಸಾಮರ್ಥ್ಯ ಉತ್ತಮಗೊಂಡಾಗ ರೈತರಿಗೂ ಅನುಕೂಲವಾಗುತ್ತದೆ. ಆಹಾರಧಾನ್ಯಗಳ ಉತ್ಪಾದನೆ ಹೆಚ್ಚಾದಾಗ ರೈತರ ಬೆಳೆಗೆ ತೀರಾ ಕಡಿಮೆ ಬೆಲೆ ಸಿಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರ ರೈತರಿಂದ ಆಹಾರಧಾನ್ಯ ಖರೀದಿಸಿ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಆ ಆಹಾರಧಾನ್ಯದ ಅಭಾವ ಬಂದಾಗ ಇದನ್ನು ಬಳಕೆ ಮಾಡಬಹುದು. ಅಥವಾ ರೈತರೇ ತಮ್ಮ ಬೆಳೆಯನ್ನು ಈ ಉಗ್ರಾಣಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು.

ಭಾರತದಲ್ಲಿ ಒಂದು ವರ್ಷದಲ್ಲಿ 3,100 ಲಕ್ಷ ಟನ್​ನಷ್ಟು ಆಹಾರಧಾನ್ಯ ಉತ್ಪಾದನೆ ಆಗುತ್ತದೆ. ಇದರಲ್ಲಿ ಸದ್ಯ ಶೇ 47ರಷ್ಟು ಮಾತ್ರ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ