Powerful Passports 2021: ವಿಶ್ವದ ಪ್ರಭಾವಿ ಪಾಸ್​ಪೋರ್ಟ್​ ಜಪಾನ್​ನದು; ಭಾರತ ಪಾಸ್​ಪೋರ್ಟ್​ಗೆ ಎಷ್ಟನೇ ಸ್ಥಾನ?

| Updated By: Srinivas Mata

Updated on: Jun 23, 2021 | 4:21 PM

ಎಷ್ಟು ದೇಶಗಳಿಗೆ ವೀಸಾ ಇಲ್ಲದೆಯೇ ತೆರಳಬಹುದು ಎಂಬುದರ ಆಧಾರದಲ್ಲಿ ಆಯಾ ದೇಶದ ಪಾಸ್​ಪೋರ್ಟ್ ಎಷ್ಟು ಪ್ರಭಾವಿ ಎಂದು ನಿರ್ಧಾರ ಆಗುತ್ತದೆ. 2021ರ ಪ್ರಭಾವಿ ಪಾಸ್​ಪೋರ್ಟ್ ಪಟ್ಟಿಯಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದೆ.

Powerful Passports 2021: ವಿಶ್ವದ ಪ್ರಭಾವಿ ಪಾಸ್​ಪೋರ್ಟ್​ ಜಪಾನ್​ನದು; ಭಾರತ ಪಾಸ್​ಪೋರ್ಟ್​ಗೆ ಎಷ್ಟನೇ ಸ್ಥಾನ?
ಪಾಸ್​ಪೋರ್ಟ್ (ಪ್ರಾತಿನಿಧಿಕ ಚಿತ್ರ)
Follow us on

ವಿಶ್ವದ ಅತ್ಯಂತ ಪ್ರಭಾವಿ ಪಾಸ್​ಪೋರ್ಟ್ 2021ರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎಷ್ಟು ದೇಶಗಳಿಗೆ ಆ ಪಾಸ್​ಪೋರ್ಟ್​ ಇದ್ದ ನಾಗರಿಕರಿಗೆ ವೀಸಾ ಇಲ್ಲದಂತೆ ಪ್ರವೇಶಾವಕಾಶ ಇರುತ್ತದೋ ಅಷ್ಟು ಪ್ರಭಾವಿ ಎಂದು ಅಳೆಯಲಾಗುತ್ತದೆ. ಇದೀಗ ಆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಜಪಾನ್. ಒಂದು ವೇಳೆ ಜಪಾನ್ ದೇಶದ ಪಾಸ್​ಪೋರ್ಟ್​ ಇದ್ದಲ್ಲಿ 193 ದೇಶಗಳಿಗೆ ವೀಸಾ ಇಲ್ಲದೆಯೂ ತೆರಳಬಹುದು. ಎರಡನೇ ಸ್ಥಾನದಲ್ಲಿ ಇರುವ ಸಿಂಗಾಪೂರ್. ಈ ದೇಶದ ಪಾಸ್​ಪೋರ್ಟ್​ ಇದ್ದಲ್ಲಿ 192 ದೇಶಗಳಿಗೆ ವೀಸಾ ಇಲ್ಲದೆಯೂ ಪ್ರವೇಶಾವಕಾಶ ಇದೆ.

ಹೀಗೆ ಮೊದಲ ಹತ್ತು ಸ್ಥಾನದಲ್ಲಿ ಇರುವ ದೇಶಗಳ ಪಾಸ್​ಪೋರ್ಟ್ ವಿವರ ಹೀಗಿದೆ: ಜಪಾನ್ (193 ದೇಶಗಳು), ಸಿಂಗಾಪೂರ್ (192 ದೇಶಗಳು), ಜರ್ಮನಿ, ದಕ್ಷಿಣ ಕೊರಿಯಾ (191 ದೇಶಗಳು), ಫಿನ್​ಲ್ಯಾಂಡ್​, ಇಟಲಿ, ಲಕ್ಸೆಂಬರ್ಗ್, ಸ್ಪೇನ್ (190 ದೇಶಗಳು), ಆಸ್ಟ್ರಿಯಾ, ಡೆನ್ಮಾರ್ಕ್ (189 ದೇಶಗಳು), ಫ್ರಾನ್ಸ್, ಐರ್ಲೆಂಡ್, ನೆದರ್​ಲೆಂಡ್ಸ್, ಪೋರ್ಚುಗಲ್, ಸ್ವೀಡನ್ (188 ದೇಶಗಳು), ಬೆಲ್ಜಿಯಂ, ನ್ಯೂಜಿಲ್ಯಾಂಡ್, ಸ್ವಿಟ್ಜರ್​ಲೆಂಡ್, ಯುಕೆ, ಯುಎಸ್ (187 ದೇಶಗಳು), ಜೆಕ್ ಗಣರಾಜ್ಯ, ಗ್ರೀಸ್, ಮಾಲ್ಟಾ, ನಾರ್ವೆ (186 ದೇಶಗಳು), ಆಸ್ಟ್ರೇಲಿಯಾ, ಕೆನಡಾ (185 ದೇಶಗಳು), ಹಂಗೇರಿ, ಲಿಥುಯೇನಿಯಾ, ಪೋಲೆಂಡ್, ಸ್ಲೋವೆಕಿಯಾ (183 ದೇಶಗಳು). ಈ ಹತ್ತರ ಪಟ್ಟಿಯಲ್ಲಿ ಇರುವ ದೇಶಗಳು ಅಷ್ಟು ಸಂಖ್ಯೆಯ ದೇಶಗಳಿಗೆ ತೆರಳುವ ಮುನ್ನ ವೀಸಾ ಪಡೆಯಬೇಕು ಅಂತಿಲ್ಲ. ಅಂದ ಹಾಗೆ, ಭಾರತದ ಪಾಸ್​ಪೋರ್ಟ್​ ಹೊಂದಿದ್ದಲ್ಲಿ 58 ದೇಶಗಳಿಗೆ ವೀಸಾ ಇಲ್ಲದೆ ತೆರಳಬಹುದು. ಆ ಮೂಲಕ ಜಾಗತಿಕ ಪಟ್ಟಿಯಲ್ಲಿ 84ನೇ ಸ್ಥಾನದಲ್ಲಿದೆ.

ಪ್ರಭಾವಿ ಪಾಸ್​ಪೋರ್ಟ್​ಗಳು ಪಟ್ಟಿಯಲ್ಲಿ ತೀರಾ ಕೆಳಮಟ್ಟದಲ್ಲಿ ಇರುವಂಥ ದೇಶಗಳ ವಿವರ ಹೀಗಿದೆ. ಕೊಸೊವೊ ಹಾಗೂ ಲಿಬಿಯಾ (101ನೇ ಸ್ಥಾನ- 40 ದೇಶಗಳು, ಉತ್ತರ ಕೊರಿಯಾ (102ನೇ ಸ್ಥಾನ- 39 ದೇಶಗಳು), ನೇಪಾಳ (103ನೇ ಸ್ಥಾನ- 38 ದೇಶಗಳು), ಪ್ಯಾಲೇಸ್ತಿನೀಯನ್ ಪ್ರಾಂತ್ಯ (104ನೇ ಸ್ಥಾನ- 37 ದೇಶಗಳು), ಸೋಮಾಲಿಯಾ (105ನೇ ಸ್ಥಾನ- 34 ದೇಶಗಳು), ಯೆಮೆನ್ (106ನೇ ಸ್ಥಾನ- 33 ದೇಶಗಳು), ಪಾಕಿಸ್ತಾನ (107ನೇ ಸ್ಥಾನ- 32 ದೇಶಗಳು), ಸಿರಿಯಾ (108ನೇ ಸ್ಥಾನ- 29 ದೇಶಗಳು), ಇರಾಕ್ (109ನೇ ಸ್ಥಾನ- 28 ದೇಶಗಳು) ಹಾಗೂ ಅಫ್ಗಾನಿಸ್ತಾನ (110ನೇ ಸ್ಥಾನ- 26 ದೇಶಗಳು).

ಇದನ್ನೂ ಓದಿ: DigiLocker: ಡಿಜಿಲಾಕರ್ ಬಳಸಿ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಲು ಸುಲಭ ವಿಧಾನ ಇಲ್ಲಿದೆ

ಇದನ್ನೂ ಓದಿ: Personal finance: ವ್ಯಕ್ತಿಯು ಮೃತಪಟ್ಟ ನಂತರ ಆಧಾರ್, ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಏನು ಮಾಡಬೇಕು?

(World’s most powerful passport 2021 is Japan. Here is the list of top 10. And India in 84th position. Here is the complete details)

Published On - 4:17 pm, Wed, 23 June 21