Sign In

By signing in or creating an account, you agree with Associated Broadcasting Company's Terms & Conditions and Privacy Policy.

Yes Bank FD Rates: ಯೆಸ್ ಬ್ಯಾಂಕ್ ಎಫ್​ಡಿ ದರ ಪರಿಷ್ಕರಣೆ; ಹಿರಿಯ ನಾಗರಿಕರಿಗೆ ಶೇ 7.50ರ ವರೆಗೆ ಸಿಗಲಿದೆ ಬಡ್ಡಿ

2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ದರವನ್ನು ಯೆಸ್ ಬ್ಯಾಂಕ್ ಪರಿಷ್ಕರಣೆ ಮಾಡಿದ್ದು, ಡಿಸೆಂಬರ್ 5ರಿಂದಲೇ ಅಸ್ತಿತ್ವಕ್ಕೆ ಬಂದಿದೆ. ಇದರೊಂದಿಗೆ ಹಿರಿಯ ನಾಗರಿಕರು ಶೇಕಡಾ 7.50ರ ವರೆಗೂ ಬಡ್ಡಿ ಪಡೆಯಬಹುದಾಗಿದೆ.

Yes Bank FD Rates: ಯೆಸ್ ಬ್ಯಾಂಕ್ ಎಫ್​ಡಿ ದರ ಪರಿಷ್ಕರಣೆ; ಹಿರಿಯ ನಾಗರಿಕರಿಗೆ ಶೇ 7.50ರ ವರೆಗೆ ಸಿಗಲಿದೆ ಬಡ್ಡಿ
ಯೆಸ್ ಬ್ಯಾಂಕ್ Image Credit source: PTI
Follow us
TV9 Web
| Updated By: Ganapathi Sharma

Updated on: Dec 06, 2022 | 5:45 PM

ನವದೆಹಲಿ: 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ ದರವನ್ನು (FD Rates) ಯೆಸ್ ಬ್ಯಾಂಕ್ (Yes Bank) ಪರಿಷ್ಕರಣೆ ಮಾಡಿದ್ದು, ಡಿಸೆಂಬರ್ 5ರಿಂದಲೇ ಅಸ್ತಿತ್ವಕ್ಕೆ ಬಂದಿದೆ. ಇದರೊಂದಿಗೆ ಹಿರಿಯ ನಾಗರಿಕರು ಶೇಕಡಾ 7.50ರ ವರೆಗೂ ಬಡ್ಡಿ ಪಡೆಯಬಹುದಾಗಿದೆ. 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್​​ಡಿ ಪರಿಷ್ಕೃತ ಬಡ್ಡಿ ದರ ಶೇಕಡಾ 3.25ರಿಂದ 7ರ ವರೆಗೆ ಇದೆ.

7ರಿಂದ 14 ದಿನಗಳ ಅವಧಿಯ ಎಫ್​ಡಿಗೆ ಬ್ಯಾಂಕ್ ಶೇಕಡಾ 3.25ರ ಬಡ್ಡಿ ನಿಗದಿಪಡಿಸಿದೆ. 15ರಿಂದ 45 ದಿನಗಳ ಅವಧಿಯ ಎಫ್​ಡಿ ಬಡ್ಡಿ ದರವನ್ನು ಶೇಕಡಾ 3.70ಕ್ಕೆ ಹೆಚ್ಚಿಸಿದೆ. 46ರಿಂದ 90 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 4.10 ಹಾಗೂ 91 ದಿನಗಳಿಂದ 180 ದಿನಗಳ ಅವಧಿಯ ಎಫ್​​ಡಿಗೆ ಶೇಕಡಾ 4.75ರ ಬಡ್ಡಿ ನಿಗದಿಪಡಿಸಿದೆ. 181ರಿಂದ 271 ದಿನಗಳ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್​ಡಿಗೆ ಶೇಕಡಾ 5.50 ಹಾಗೂ 272 ದಿನಗಳಿಂದ ಒಂದು ವರ್ಷದ ಒಳಗಿನ ಅವಧಿಯ ಎಫ್​ಡಿಗೆ ಶೇಕಡಾ 5.75ರ ಬಡ್ಡಿ ನಿಗದಿಪಡಿಸಿದೆ.

1 ವರ್ಷದಿಂದ 20 ತಿಂಗಳ ನಡುವಣ ಅವಧಿಯ ಮತ್ತು 22 ತಿಂಗಳುಗಳಿಂದ 36 ತಿಂಗಳ ಒಳಗಿನ ಅವಧಿಯ ಎಫ್​ಡಿಗೆ ಶೇಕಡಾ 7ರ ಬಡ್ಡಿ ನಿಗದಿಪಡಿಸಿದೆ. 36 ತಿಂಗಳು ಮೇಲ್ಪಟ್ಟ ಹಾಗೂ 120 ತಿಂಗಳ ಒಳಗಿನ ಅವಧಿಯ ಎಫ್​ಡಿಗೆ ಶೇಕಡಾ 6.75ರ ಬಡ್ಡಿ ದೊರೆಯಲಿದೆ.

ಇದನ್ನೂ ಓದಿ: RBI MPC Meeting: ಆರ್​ಬಿಐ ಹಣಕಾಸು ನೀತಿ ಸಭೆ; ಸಾಲದ ಬಡ್ಡಿ ದರ ಹೆಚ್ಚಳದ ಆತಂಕದಲ್ಲಿ ಗ್ರಾಹಕರು

ಹಿರಿಯ ನಾಗರಿಕರ ವಿವಿಧ ಎಫ್​ಡಿಗೆ ಶೇಕಡಾ 3.75ರಿಂದ ತೊಡಗಿ ಶೇಕಡಾ 7.50 ವರೆಗೂ ಬಡ್ಡಿ ದೊರೆಯಲಿದೆ.

ಅಕ್ಟೋಬರ್​​ನಲ್ಲಿ ವಿಶೇಷ ಎಫ್​ಡಿ ಆರಂಭಿಸಿದ್ದ ಯೆಸ್ ಬ್ಯಾಂಕ್

20 ತಿಂಗಳುಗಳಿಂದ 22 ತಿಂಗಳ ಒಳಗಿನ ವಿಶೇಷ ಎಫ್​ಡಿ ಯೋಜನೆಯನ್ನು ಅಕ್ಟೋಬರ್​ನಲ್ಲಿ ಯೆಸ್ ಬ್ಯಾಂಕ್ ಆರಂಭಿಸಿತ್ತು. ಈ ಎಫ್​ಡಿಗೆ ಸಾಮಾನ್ಯ ಗ್ರಾಹಕರಿಗೆ ಶೇಕಡಾ 7.25 ಹಾಗೂ ಹಿರಿಯ ನಾಗರಿಕರಿಗೆ ಶೇಕಡಾ 7.75ರ ಬಡ್ಡಿ ನೀಡಲಾಗುತ್ತಿದೆ.

ಎಸ್​​ಬಿಐ, ಐಸಿಐಸಿಐ ಸೇರಿದಂತೆ ಅನೇಕ ಬ್ಯಾಂಕ್​ಗಳು ಇತ್ತೀಚೆಗೆ ಎಫ್​ಡಿ ಸೇರಿದಂತೆ ವಿವಿಧ ಠೇವಣಿಗಳು ಮತ್ತು ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ಆರ್​ಬಿಐ ರೆಪೊ ದರ ಮೇ ನಂತರ ಸೆಪ್ಟೆಂಬರ್ ವರೆಗೆ 190 ಮೂಲಾಂಶ ಹೆಚ್ಚಳವಾಗಿದ್ದು, ಅದರ ಪ್ರಯೋಜನವನ್ನು ತುಸು ಮಟ್ಟಿಗೆ ಬ್ಯಾಂಕ್​ಗಳು ಗ್ರಾಹಕರಿಗೆ ತಲುಪಿಸಲು ಮುಂದಾಗಿವೆ. ಆರ್​ಬಿಐ ಹಣಕಾಸು ನೀತಿ ಸಭೆ ಸೋಮವಾರದಿಂದ ಆರಂಭವಾಗಿದ್ದು, ಬುಧವಾರ ನೀತಿ ಪ್ರಕಟವಾಗಲಿದೆ. ಮತ್ತೆ ರೆಪೊ ದರ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಒಂದು ವೇಳೆ ಹೆಚ್ಚಳವಾದಲ್ಲಿ ಮರಳಿ ಬ್ಯಾಂಕ್​​ಗಳು ಸಾಲ ಹಾಗೂ ಠೇವಣಿಗಳ ಬಡ್ಡಿ ದರ ಹೆಚ್ಚಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ