AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

YouTube: ಭಾರತದ ಜಿಡಿಪಿಗೆ 2021ರಲ್ಲಿ ಯೂಟ್ಯೂಬರ್​ಗಳಿಂದ 10 ಸಾವಿರ ಕೋಟಿ ರೂ. ಕೊಡುಗೆ; ವರದಿ

ಉದ್ಯಮ ಪೂರಕ ವಾತಾವರಣದೊಂದಿಗೆ ಭಾರತದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಯೂಟ್ಯೂಬ್ (YouTube) 2021ರಲ್ಲಿ ಜಿಡಿಪಿಗೆ 10,000 ಕೋಟಿ ರೂ. ಕೊಡುಗೆ ನೀಡಿದೆ ಎಂದು ವರದಿಯಾಗಿದೆ.

YouTube: ಭಾರತದ ಜಿಡಿಪಿಗೆ 2021ರಲ್ಲಿ ಯೂಟ್ಯೂಬರ್​ಗಳಿಂದ 10 ಸಾವಿರ ಕೋಟಿ ರೂ. ಕೊಡುಗೆ; ವರದಿ
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on:Dec 19, 2022 | 4:33 PM

Share

ನವದೆಹಲಿ: ಉದ್ಯಮ ಪೂರಕ ವಾತಾವರಣದೊಂದಿಗೆ ಭಾರತದಲ್ಲಿ (India) ಹೆಚ್ಚು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಯೂಟ್ಯೂಬ್ (YouTube) 2021ರಲ್ಲಿ ಜಿಡಿಪಿಗೆ 10,000 ಕೋಟಿ ರೂ. ಕೊಡುಗೆ ನೀಡಿದೆ ಎಂದು ವರದಿಯಾಗಿದೆ. ತಂತ್ರಜ್ಞಾನ ಕಂಪನಿಗಳು, ದೇಶೀಯ ಇಂಟರ್​ನೆಟ್ ಸಂಸ್ಥೆಗಳೊಂದಿಗೆ ಪೈಪೋಟಿಗೆ ಇಳಿದಿರುವ ಯೂಟ್ಯೂಬ್ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮದೇ ಚಾನೆಲ್​ಗಳನ್ನು ಸೃಷ್ಟಿಸಲು ಪ್ರೋತ್ಸಾಹಿಸುತ್ತಿದೆ. ಈ ಮೂಲಕ ಕ್ರಿಯೇಟರ್​ಗಳನ್ನು ಸೆಳೆಯುತ್ತಿದೆ. ಸುಮಾರು 7.5 ಲಕ್ಷ ಪೂರ್ಣಾವಧಿಯ ಉದ್ಯೋಗ ಸೃಷ್ಟಿಸಿದೆ ಎಂದು ಕನ್ಸಲ್ಟಿಂಗ್ ಸಂಸ್ಥೆ ‘ಆಕ್ಸ್​ಫರ್ಡ್ ಎಕನಾಮಿಕ್ಸ್’​ನ ವರದಿ ತಿಳಿಸಿದೆ. 2020ರ ಮಾರ್ಚ್​​ 3ರಿಂದ 2022ರ ವರೆಗಿನ ದತ್ತಾಂಶಗಳನ್ನು ಪರಿಗಣಿಸಿಕೊಂಡು ಈ ವರದಿ ಸಿದ್ಧಪಡಿಸಲಾಗಿದೆ.

2020ರಲ್ಲಿ ಯೂಟ್ಯೂಬ್ ವ್ಯವಸ್ಥೆಯು ಭಾರತದ ಜಿಡಿಪಿಗೆ 6,800 ಕೋಟಿ ರೂ. ಕೊಡುಗೆ ನೀಡಿದೆ. 6,83,900 ಪೂರ್ಣಾವಧಿ ಉದ್ಯೋಗ ಸೃಷ್ಟಿಗೆ ನೆರವಾಗಿದೆ ಎಂದು ವರದಿ ತಿಳಿಸಿದೆ.

ಯೂಟ್ಯೂಬರ್​ಗಳ ಸೃಷ್ಟಿಗೆ ಪೂರಕ ವಾತಾವರಣದ ಮೂಲಕ ಭಾರತದ ಆರ್ಥಿಕತೆಗೆ ಯೂಟ್ಯೂಬ್​ ಬಲ ತುಂಬುತ್ತಿರುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವುದು ಸಂತಸ ಮೂಡಿಸಿದೆ. ವೀಕ್ಷಕರ ಜತೆ ತೊಡಗಿಸಿಕೊಳ್ಳಲು ಹೊಸ ವಿಧಾನಗಳನ್ನು ಕ್ರಿಯೇಟರ್​​ಗಳಿಗೆ ನೀಡುವ ಮೂಲಕ ನಾವು ಬಹು ದೂರ ಕ್ರಮಿಸಿದ್ದೇವೆ ಎಂದು ಯೂಟ್ಯೂಬ್​ನ ದಕ್ಷಿಣ, ಆಗ್ನೇಯ ಏಷ್ಯಾ ವಿಭಾಗದ ನಿರ್ದೇಶಕ ಅಜಯ್ ವಿದ್ಯಾಸಾಗರ್ ತಿಳಿಸಿದ್ದಾರೆ.

ಇದನ್ನೂ ಓದಿ: No Cost EMI: ನೋ ಕಾಸ್ಟ್ ಇಎಂಐ ಆಯ್ಕೆ ಮಾಡುವ ಮುನ್ನ ಈ ವಿಚಾರಗಳನ್ನು ತಿಳಿದಿರಿ

ಈ ವರ್ಷ 5,633 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 523 ಉದ್ಯಮಗಳು ಹಾಗೂ 4,021 ಯೂಟ್ಯೂಬ್ ಬಳಕೆದಾರರು ಎಂದು ‘ಆಕ್ಸ್​ಫರ್ಡ್ ಎಕನಾಮಿಕ್ಸ್’ ವರದಿ ತಿಳಿಸಿದೆ. 10,000 ಸಬ್​ಸ್ಕ್ರೈಬರ್​ಗಳನ್ನು ಹೊಂದಿರುವ ಯೂಟ್ಯೂಬರ್​ಗಳು ತಮ್ಮ ವಿಡಿಯೊಗಳಿಗೆ ಯೂಟ್ಯೂಬ್​ನಿಂದ ಮತ್ತು ಇತರ ಮೂಲಗಳಿಂದ ಆದಾಯ ಗಳಿಸಲು ಯೂಟ್ಯೂಬ್ ಅನುವು ಮಾಡಿಕೊಟ್ಟಿದೆ ಎಂದು ಗೂಗಲ್ ತಿಳಿಸಿದೆ. 10,000ಕ್ಕಿಂತ ಕಡಿಮೆ ಸಬ್​​ಸ್ಕ್ರೈಬರ್​ ಇರುವ ಕೆಲವು ಯೂಟ್ಯೂಬರ್​ಗಳಿಗೂ ಆದಾಯ ಗಳಿಸಲು ಅವಕಾಶ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Mon, 19 December 22

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು