ಹತ್ತು ನಿಮಿಷದಲ್ಲಿ ದಿನಸಿ ಡೆಲಿವರಿ ಕೊಡುವ ಝೆಪ್ಟೋದಲ್ಲಿ ಹತ್ತೇ ನಿಮಿಷದಲ್ಲಿ ಲ್ಯಾಂಡ್ ಬುಕಿಂಗ್
Invest in real estate through Zepto: ಕ್ವಿಕ್ ಕಾಮರ್ಸ್ ಕಂಪನಿಯಾದ ಝೆಪ್ಟೋ ಈಗ ರಿಯಲ್ ಎಸ್ಟೇಟ್ ಬುಕಿಂಗ್ ಬ್ಯುಸಿನೆಸ್ಗೂ ಕೈಹಾಕಿದೆ. ಹೌಸ್ ಆಫ್ ಅಭಿನಂದನ್ ಲೋಧ ಎನ್ನುವ ರಿಯಲ್ ಎಸ್ಟೇಟ್ ಕಂಪನಿಯೊಂದಿಗೆ ಝೆಪ್ಟೋ ಟೈಯಪ್ ಮಾಡಿಕೊಂಡಿದೆ. ಝೆಪ್ಟೋದಲ್ಲಿ ಬೇಕಾದ ಲ್ಯಾಂಡ್ ಪ್ರಾಜೆಕ್ಟ್ ಅನ್ನು ಆಯ್ದುಕೊಂಡು ಹೂಡಿಕೆ ಮಾಡಲು ಬುಕಿಂಗ್ ಮಾಡಬಹುದು.

ನವದೆಹಲಿ, ಆಗಸ್ಟ್ 21: ಗ್ರಾಹಕರು ಆನ್ಲೈನ್ನಲ್ಲಿ ಬುಕ್ ಮಾಡಿದ ದಿನಸಿ ವಸ್ತುಗಳನ್ನು ಕೇವಲ 10 ನಿಮಿಷದಲ್ಲಿ ಪ್ಯಾಕ್ ಮಾಡಿ ಮನೆಗೆ ತಲುಪಿಸುವ ಕ್ವಿಕ್ ಕಾಮರ್ಸ್ ಕಂಪನಿಯಾದ ಝೆಪ್ಟೋ (Zepto) ಇದೀಗ ಇಂಥದ್ದೇ ಮಾದರಿಯಲ್ಲಿ ಲ್ಯಾಂಡ್ ಬುಕಿಂಗ್ ಆಫರ್ ಕೊಟ್ಟಿದೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಝೆಪ್ಟೋ ಆ್ಯಪ್ ತೆರೆದು ಹತ್ತೇ ನಿಮಿಷದಲ್ಲಿ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ (real estate) ಹೂಡಿಕೆ ಮಾಡಬಹುದು. ಇದಕ್ಕಾಗಿ ಹೌಸ್ ಆಫ್ ಅಭಿನಂದನ್ ಲೋಧ (ಎಚ್ಒಎಬಿಎಲ್) ಎನ್ನುವ ರಿಯಲ್ ಎಸ್ಟೇಟ್ ಡೆವಲಪರ್ ಜೊತೆ ಝೆಪ್ಟೋ ಹೊಂದಾಣಿಕೆ ಮಾಡಿಕೊಂಡಿದೆ.
ಈ ಒಪ್ಪಂದದ ಮೂಲಕ ಝೆಪ್ಟೋ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ. ಇದಕ್ಕಿಂತ ಮುಖ್ಯವಾಗಿ ಜನಸಾಮಾನ್ಯರಿಗೆ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಹಿಂದೆಂದಿಗಿಂತಲೂ ಸುಲಭ, ಸರಳಗೊಳ್ಳಲಿದೆ. ಭೂ ಆಸ್ತಿ ಪೂರ್ಣ ಡಿಜಿಟಲ್ ರೂಪದಲ್ಲಿ ದೊರಕಲಿದೆ.
ಇದನ್ನೂ ಓದಿ: ಎರಡೂವರೆ ಲಕ್ಷ ಪೋಸ್ಟ್ಮ್ಯಾನ್ಗಳಿಗೆ ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಗಳಾಗಲು ಸಿಗಲಿದೆ ತರಬೇತಿ
ಹತ್ತು ನಿಮಿಷದಲ್ಲಿ ಹೂಡಿಕೆ ಸಾಧ್ಯವಾ?
ಹತ್ತು ನಿಮಿಷದಲ್ಲಿ ಝೆಪ್ಟೋ ಮೂಲಕ ರಿಯಲ್ ಎಸ್ಟೇಟ್ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಲಾಗುವುದಿಲ್ಲ. ಝೆಪ್ಟೋ ಆ್ಯಪ್ನಲ್ಲಿ ಗ್ರಾಹಕರು ಯಾವುದಾದರೂ ಲಭ್ಯ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಅನ್ನು ಹೂಡಿಕೆಗಾಗಿ ಆಯ್ದುಕೊಳ್ಳಬಹುದು. ಈ ರೀತಿ ಪ್ರಾಜೆಕ್ಟ್ ಬುಕ್ ಮಾಡಿದ ಹತ್ತು ನಿಮಿಷದೊಳಗೆ ಏಜೆಂಟ್ ಅಥವಾ ತಜ್ಞರೊಬ್ಬರು ಸಂಪರ್ಕಿಸುತ್ತಾರೆ. ವಿಡಿಯೋ ಕಾಲ್ ಮೂಲಕ ಮುಂದಿನ ಪ್ರಕ್ರಿಯೆ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.
ಹೌಸ್ ಆಫ್ ಅಭಿನಂದನ್ ಲೋಧಾ ಸಂಸ್ಥೆಯು ಕೆಲ ಪ್ರಮುಖ ಸ್ಥಳಗಳಲ್ಲಿ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಹೊಂದಿದೆ. ಗೋವಾ, ಆಲಿಬಾಗ್, ಅಯೋಧ್ಯ, ದಪೋಲಿ, ವೃಂದಾವನ್ನಲ್ಲಿ ಲ್ಯಾಂಡ್ ಡೆವಲಪ್ಮೆಂಟ್ ಪ್ರಾಜೆಕ್ಟ್ ನಡೆಸುತ್ತಿದೆ. ಅಮೃತಸರ್, ಶಿಮ್ಲಾದಲ್ಲೂ ಹೊಸ ಪ್ರಾಜೆಕ್ಟ್ ಶುರು ಮಾಡುತ್ತಿದೆ. ಝೆಪ್ಟೋ ಆ್ಯಪ್ನಲ್ಲಿ ಲಾಗಿನ್ ಆಗಿ ನೀವು ಸರ್ಚ್ ಬಾರ್ನಲ್ಲಿ ‘land’ ಎಂದು ಟೈಪಿಸಿದರೆ ವಿವಿಧ ಪ್ರಾಜೆಕ್ಟ್ಗಳ ಪಟ್ಟಿ ಕಾಣುತ್ತದೆ. ನಿಮಗೆ ಬೇಕಾದ್ದನ್ನು ಆಯ್ದುಕೊಳ್ಳಬಹುದು.
ಇದನ್ನೂ ಓದಿ: ಭಾರತದ ವಿರುದ್ಧ ಟ್ರಂಪ್ ಕಿವಿಯೂದುತ್ತಿರುವವರು ಯಾರು? ಟ್ರಂಪ್ಗೆ ಇವರು ಟ್ಯಾರಿಫ್ ಗುರು
ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ಗಳು
ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಆನ್ಲೈನ್ನಲ್ಲಿ ಹೂಡಿಕೆ ಮಾಡಲು ಹಲವು ಅವಕಾಶಗಳಿವೆ. ಅದರಲ್ಲಿ ಆರ್ಇಐಟಿ ಒಂದು. ಇವು ರಿಯಲ್ ಎಸ್ಟೇಟ್ ಇನ್ವೆಸ್ಟ್ ಟ್ರಸ್ಟ್ಗಳು. ಒಂದು ಆಸ್ತಿಯ ಮೇಲೆ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಆ ಆಸ್ತಿಯ ಮೌಲ್ಯ ಎಷ್ಟು ಅಭಿವೃದ್ಧಿ ಆಗುತ್ತದೋ, ಅದರಿಂದ ಬಾಡಿಗೆ ಆದಾಯ ಎಷ್ಟು ಬೆಳೆಯುತ್ತದೋ, ಅದಕ್ಕೆ ತಕ್ಕುದಾದ ರಿಟರ್ನ್ ಅನ್ನು ಹೂಡಿಕೆದಾರರು ಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




