Zomato: ಜೊಮಾಟೋ ವಿರುದ್ಧ ಕೋರ್ಟ್ ಕೇಸ್; ಫೂಡ್ ಡೆಲಿವರಿಯಲ್ಲಿ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದ ಗ್ರಾಹಕ

Gurugram Resident Files Lawsuit Against Zomato: ಗುರುಗ್ರಾಮ್​ನ ನಿವಾಸಿಯೊಬ್ಬರು ಜೊಮಾಟೋ ವಿರುದ್ಧ ನ್ಯಾಯಾಲಯದ ಮಟ್ಟಿಲೇರಿದ್ದಾರೆ. ಪ್ರಖ್ಯಾತ ಹೋಟೆಲ್​ಗಳಿಂದ ಆಹಾರ ಬುಕಿಂಗ್ ಮಾಡಿದರೆ ಬೇರೆ ಕಡೆಯಿಂದ ಆಹಾರ ಸರಬರಾಜು ಆಗುತ್ತಿದೆ ಎಂಬುದು ಆರೋಪ. ದೆಹಲಿಯ ಕೋರ್ಟ್ ಇದೀಗ ಜೊಮಾಟೋಗೆ ಸಮನ್ಸ್ ನೋಟೀಸ್ ಹೊರಡಿಸಿದೆ. ಮಾರ್ಚ್ 20ಕ್ಕೆ ವಿಚಾರಣೆ ನಿಗದಿ ಮಾಡಲಾಗಿದೆ.

Zomato: ಜೊಮಾಟೋ ವಿರುದ್ಧ ಕೋರ್ಟ್ ಕೇಸ್; ಫೂಡ್ ಡೆಲಿವರಿಯಲ್ಲಿ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದ ಗ್ರಾಹಕ
ಜೊಮಾಟೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 12, 2024 | 2:03 PM

ನವದೆಹಲಿ, ಫೆಬ್ರುವರಿ 12: ದೊಡ್ಡ ರೆಸ್ಟೋರೆಂಟ್​ಗಳ ಹೆಸರಿನಲ್ಲಿ ಆರ್ಡರ್ ಬುಕ್ ಮಾಡಿ, ಬೇರೆ ಸ್ಥಳಗಳಿಂದ ಗ್ರಾಹಕರಿಗೆ ಆಹಾರ ಪೂರೈಸಿದ ಆರೋಪದ ಮೇಲೆ ಜೊಮಾಟೋ ವಿರುದ್ಧ ದೆಹಲಿಯ ಗ್ರಾಹಕರೊಬ್ಬರು ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಈ ಸಂಬಂಧ ನ್ಯಾಯಾಲಯವು ಜೊಮಾಟೋಗೆ ಸಮನ್ಸ್ ನೋಟೀಸ್ (Court summons to Zomato) ಕಳುಹಿಸಿದೆ. ಸೌರವ್ ಮಲ್ (Saurav Mall) ಎಂಬ ಗುರುಗ್ರಾಮ್ ನಿವಾಸಿ ಇತ್ತೀಚೆಗೆ ಕೋರ್ಟ್​ನಲ್ಲಿ ಜೊಮಾಟೋ ವಿರುದ್ಧ ದೂರು ನೀಡಿದ್ದರು. ಮೊನ್ನೆಮೊನ್ನೆ ಸಿವಿಲ್ ಜಡ್ಜ್ ಉಮೇಶ್ ಕುಮಾರ್ ಈ ಅರ್ಜಿ ವಿಚಾರಣೆ ನಡೆಸಿ ಇದೀಗ ಜೊಮಾಟೊಗೆ ಸಮನ್ಸ್ ಹೊರಡಿಸಿದ್ದಾರೆ. ಮಾರ್ಚ್ 20ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.

ಜೊಮಾಟೋ ವಿರುದ್ಧ ಗ್ರಾಹಕ ಸಿಟ್ಟಾಗಲು ಏನು ಕಾರಣ?

ನವದೆಹಲಿಯಲ್ಲಿ ಜೊಮಾಟೋ ‘ದಿಲ್ಲಿ ಕೇ ಲೆಜೆಂಟ್ಸ್’ ಎಂಬ ಸಬ್ ಕೆಟಗರಿ ಹೊಂದಿದ್ದು, ಅದರ ಅಡಿಯಲ್ಲಿ ಖ್ಯಾತ ರೆಸ್ಟೋರೆಂಟ್​ಗಳಿಂದ ತಾಜಾ ಆಹಾರ ಬುಕ್ ಮಾಡುವ ಅವಕಾಶ ನೀಡಿದೆ. ಆದರೆ, ಇಲ್ಲಿ ಆರ್ಡರ್ ಬುಕ್ ಮಾಡಿದರೆ ಆಹಾರವು ಈ ಹೋಟೆಲ್​ಗಳಿಂದ ಬರುವುದಿಲ್ಲ. ಬೇರೆ ಕಡೆಯಿಂದ ಫುಡ್ ಪಿಕಪ್ ಆಗಿ ಡೆಲಿವರಿ ಆಗುತ್ತದೆ ಎಂಬುದು ದೂರುದಾರರ ಆರೋಪ.

ಇದನ್ನೂ ಓದಿ: ಚೀನಾ ಕಂಪನಿಗಳನ್ನು ಹೀಗೆ ಗುರಿ ಮಾಡಿದರೆ ಸರಬರಾಜುದಾರರು ಭಾರತಕ್ಕೆ ಬರಲು ಭಯಬೀಳಬಹುದು: ಶಿಯೋಮಿ ಕಳವಳ

ದೆಹಲಿಯ ಜಾಮಾ ಮಸೀದಿ, ಕೈಲಾಶ್ ಕಾಲೊನಿ ಮತ್ತು ಜಂಗಪುರ ಎಂಬ ಮೂರು ಸ್ಥಳಗಳಲ್ಲಿ ಮೂರು ಬೇರೆ ಬೇರೆ ಹೋಟೆಲ್​ಗಳಿಂದ ಜೊಮಾಟೋದಲ್ಲಿ ಸೌರವ್ ಮಲ್ ಎಂಬುವವರು ಅಕ್ಟೋಬರ್ 24ರಂದು ಆಹಾರ ಬುಕ್ ಮಾಡಿದ್ದಾರೆ. ಬಳಿಕ ಡೆಲಿವರಿ ಪಾರ್ಟ್ನರ್ ಲೊಕೇಶನ್ ಅನ್ನು ಅವರು ಟ್ರ್ಯಾಕ್ ಮಾಡಿದ್ದಾರೆ. ಬುಕ್ ಮಾಡಲಾದ ರೆಸ್ಟೋರೆಂಟ್ ಬದಲು ಅಪರಿಚಿತ ಸ್ಥಳವೊಂದರಿಂದ ಆಹಾರ ಪಿಕಪ್ ಆಗಿದೆ ಎಂದು ಗ್ರಾಹಕ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

‘ಆ ರೆಸ್ಟೋರೆಂಟ್​ನ ಯಾವ ಶಾಖೆಯೂ ಇಲ್ಲದ ಸ್ಥಳದಿಂದ ಆಹಾರ ಹೇಗೆ ತರಲಾಯಿತು? ರೆಸ್ಟೋರೆಂಟ್​ನ ಒರಿಜಿನಲ್ ಪ್ಯಾಕೇಜಿಂಗ್ ಯಾಕೆ ಇರಲಿಲ್ಲ? ರೆಸ್ಟೋರೆಂಟ್ ಪಾರ್ಟ್ನರ್​ನಿಂದಲೇ ಆಹಾರ ತಯಾರಾಗಿದೆ ಎನ್ನುವುದಕ್ಕೆ ಏನು ಖಾತ್ರಿ? ಆಹಾರ ಹೊಸದಾಗಿ ತಯಾರಾಗಿದೆ ಎನ್ನುವುದಕ್ಕೆ ಏನು ಖಾತ್ರಿ?’ ಎಂದು ಗ್ರಾಹಕ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ, ಮಾರಿಷಸ್​ನಲ್ಲೂ ಭಾರತದ ಯುಪಿಐ, ರುಪೇ ಕಾರ್ಡ್ ಸೇವೆಗೆ ಚಾಲನೆ

ಅಷ್ಟೇ ಅಲ್ಲ, ದೆಹಲಿಯಲ್ಲಿರುವ ಪ್ರಖ್ಯಾತ ರೆಸ್ಟೋರೆಂಟ್​ಗಳಿಂದ ಗುರುಗ್ರಾಮ್, ನೋಯ್ಡಾಗಳಿಗೆ 30 ನಿಮಿಷದಲ್ಲಿ ಆಹಾರ ತಲುಪಿಸಲು ಹೇಗೆ ಸಾಧ್ಯ ಎಂದೂ ಅರ್ಜಿದಾರರು ಕೇಳಿದ್ದಾರೆ.

ಜೊಮಾಟೋ ಸಂಸ್ಥೆ ತನ್ನ ಗ್ರಾಹಕರಿಗೆ ಸುಳ್ಳು ಹೇಳಿ ವಂಚಿಸುತ್ತಿದೆ ಎಂದು ಆರೋಪಿಸಿರುವ ಸೌರವ್ ಮಲ್, ಜೊಮಾಟೋದ ಎಲ್ಲಾ ಗ್ರಾಹಕರ ಪ್ರತಿನಿಧಿಯಾಗಿ ಈ ಮೊಕದ್ದಮೆ ಹೂಡಿರುವುದಾಗಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ