ಬೆಂಗಳೂರು, ಹೈದರಾಬಾದ್​ ಏರ್​ಪೋರ್ಟ್​ಗಳಲ್ಲಿ 13 ಕೋಟಿ ರೂ. ಮೌಲ್ಯದ ವಜ್ರ, ವಿದೇಶಿ ಕರೆನ್ಸಿ ಜಪ್ತಿ: ನಾಲ್ವರು ವಶಕ್ಕೆ

ಕೆಐಎಬಿನಲ್ಲಿ​ 7.77 ಕೋಟಿ ರೂ. ಮೌಲ್ಯದ ವಜ್ರ, 4.62 ಲಕ್ಷ ರೂ. ವಿದೇಶಿ ಕರೆನ್ಸಿ ಪತ್ತೆ‌ಯಾಗಿದ್ದರೆ, ಹೈದರಾಬಾದ್​ ಏರ್​ಪೋರ್ಟ್​ನಲ್ಲಿ 6.03 ಕೋಟಿ ರೂ. ಮೌಲ್ಯದ ವಜ್ರಗಳು, 9.83 ಲಕ್ಷ ರೂ. ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಸದ್ಯ ವಶಕ್ಕೆ ಪಡೆದ ನಾಲ್ವರನ್ನು ಡಿಆರ್​​ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 

ಬೆಂಗಳೂರು, ಹೈದರಾಬಾದ್​ ಏರ್​ಪೋರ್ಟ್​ಗಳಲ್ಲಿ 13 ಕೋಟಿ ರೂ. ಮೌಲ್ಯದ ವಜ್ರ, ವಿದೇಶಿ ಕರೆನ್ಸಿ ಜಪ್ತಿ: ನಾಲ್ವರು ವಶಕ್ಕೆ
ವಜ್ರ, ವಿದೇಶಿ ಕರೆನ್ಸಿ ಜಪ್ತಿ
Edited By:

Updated on: Jan 13, 2024 | 8:42 PM

ದೇವನಹಳ್ಳಿ, ಜನವರಿ 13: ಬೆಂಗಳೂರು, ಹೈದರಾಬಾದ್​ನಲ್ಲಿ ಡಿಆರ್​ಐ ಅಧಿಕಾರಿಗಳ ಕಾರ್ಯಾಚರಣೆ ವೇಳೆ 2 ಏರ್​ಪೋರ್ಟ್​ಗಳಲ್ಲಿ 13 ಕೋಟಿ ರೂ. ಮೌಲ್ಯದ ವಜ್ರ (Diamond) ಮತ್ತು ವಿದೇಶಿ ಕರೆನ್ಸಿ ಪತ್ತೆ ಆಗಿದೆ. ದುಬೈಗೆ ಹೊರಟಿದ್ದ ನಾಲ್ವರು ಪ್ರಯಾಣಿಕರ ತಪಾಸಣೆ ವೇಳೆ ಪತ್ತೆ ಆಗಿದ್ದು, ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರು, ಹೈದರಾಬಾದ್ ಏರ್‌ಪೋರ್ಟ್​ನಿಂದ ವಿಮಾನದಲ್ಲಿ ದುಬೈಗೆ ಸಾಗಿಸಲು ಯತ್ನಿಸಿದ್ದ ನಾಲ್ವರು ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆ.

ಕೆಐಎಬಿನಲ್ಲಿ​ 7.77 ಕೋಟಿ ರೂ. ಮೌಲ್ಯದ ವಜ್ರ, 4.62 ಲಕ್ಷ ರೂ. ವಿದೇಶಿ ಕರೆನ್ಸಿ ಪತ್ತೆ‌ಯಾಗಿದ್ದರೆ, ಹೈದರಾಬಾದ್​ ಏರ್​ಪೋರ್ಟ್​ನಲ್ಲಿ 6.03 ಕೋಟಿ ರೂ. ಮೌಲ್ಯದ ವಜ್ರಗಳು, 9.83 ಲಕ್ಷ ರೂ. ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಚಾಕೊಲೇಟ್‌ ಮತ್ತು ವೈಪರ್‌ಗಳ ರೂಪದಲ್ಲಿ ವಜ್ರಗಳನ್ನು ಇಟ್ಟು ಸೀಲ್ ಮಾಡಿ ಸಾಗಿಸುತ್ತಿದ್ದರು. ಸದ್ಯ ವಶಕ್ಕೆ ಪಡೆದ ನಾಲ್ವರನ್ನು ಡಿಆರ್​​ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಅಧಿಕಾರಿಗಳ ಕಣ್ತಪ್ಪಿಸಿ ಚಾಕು ಮತ್ತು ಟ್ರೇ ನಲ್ಲಿ ಗೋಲ್ಡ್ ಸಾಗಾಟ

ಪೇಸ್ಟ್ ಹಾಗೂ ಕಟ್ ಪೀಸ್ ಮಾದರಿಯಲ್ಲಿ ಚಿನ್ನವನ್ನ ವುಡ್ ಟ್ರೇ ಹಾಗೂ ಚಾಕುವಿನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಏರ್‌ಪೋರ್ಟ್‌ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, 19 ಲಕ್ಷಕ್ಕೂ ಅಧಿಕ ಬೆಲೆ ಬಾಳುವ 298 ಗ್ರಾಂ ಚಿನ್ನ ಸಿಕ್ಕಿದ್ದು ಚಿನ್ನವನ್ನು ಇತ್ತೀಚಿಗೆ ಜಪ್ತಿ ಮಾಡಿದ್ದರು. ದುಬೈನಿಂದ ವಿಮಾನದಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ಥಾಣಕ್ಕೆ ಇಬ್ಬರು ಪ್ರಯಾಣಿಕರು ಆಗಮಿಸಿದ್ದರು.

ಇದನ್ನೂ ಓದಿ: ಸ್ನೇಹಿತನಿಗೆ ಡ್ರಾಪ್ ಕೊಡಲು ನಕಲಿ ಟಿಕೆಟ್​​ ಬಳಕೆ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ

ಲಗೇಜ್​ ಬ್ಯಾಗ್​ನಲ್ಲಿ ವುಡ್ ಟ್ರೇ ಹಾಗೂ ಸಿಲ್ವರ್ ಕೋಟ್ ಚಾಕುವನ್ನಿಟ್ಟುಕೊಂಡು ಬಂದಿರುವುದು ಅನುಮಾನ ಮೂಡಿಸಿತ್ತು. ಹೀಗಾಗಿ ಚಾಕು ಹಾಗೂ ವುಡ್ ಟ್ರೇ ಪರಿಶೀಲನೆ ನಡೆಸಿದಾಗ ವುಡ್ ಟ್ರೆಗೆ ಪೇಪರ್ ಸ್ಟಿಕರ್​ ಹಿಂಬಾಗದಲ್ಲಿ ಚಿನ್ನವನ್ನ ಪೇಸ್ಟ್ ರೂಪದಲ್ಲಿ ಮಾಡಿ ಅಂಟಿಸಿರುವುದು ಬೆಳಕಿಗೆ ಬಂದಿತ್ತು. ಜೊತೆಗೆ ಸಿಲ್ವರ್ ಕೋಟೆಡ್ ಚಾಕುವಿನ ಹ್ಯಾಂಡಲ್​ನಲ್ಲಿ ಕಟ್ ಪೀಸ್ ಚಿನ್ನಕ್ಕೂ ಸಿಲ್ವರ್ ಕೋಟ್ ಮಾಡಿ ತಂದಿದ್ದು ಎರಡನ್ನು ಕಸ್ಟಮ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:42 pm, Sat, 13 January 24