ಸ್ನೇಹಿತನಿಗೆ ಡ್ರಾಪ್ ಕೊಡಲು ನಕಲಿ ಟಿಕೆಟ್​​ ಬಳಕೆ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ

ಸ್ನೇಹಿತನನ್ನ ಏರ್‌ಪೋರ್ಟ್‌​ನಲ್ಲಿ ಡ್ರಾಪ್ ಕೊಡಲು ಬಂದಿದ್ದ ಯುವತಿಯೋರ್ವಳು ಖತರ್ನಾಕ್ ಐಡಿಯಾ ಮಾಡಿ ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವಂತಹ ಘಟನೆ ಕೆಂಪೇಗೌಡ ಏರ್‌ಪೋರ್ಟ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಅಕ್ರಮವಾಗಿ ಟರ್ಮಿನಲ್ ಒಳಗಡೆ ಪ್ರವೇಶಿಸಿದ ಆರೋಪದಡಿ ಏರ್‌ಪೋರ್ಟ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸ್ನೇಹಿತನಿಗೆ ಡ್ರಾಪ್ ಕೊಡಲು ನಕಲಿ ಟಿಕೆಟ್​​ ಬಳಕೆ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ
ಕೆಂಪೇಗೌಡ ಏರ್ಪೋರ್ಟ್
Follow us
ನವೀನ್ ಕುಮಾರ್ ಟಿ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 27, 2023 | 11:38 AM

ದೇವನಹಳ್ಳಿ, ನವೆಂಬರ್​​ 27: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda Airport) ದಲ್ಲಿ ನಕಲಿ ಟಿಕೆಟ್ ಮೂಲಕ ಟರ್ಮಿನಲ್ ಒಳ ಪ್ರವೇಶಿಸಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹರ್ಷಿತ ಕೌರ್ ಸಾಹ್ನಿ ಬಂಧಿತ ಮಹಿಳೆ. ತನ್ನ ಸ್ನೇಹಿತ ಆಯುಶ್ ಶರ್ಮಾ ಎಂಬುವವನನ್ನು ಬಿಡಲು ಮಹಿಳೆ ಬಂದಿದ್ದು, ಈ ವೇಳೆ ಟಿಕೆಟ್​ ಇಲ್ಲ ಅಂದರೆ ಟರ್ಮಿನಲ್ ಒಳಗಡೆ ಬಿಡಲ್ಲ ಅಂತ ನಕಲಿ ಇ-ಟಿಕೆಟ್ ತಯಾರಿಸಿ ಟರ್ಮಿನಲ್ ಒಳ ಪ್ರವೇಶಿಸಿ ಹೊರಬರುತ್ತಿದ್ದಂತೆ ಸಿಕ್ಕಿಬಿದಿದ್ದಾಳೆ.

ಈ ವೇಳೆ ಏರ್ಪೋಟ್ ಭದ್ರತಾ ಪಡೆ ಏರ್ಲೈನ್ಸ್ ಸಿಬ್ಬಂದಿಯಿಂದ ಟಿಕೆಟ್ ಕ್ಯಾನ್ಸಲ್ ಮಾಡಿಸಿಕೊಂಡು ಬಂದರೆ ಮಾತ್ರ ಹೊರಗಡೆ ಬಿಡುವುದಾಗಿ ಹೇಳಿದ್ದು, ಯುವತಿ ಇಂಡಿಗೋ ಏರ್ಲೈನ್ ಕಛೇರಿಗೆ ತೆರಳಿದ್ದಾಳೆ. ಈ ವೇಳೆ ಟಿಕೆಟ್​ ಪರಿಶೀಲಿಸಿದ ಸಿಬ್ಬಂದಿ ಇದು ನಖಲಿ ಟಿಕೆಟ್​ ಅಂತ ಖಚಿತಪಡಿಸಿದ್ದು, ಏರ್‌ಪೋರ್ಟ್‌ ಭದ್ರತಾ ಪಡೆಯ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ: ಅಕ್ರಮವಾಗಿ ಇ ಸಿಗರೇಟ್​​​ಗಳ ಸಾಗಾಟ: ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

ಸದ್ಯ ಏರ್ಲೈನ್ಸ್ ಸಿಬ್ಬಂದಿಗಳ ದೂರಿನ ಆಧಾರದ ಮೇಲೆ ನಕಲಿ ಟಿಕೆಟ್​ ಸಮೇತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಟರ್ಮಿನಲ್ ಒಳಗಡೆ ಪ್ರವೇಶಿಸಿದ ಆರೋಪದಡಿ ಏರ್‌ಪೋರ್ಟ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಅಧಿಕಾರಿಗಳ ಕಣ್ತಪ್ಪಿಸಲು ಚಾಕು ಮತ್ತು ಟ್ರೇ ನಲ್ಲಿ ಗೋಲ್ಡ್ ಸಾಗಾಟ

ಪೇಸ್ಟ್ ಹಾಗೂ ಕಟ್ ಪೀಸ್ ಮಾದರಿಯಲ್ಲಿ ಚಿನ್ನವನ್ನ ವುಡ್ ಟ್ರೇ ಹಾಗೂ ಚಾಕುವಿನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಏರ್‌ಪೋರ್ಟ್‌ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, 19 ಲಕ್ಷಕ್ಕೂ ಅಧಿಕ ಬೆಲೆ ಬಾಳುವ 298 ಗ್ರಾಂ ಚಿನ್ನ ಸಿಕ್ಕಿದ್ದು ಚಿನ್ನ ಜಪ್ತಿ ಮಾಡಿದ್ದಾರೆ. ದುಬೈನಿಂದ ವಿಮಾನದಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ಥಾಣಕ್ಕೆ ಇಬ್ಬರು ಪ್ರಯಾಣಿಕರು ಆಗಮಿಸಿದ್ದರು.

ಇದನ್ನೂ ಓದಿ: ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ಡ್ರಗ್ಸ್ ಸಾಗಾಟ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಮಹಿಳೆ

ಜೊತೆಗೆ ಲಗೇಜ್​ ಬ್ಯಾಗ್​ನಲ್ಲಿ ವುಡ್ ಟ್ರೇ ಹಾಗೂ ಸಿಲ್ವರ್ ಕೋಟ್ ಚಾಕುವನ್ನಿಟ್ಟುಕೊಂಡು ಬಂದಿರುವುದು ಅನುಮಾನ ಮೂಡಿಸಿತ್ತು. ಹೀಗಾಗಿ ಚಾಕು ಹಾಗೂ ವುಡ್ ಟ್ರೇ ಪರಿಶೀಲನೆ ನಡೆಸಿದಾಗ ವುಡ್ ಟ್ರೆಗೆ ಪೇಪರ್ ಸ್ಟಿಕರ್​ ಹಿಂಬಾಗದಲ್ಲಿ ಚಿನ್ನವನ್ನ ಪೇಸ್ಟ್ ರೂಪದಲ್ಲಿ ಮಾಡಿ ಅಂಟಿಸಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಸಿಲ್ವರ್ ಕೋಟೆಡ್ ಚಾಕುವಿನ ಹ್ಯಾಂಡಲ್​ನಲ್ಲಿ ಕಟ್ ಪೀಸ್ ಚಿನ್ನಕ್ಕೂ ಸಿಲ್ವರ್ ಕೋಟ್ ಮಾಡಿ ತಂದಿದ್ದು ಎರಡನ್ನು ಕಸ್ಟಮ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:36 am, Mon, 27 November 23

ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು