ಉತ್ತರ ಪ್ರದೇಶದ ಬರೇಲಿಯಲ್ಲಿ ಮನುಕುಲವೇ ತಲೆ ತಗ್ಗಿಸುವ ಘಟನೆ, ತಂದೆ-ತಾಯಿ ಸಮ್ಮುಖದಲ್ಲೇ 16-ವರ್ಷದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
ಸಂತ್ರಸ್ತೆಯ ಕುಟುಂಬವನ್ನು ಮನೆಗೆ ಕರೆತಂದ ನಂತರ ಓಡಿಹೋಗಿರುವ ಯುವತಿಯ ಅಣ್ಣಂದಿರು ಬಾಲಕಿಯನ್ನು ಮನಬಂದಂತೆ ಥಳಿಸಿದ್ದಾರೆ ಮತ್ತು ಆಕೆಯ ತಂದೆ-ತಾಯಿಗಳ ಸಮ್ಮುಖದಲ್ಲೇ ಅತ್ಯಾಚಾರ ನಡೆಸಿದ್ದಾರೆ.
ಬರೇಲಿ: ಇತ್ತೀಚಿಗಷ್ಟೇ ನಾವು ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಚರ್ಚಿಸಿದ್ದೆವು. ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೂ ಅತ್ಯಾಚಾರಗಳು ನಡೆಯುತ್ತಿವೆ. ರಾಜ್ಯದ ಬರೇಲಿ ಪಟ್ಟಣದ ಅಮ್ರೋಹಾ ರೈಲು ನಿಲ್ದಾಣದ ಬಳಿಯಿರುವ ಮನೆಯೊಂದರಲ್ಲಿ ಮನನುಕುಲವೇ ತಲೆ ತಗ್ಗಿಸುವಂಥ ಪಾಶವೀ ಕೃತ್ಯವೊಂದು ನಡೆದಿದೆ. ಈ ರಾಜ್ಯದಲ್ಲಿ ಯಾವಾಗಲೂ ನಡೆಯುವ ಹಾಗೆ, ಅರೋಪಿಗಳು ಪ್ರಭಾವಿ ಕುಟುಂಬದ ಸದಸ್ಯರಾಗಿರುವುದರಿಂದ ಪೊಲೀಸ್ ಕ್ರಮ ಜರುಗಿಸಲು ಹಿಂಜರಿಯುತ್ತಿದೆ. ಒಬ್ಬ 16-ವರ್ಷದ ಬಾಲಕಿಯ ಮೇಲೆ ಒಂದೇ ಕುಟುಂಬದ 8 ಸದಸ್ಯರು ಆಕೆಯ ಪೋಷಕರೇ ಎದುರೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆ ಹುಡುಗಿಯ ತಪ್ಪೇನು ಗೊತ್ತಾ? ಸಂಬಂಧದಲ್ಲಿ ಅಕೆಗೆ ಅಣ್ಣನಾಗುವ ಯುವಕನೊಂದಿಗೆ ಆರೋಪಿಗಳ ಮನೆಯ ಯವತಿಯೊಬ್ಬಳು ಓಡಿ ಹೋಗಿರುವುದು. ತಮ್ಮ ಮನೆಯ ಹೆಣ್ಣುಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾಗದ ಪಾಖಂಡಿಗಳು ಏನೂ ಅರಿಯದ ಮುಗ್ಧೆಯ ಮೇಲೆ ತಮ್ಮ ಹೇಡಿತನವನ್ನು ಮೆರೆದು ಸೇಡು ತೀರಿಸಿಕೊಂಡಿದ್ದಾರೆ.
ಸಂತ್ರಸ್ತೆ ಮತ್ತು ಆರೋಪಿಗಳ ಕುಟುಂಬಗಳು ನೆರೆಹೊರೆಯಲ್ಲಿ ವಾಸಿಸುತ್ತವೆ. ಯುವಕ-ಯುವತಿ ಓಡಿಹೋದ ನಂತರ ಜೂನ್ 28 ರಂದು ಅರೋಪಿಗಳು ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಬಲವಂತದಿಂದ ತಮ್ಮ ಮನೆಗೆ ಕರೆ ತಂದಿದ್ದಾರೆ.
ತಂದೆ-ತಾಯಿಗಳ ಎದುರೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಸಂತ್ರಸ್ತೆಯ ಕುಟುಂಬವನ್ನು ಮನೆಗೆ ಕರೆತಂದ ನಂತರ ಓಡಿಹೋಗಿರುವ ಯುವತಿಯ ಅಣ್ಣಂದಿರು ಬಾಲಕಿಯನ್ನು ಮನಬಂದಂತೆ ಥಳಿಸಿದ್ದಾರೆ ಮತ್ತು ಆಕೆಯ ತಂದೆ-ತಾಯಿಗಳ ಸಮ್ಮುಖದಲ್ಲೇ ಅತ್ಯಾಚಾರ ನಡೆಸಿದ್ದಾರೆ. ಅವರ ನಂತರ ಓಡಿಹೋಗಿರುವ ಯುವತಿಯ ತಂದೆ ಮತ್ತು ಅಂಕಲ್ಗಳು ಸಹ ಅಪ್ರಾಪ್ತ ಬಾಲಕಿಯ ಮೇಲೆ ಪಶುಗಳಂತೆ ಎರಗಿದ್ದಾರೆ. ಒಬ್ಬ ಆರೋಪಿಯು ತನ್ನ ಸಮ್ಮತಿಯಿಲ್ಲದೆ ಸಂತ್ರಸ್ತೆಯ ಕೊರಳಿಗೆ ತಾಳಿ ಕಟ್ಟಿದ್ದಾನೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.
ಮರುದಿನ ಅಂದರೆ ಜೂನ್ 29ರಂದು ಅವರಿಗೆ ತಮ್ಮ ಮನೆಗೆ ಹೋಗುವಂತೆ ಹೇಳಿರುವ ಅರೋಪಿಗಳು ದೂರು ಸಲ್ಲಿಸುವ ಪ್ರಯತ್ನ ಮಾಡಿದರೆ ಕೊಂದು ಹಾಕುವ ಬೆದರಿಕೆಯೊಡ್ಡಿದ್ದಾರೆ.
ಅರೋಪಿಗಳು ಪ್ರಭಾವಿಗಳಾಗಿದ್ದಾರೆ
ಸಂತ್ರಸ್ತೆಯ ಕುಟುಂಬ ದೂರ ಸಲ್ಲಿಸಲು ಪೊಲೀಸ್ ಸ್ಟೇಶನ್ಗೆ ಹೋದಾಗ ಅಲ್ಲಿನ ಆರಕ್ಷಕರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಆದರೆ ಖುದ್ದು ಸಂತ್ರಸ್ತೆಯೇ ತಾನು ಅನುಭವಿಸಿದ ನರಕಯಾತನೆಯನ್ನು ವಿವರಿಸಿದ ನಂತರ ಎಫ್ಐಆರ್ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ಐ ಪಿ ಸಿ ಸೆಕ್ಷನ್ಗಳು ಮತ್ತು ಮಕ್ಕಳ ವಿರುದ್ಧ ಲೈಂಗಿಕ ಅಪರಾಧಗಳ ತಡೆ (ಪೋಕ್ಸೊ) ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಎರಡು ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿತ್ತು ಅದರೆ ಜೂನ್ 27ರಂದು ಯುವಕ ಮತ್ತು ಯುವತಿ ಪರಾರಿಯಾದ ನಂತರ ಅದು ಹಳಸಿದೆ.
ಸಂತ್ರಸ್ತೆಯ ಮಹಿಳಾ ಸಂಬಂಧಿಯೊಬ್ಬರು, ‘ಆರೋಪಿಗಳ ಕುಟುಂಬ ಪ್ರತಿಷ್ಠಿತವೆನಿಸಿಕೊಂಡಿದೆ. ನಮ್ಮ ಕುಟುಂಬದ ಇತರ ಬಾಲಕಿಯರ ಮೇಲೆ ಸಹ ಅವರು ತೀರಿಸಿಕೊಳ್ಳಬಲ್ಲರು. ನಮಗೆ ಬಹಳ ಭಯವಾಗುತ್ತಿದೆ. ಪೊಲೀಸರು ಅವರ ವಿರುದ್ಧ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು,’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಲವ್ ಜಿಹಾದ್, ಗೋ ಭಯೋತ್ಪಾದನೆ ವರ್ಕೌಟ್ ಆಗಲ್ಲ: ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ