AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜು ಕಟ್ಟಡದಿಂದ ಬಿದ್ದು ಸಾಯುವ ಮುನ್ನ ಅಪ್ಪ, ಅಮ್ಮ, ಅಕ್ಕ, ತಂಗಿಗೆ ಕರುಳುಹಿಂಡುವ ಮೆಸೇಜ್ ಬರೆದ ಬಾಲಕಿ

Vishakhapatnam's 17 Year old girl jumps to death: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪಾಲಿಟೆಕ್ನಿಕ್ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳು ಲೈಂಗಿಕ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮಾರ್ಚ್ 29ರಂದು ಸಂಭವಿಸಿದೆ. ತನಗೆ ಲೈಂಗಿಕ ಕಿರುಕುಳ ನೀಡಿದವರು ಫೋಟೋ ತೆಗೆದಿದ್ದು ಅದನ್ನಿಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸ್​ಗೂ ದೂರು ಕೊಡಲು ಆಗುತ್ತಿಲ್ಲ. ತಾನು ಸಾಯದೇ ಬೇರೆ ದಾರಿ ಇಲ್ಲ ಎಂದು ಆ ಹುಡುಗಿ ತನ್ನ ಕುಟುಂಬದ ಸದಸ್ಯರಿಗೆ ಮೆಸೇಜ್ ಹಾಕಿದ್ದಾಳೆ.

ಕಾಲೇಜು ಕಟ್ಟಡದಿಂದ ಬಿದ್ದು ಸಾಯುವ ಮುನ್ನ ಅಪ್ಪ, ಅಮ್ಮ, ಅಕ್ಕ, ತಂಗಿಗೆ ಕರುಳುಹಿಂಡುವ ಮೆಸೇಜ್ ಬರೆದ ಬಾಲಕಿ
ಲೈಂಗಿಕ ಕಿರುಕುಳ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 31, 2024 | 11:45 AM

Share

ಹೈದರಾಬಾದ್, ಮಾರ್ಚ್ 31: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಿಲ್ಡಿಂಗ್​ನಿಂದ ಹಾರಿಬಿದ್ದು ಆತ್ಮಹತ್ಯೆ (college girl jumps to death) ಮಾಡಿಕೊಂಡಿದ್ದಾಳೆ. ಕಾಲೇಜಿನಲ್ಲಿ ತನಗೆ ಲೈಂಗಿಕ ಕಿರುಕುಳವಾಗಿದೆ (sexual harassment) ಎಂದು ಆರೋಪಿಸಿ ಈ ಹುಡುಗಿ ಸಾಯುವ ಅತಿರೇಕದ ನಿರ್ಧಾರ ತೆಗೆದುಕೊಂಡಿದೆ. ಸಾಯುವ ಮುನ್ನ ತನ್ನ ಕುಟುಂಬ ಸದಸ್ಯರಿಗೆ ಈಕೆ ಮೆಸೇಜ್ ಕಳುಹಿಸಿದ್ದು, ಲೈಂಗಿಕ ಕಿರುಕುಳ ಘಟನೆಗಳು ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳಲು ಕಾರಣ ಎಂದು ಬರೆದಿದ್ದಾಳೆ. ಆದರೆ, ತನ್ನ ಮೇಲೆ ದೌರ್ಜನ್ಯ ಎಸಗಿದವರು ಯಾರೆಂದು ಈಕೆ ಹೇಳಿಲ್ಲ. ಅವರು ತನ್ನ ಫೋಟೋಗಳನ್ನು ತೆಗೆದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಹೆದರಿಸುತ್ತಿದ್ದಾರೆ ಎಂದೂ ಈ 17 ವರ್ಷದ ಹುಡುಗಿ ಆರೋಪಿಸಿದ್ದಾಳೆ. ಪಾಲಿಟೆಕ್ನಿಕ್ ಕಾಲೇಜೊಂದರ ಹಾಸ್ಟೆಲ್​ನಲ್ಲಿ ಈಕೆ ಇದ್ದಳು.

ಯುವತಿ ನಾಪತ್ತೆಯಾಗಿದ್ದಾಳೆ ಎಂದು ಆಕೆ ಓದುವ ಪಾಲಿಟೆಕ್ನಿಕ್ ಕಾಲೇಜಿನಿಂದ ಪೋಷಕರಿಗೆ ಕರೆ ಹೋಗುತ್ತದೆ. ಕುಟುಂಬದ ಸದಸ್ಯರು ಸಾಕಷ್ಟು ಬಾರಿ ಆಕೆಗೆ ಕರೆ ಮಾಡುತ್ತಾರೆ. ಫೋನ್ ರಿಸೀವ್ ಮಾಡದೇ ಹೋದಾಗ ಪೊಲೀಸರಿಗೆ ದೂರು ನೀಡುತ್ತಾರೆ. ರಾತ್ರಿ 12:50ಕ್ಕೆ ಹುಡುಗಿ ತನ್ನ ಮೊಬೈಲ್​ನಲ್ಲಿ ಮೆಸೇಜ್ ಮೂಲಕ ಸ್ಪಂದಿಸಿದ್ದಾಳೆ. ಅಪ್ಪ, ಅಪ್ಪ, ಅಕ್ಕ ಮತ್ತು ತಂಗಿಯನ್ನು ಪ್ರತ್ಯೇಕವಾಗಿ ಉದ್ದೇಶಿಸಿ ಮೆಸೇಜ್ ಮಾಡಿದ್ದಾಳೆ. ಕೊನೆಗೆ ತನ್ನನ್ನು ಕ್ಷಮಿಸುವಂತೆ ಕೇಳಿದ್ದಾಳೆ. ಮೆಸೇಜ್ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ಈಕೆ ಬಿಲ್ಡಿಂಗ್​ನಿಂದ ಕೆಳಗೆ ಹಾರಿಬಿದ್ದು ಸಾವನ್ನಪ್ಪಿದ್ದಾಳೆ. ಈಕೆಯ ಕುಟುಂಬದವರು ಆಂಧ್ರದ ಆನಕಪಲ್ಲೆ ಜಿಲ್ಲೆಯವರಾಗಿದ್ದಾರೆ.

ಕಾಲೇಜಿನಲ್ಲಿ ಲೈಂಗಿಕ ಕಿರುಕುಳ?

ತನ್ನ ಮೇಲೆ ಲೈಂಗಿಕ ಕಿರುಕುಳ ಆಗಿದೆ. ಬೇರೆ ಹುಡುಗಿಯರೂ ಇದ್ದಾರೆ. ನಾವ್ಯಾರೂ ಕೂಡ ಯಾರಿಗೂ ಹೇಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದೇವೆ. ತನ್ನ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತೇವೆ ಎಂದು ಹೆದರಿಸಿದ್ದಾರೆ. ಹೀಗಾಗಿ ಕಾಲೇಜಿನ ಆಡಳಿತಕ್ಕಾಗಲೀ, ಪೊಲೀಸ್​ಗಾಗಲೀ ದೂರು ಕೊಡಲು ಆಗುವುದಿಲ್ಲ ಎಂದು ಮೆಸೇಜ್​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಆನೇಕಲ್: ಕೌಟುಂಬಿಕ ಕಲಹ; ಪತ್ನಿ ಕೊಲೆಗೈದು ಪತಿ ಆತ್ಮಹತ್ಯೆಗೆ ಯತ್ನ

ಅಪ್ಪ, ಅಮ್ಮ, ಅಕ್ಕ, ತಂಗಿಗೆ ಬರೆದ ಮೆಸೇಜ್ ಹೀಗಿದೆ…

ತೆಲುಗಿನಲ್ಲಿ ಈಕೆ ಮೆಸೇಜ್ ಬರೆದಿದ್ದು, ತನ್ನನ್ನು ಹೆತ್ತು ಸಾಕಿ ಬೆಳೆಸಿದ್ದಕ್ಕೆ ತಮಗೆ ಋಣಿಯಾಗಿದ್ದೇನೆ. ನನ್ನ ಕಥೆ ಇಲ್ಲಿಗೆ ಮುಗಿಯುತ್ತಿದೆ ಎಂದು ತನ್ನ ಅಪ್ಪ ಮತ್ತು ಅಮ್ಮನಿಗೆ ಈಕೆ ತಿಳಿಸಿದ್ದಾಳೆ.

ಗರ್ಭಿಣಿಯಾಗಿರುವ ತನ್ನ ಅಕ್ಕನಿಗೆ ಅಭಿನಂದನೆ ಹೇಳಿದ್ದಾಳೆ. ಓದುತ್ತಿರುವ ತಂಗಿಗೆ ಕಿವಿಮಾತು ಹೇಳಿದ್ದಾಳೆ. ನೀನಿಷ್ಟ ಬಂದಿದ್ದನ್ನು ಓದು. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡ. ಸದಾ ಖುಷಿಯಾಗಿರು. ಒಳ್ಳೆಯ ಬದುಕು ಕಟ್ಟಿಕೋ ಎಂದು ಕಿರಿಯ ಸಹೋದರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ: ರಾಯಚೂರು: ಶ್ರೀಶೈಲ ಪಾದಯಾತ್ರೆ ವೇಳೆ ಹೃದಯಾಘಾತಕ್ಕೆ ಯುವಕ ಸಾವು

ಅಪ್ಪನಿಗೆ ಹೀಗೆ ಬರೆದಿದ್ದಾಳೆ: ‘ನಾನೀಗ ಸತ್ತು ಹೋದರೆ ಕೆಲ ವರ್ಷ ನಿಮಗೆ ದುಃಖವಾಗಬಹುದು. ನಂತರ ಮರೆತುಹೋಗುತ್ತೀರಿ. ನಾನು ನಿಮ್ಮೊಂದಿಗೆ ಇದ್ದರೆ ನನ್ನನ್ನು ನೋಡಿದಾಗೆಲ್ಲಾ ನಿಮಗೆ ದುಃಖವಾಗುತ್ತಿರುತ್ತದೆ,’ ಎಂದಿದ್ದಾಳೆ. 17 ವರ್ಷದ ಈ ಹುಡುಗಿ ಕೊನೆಯಲ್ಲಿ ತನ್ನ ಅಕ್ಕನಿಗೆ, ‘ಸಾರಿ ದೀದಿ, ನಿನಗೆ ತುಂಬಾ ಬೇಜಾರು ಮಾಡಿದೆ. ನಾನು ಹೋಗಬೇಕು,’ ಎಂದು ಬರೆದಿದ್ದಾಳೆ.

ತಮ್ಮ ಹಾಸ್ಟೆಲ್​ನಲ್ಲಿ ಬಾಲಕರಿಗೆ ಪ್ರವೇಶವೇ ಇಲ್ಲ. ಅಲ್ಲಿ ಲೈಂಗಿಕ ಕಿರುಕುಳ ಆಗಲು ಸಾಧ್ಯವೇ ಇಲ್ಲ ಎಂದು ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಇದೇ ವೇಳೆ ಸ್ಪಷ್ಟಪಡಿಸಿದೆ.

ಇನ್ನಷ್ಟು ಕ್ರೈಂ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ