ಪತಿಯನ್ನು ಕೊಲ್ಲಲು ವಾಟ್ಸಾಪ್ ಸ್ಟೇಟಸ್‌ನಲ್ಲಿ ₹ 50,000 ಬಹುಮಾನ ಘೋಷಿಸಿದ ಪತ್ನಿ
ಡಿಸೆಂಬರ್ 21, 2023 ರಂದು ಭಿಂಡ್‌ನಿಂದ ಹಿಂದಿರುಗುತ್ತಿದ್ದಾಗ ತನ್ನ ಮಾವ- ಅತ್ತೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತಿ ಹೇಳಿಕೊಂಡಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಆತನ ಪತ್ನಿ ತನ್ನ ಪತಿಯನ್ನು ಕೊಲ್ಲುವ ವ್ಯಕ್ತಿಗೆ ₹ 50,000 ಬಹುಮಾನ ನೀಡುವುದಾಗಿ ವಾಟ್ಸಾಪ್ ಸ್ಟೇಟಸ್ ಅನ್ನು ಹಂಚಿಕೊಂಡಿದ್ದಾಳೆ.
ಆಗ್ರಾ ಮಾರ್ಚ್ 31: ಆಗ್ರಾದ (Agra) ಬಹ್ ಜಿಲ್ಲೆಯ ದಂಪತಿ ಜಗಳವಾಡಿಕೊಂಡಿದ್ದು, ಪತಿಯ ಹತ್ಯೆಗೆ (murder) ಪತ್ನಿ ₹ 50,000 ಬಹುಮಾನವನ್ನು ಘೋಷಿಸಿದ್ದಾರೆ. ಅಂದ ಹಾಗೆ ಆಕೆ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ(WhatsApp status) ಈ ಆಫರ್ ನೀಡಿದ್ದಾರೆ. ಪತಿ ಪತ್ನಿಯ ಸ್ಟೇಟಸ್ ನೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಪತ್ನಿಯ ಸ್ನೇಹಿತರೊಬ್ಬರು ಬೆದರಿಕೆ ಹಾಕಿದ್ದರು ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬಹ್ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ.
ನೋಂದಾಯಿತ ದೂರಿನಲ್ಲಿ, ಪತಿ ಜುಲೈ 9, 2022 ರಂದು ಮಧ್ಯಪ್ರದೇಶದ ಭಿಂಡ್‌ನ ಹಳ್ಳಿಯೊಂದರ ಮಹಿಳೆಯನ್ನು ವಿವಾಹವಾದರು ಎಂದು ಬಹಿರಂಗಪಡಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಅವರ ನಡುವೆ ಜಗಳ ಮತ್ತು ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡವು. ಐದು ತಿಂಗಳ ಕಾಲ ಅತೃಪ್ತಿಕರ ದಾಂಪತ್ಯದ ನಂತರ, ಡಿಸೆಂಬರ್ 2022 ರಲ್ಲಿ, ಮಹಿಳೆ ಬಹ್‌ನಲ್ಲಿರುವ ತನ್ನ ಗಂಡನ ಮನೆಯನ್ನು ತೊರೆದು ತನ್ನ ಹೆತ್ತವರ ಮನೆಗೆ ಹಿಂದಿರುಗಿದಳು. ಅಂದಿನಿಂದ ಮಹಿಳೆ ತನ್ನ ಪೋಷಕರೊಂದಿಗೇ ಇದ್ದಾಳೆ. ಇದೀಗ ದೂರಿನ ಪ್ರಕಾರ ಮಹಿಳೆ ಭಿಂಡ್‌ನ ಪೊಲೀಸ್ ಠಾಣೆಯಲ್ಲಿ ಜೀವನಾಂಶ ದಾವೆ ಹೂಡಿದ್ದಾರೆ.
ಡಿಸೆಂಬರ್ 21, 2023 ರಂದು ಭಿಂಡ್‌ನಿಂದ ಹಿಂದಿರುಗುತ್ತಿದ್ದಾಗ ತನ್ನ ಮಾವ- ಅತ್ತೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತಿ ಹೇಳಿಕೊಂಡಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಆತನ ಪತ್ನಿ ತನ್ನ ಪತಿಯನ್ನು ಕೊಲ್ಲುವ ವ್ಯಕ್ತಿಗೆ ₹ 50,000 ಬಹುಮಾನ ನೀಡುವುದಾಗಿ ವಾಟ್ಸಾಪ್ ಸ್ಟೇಟಸ್ ಅನ್ನು ಹಂಚಿಕೊಂಡಿದ್ದಾಳೆ.
‘ಪತಿಯನ್ನು ಕೊಂದವರಿಗೆ ₹ 50,000 ಬಹುಮಾನ ನೀಡಲಾಗುವುದು’ ಎಂದು ಪತ್ನಿಯ ಸ್ಟೇಟಸ್‌ನಲ್ಲಿ ಬರೆಯಲಾಗಿದೆ ಎಂದು ದಾಖಲಾದ ದೂರಿನಲ್ಲಿ ಪತಿ ಉಲ್ಲೇಖಿಸಿದ್ದಾರೆ.
ಈಟಿವಿ ಭಾರತ್ ವರದಿಯ ಪ್ರಕಾರ, ನೆರೆಯ ಮನೆಯಲ್ಲಿ ವಾಸಿಸುವ ಬಾಡಿಗೆದಾರನೊಂದಿಗೆ ತನ್ನ ಹೆಂಡತಿ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಅವರ ಮದುವೆಯ ಆರಂಭದಿಂದಲೂ ಎಲ್ಲಾ ವಿವಾದಗಳಿಗೆ ಏಕೈಕ ಕಾರಣ ಈ ಸಂಬಂಧ ಎಂದು ಅವರು ಹೇಳಿದ್ದಾರೆ.”ಆಕೆಯ ಪ್ರಿಯಕರ ಕೂಡ ದೂರವಾಣಿ ಕರೆ ಮೂಲಕ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಅವರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಕಾಲೇಜು ಕಟ್ಟಡದಿಂದ ಬಿದ್ದು ಸಾಯುವ ಮುನ್ನ ಅಪ್ಪ, ಅಮ್ಮ, ಅಕ್ಕ, ತಂಗಿಗೆ ಕರುಳುಹಿಂಡುವ ಮೆಸೇಜ್ ಬರೆದ ಬಾಲಕಿ
ಏತನ್ಮಧ್ಯೆ, 2019 ರಲ್ಲಿ ಗುರುಗ್ರಾಮ್‌ನಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿದೆ, ಅಲ್ಲಿ ಪತ್ನಿ ತನ್ನ ಗಂಡನ ಹಂತಕರಿಗೆ ₹ 16 ಲಕ್ಷ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ