AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

22 ವರ್ಷದ ಮಗಳಿರುವ ಪ್ರಿಯತಮೆ ಮದುವೆಗೆ ನಿರಾಕರಿಸಿದಕ್ಕೆ 25 ಬಾರಿ ಇರಿದು ಕೊಲೆ ಮಾಡಿದ ಪ್ರೇಮಿ

ಡಿವೋರ್ಸ್ ಪಡೆದು ಕೊಲ್ಕತ್ತಾದಿಂದ ಬೆಂಗಳೂರಿನಲ್ಲಿ ನೆಲೆಸಿ ಸ್ಪಾ‌ವೊಂದರಲ್ಲಿ ಕೆಲಸ ಮಾಡ್ತಿದ್ದ 42 ವರ್ಷದ ಫರಿದಾಗೂ ಆರೋಪಿ ಗಿರೀಶ್​ಗೆ ಪರಿಚಯವಾಗಿ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಫರಿದಾ ಗಿರೀಶ್​ನನ್ನು ಮದುವೆಯಾಗಲು ನಿರಾಕರಿದ್ದಳು. ಅಲ್ಲದೆ ಮಗಳನ್ನು ಕಾಲೇಜಿಗೆ ಸೇರಿಸಲು ಎಂದು ಕೊಲ್ಕತ್ತಾಗೆ ಹೋಗಿದ್ದಾಗ ಫರಿದಾ ವಿಚಾರ ತಿಳಿಸದೇ ಬೇರೆ ಯಾವುದೋ ಕೆಲಸಕ್ಕೂ ಹೋಗಿದ್ದಳು. ಕೋಪಗೊಂಡಿದ್ದ ಗಿರೀಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

22 ವರ್ಷದ ಮಗಳಿರುವ ಪ್ರಿಯತಮೆ ಮದುವೆಗೆ ನಿರಾಕರಿಸಿದಕ್ಕೆ 25 ಬಾರಿ ಇರಿದು ಕೊಲೆ ಮಾಡಿದ ಪ್ರೇಮಿ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Mar 31, 2024 | 8:55 AM

Share

ಬೆಂಗಳೂರು, ಮಾರ್ಚ್​.31: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು 25ಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಹತ್ಯೆ (Murder) ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾದ ಘಟನೆ ಬೆಂಗಳೂರಿನ ಜಯನಗರದಲ್ಲಿ (Jayanagar) ನಡೆದಿದೆ. ಫರಿದಾ ಖಾತೂನ್ ಕೊಲೆಯಾದ ಮಹಿಳೆ. ಗಿರೀಶ್ @ ರೆಹಾನ್ ಕೊಲೆ ಮಾಡಿದ ಆರೋಪಿ. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ 22 ವರ್ಷದ ಮಗಳಿರುವ ಮಹಿಳೆಯನ್ನು ಪ್ರೀತಿಸಿದ್ದು ಹೇಗೆ? ಹಾಗೂ ಆಕೆಯನ್ನು 25 ಬಾರಿ ಇರಿಯಲು ಕಾರಣವೇನು ಎಂಬ ಬಗ್ಗೆ ಎಳೆ ಎಳೆಯಾಗಿ ಕಥೆ ಬಿಚ್ಚಿಟ್ಟಿದ್ದಾನೆ.

ಬೆಂಗಳೂರಿನಲ್ಲಿ ಸ್ಪಾ‌ವೊಂದರಲ್ಲಿ ಕೆಲಸ ಮಾಡ್ತಿದ್ದ 42 ವರ್ಷದ ಫರಿದಾ ಗಂಡನಿಗೆ ಡಿವೋರ್ಸ್ ಕೊಟ್ಟು ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದು ನೆಲೆಸಿ ಹೊಸ ಜೀವನ ಕಟ್ಟಿಕೊಂಡಿದ್ದಳು. ಫರಿದಾಗೆ 22 ವರ್ಷದ ಮಗಳು ಕೂಡ ಇದ್ದಾಳೆ. ಇನ್ನು ಮೂಲತಃ ಬೆಂಗಳೂರು ಯಡಿಯೂರು ನಿವಾಸಿಯಾಗಿರುವ 32 ವರ್ಷದ ಗಿರೀಶ್ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಒಮ್ಮೆ ಮಸಾಜ್​ ಮಾಡಿಸಿಕೊಳ್ಳಲು ಸ್ಪಾಗೆ ಹೋದಾಗ ಫರಿದಾ ಪರಿಚಯವಾಗಿತ್ತು. 2022ರಲ್ಲಿ ಗಿರೀಶ್ ಹಾಗೂ ಫರಿದಾಗೆ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಅಂದಿನಿಂದ ಫರಿದಾ ಜೊತೆಗೆ ಗಿರೀಶ್ ಸಂಪರ್ಕ ಬೆಳೆಸಿದ್ದ. ಅಲ್ಲದೆ ಇವರ ನಡುವೆ ದೈಹಿಕ ಸಂಪರ್ಕ ಸಹ ಆಗಿತ್ತು.

ಮದುವೆಯಾಗುವಂತೆ ಫರಿದಾಗೆ ಪೀಡಿಸುತ್ತಿದ್ದ ಗಿರೀಶ್

ಈಗಾಗಲೇ ಮದುವೆಯಾಗಿ ಗಂಡನಿಂದ ಡಿವೋರ್ಸ್ ಪಡೆದಿದ್ದ ಫರಿದಾಗೆ ಗಿರೀಶ್ ಮದುವೆಯಾಗುವಂತೆ ಪೀಡಿಸುತ್ತಿದ್ದ. ಒಂದು ಕಡೆ ಡಿವೋರ್ಸ್ ಬಳಿಕ ಗಂಡ ತೀರಿಕೊಂಡ ನೋವು ಹಾಗೂ ತನಗೆ 22 ವರ್ಷದ ಮಗಳಿದ್ದಾಳೆ ಎಂಬ ಚಿಂತೆಯಲ್ಲಿದ್ದ ಫರಿದಾ ಗಿರೀಶ್ ಜೊತೆ ಮದುವೆಯಾಗಲು ನಿರಾಕರಿಸಿದ್ದಳು. ಇದೇ ತಿಂಗಳು 6 ರಂದು ಫರಿದಾ ಹಾಗೂ ಆಕೆಯ ಮಗಳು ಕೊಲ್ಕತ್ತಾಗೆ ತೆರಳಿದ್ದರು. ಮಗಳಿಗೆ ಕಾಲೇಜಿಗೆ ಸೇರಿಸುವ ಉದ್ದೇಶದಿಂದ ಕೊಲ್ಕತ್ತಾಗೆ ತೆರಳಿದ್ದಳು. 29 ರಂದು ಗಿರೀಶ್​ನ ಹುಟ್ಟುಹಬ್ಬ ಇತ್ತು. ಹೀಗಾಗಿ 28ರಂದು ಫರಿದಾ ಫ್ಲೈಟ್ ನಲ್ಲಿ ಬೆಂಗಳೂರಿಗೆ ಹಿಂತಿರುಗಿದ್ದಳು. ಇಬ್ಬರೂ ಸೇರಿ 29 ರಂದು ಹುಟ್ಟುಹಬ್ಬದ ಸಂಭ್ರಮಾಚರಣೆ ಕೂಡ ಮುಗಿಸಿದ್ರು. ಜೆಪಿ‌ ನಗರದ ಓಯೋ ರೂಂ ನಲ್ಲಿ ವಾಸವಿದ್ರು. ಕೊಲ್ಕತ್ತಾದಲ್ಲಿದ್ದಾಗ ಗಿರೀಶ್ ಗೆ ಸುಳ್ಳು ಹೇಳಿ ಫರಿದಾ ಬೇರೆ ಕಡೆ ಹೋಗಿದ್ದಳು. ಸ್ನೇಹಿತೆ ಜೊತೆಗೆ ಬೇರೆ ಕೆಲಸಕ್ಕೆ ತೆರಳಿದ್ದಳು. ಈ ವಿಚಾರವಾಗಿ ಫರಿದಾ ಸ್ನೇಹಿತೆ ಗಂಡನಿಗೆ ಕರೆ ಮಾಡಿ ಗಿರೀಶ್ ಬೈದಿದ್ದ. ಫರಿದಾಳನ್ನ ನಿನ್ನ ಪತ್ನಿ‌ ಹಾಳು ಮಾಡ್ತಿದ್ದಾಳೆ ಎಂದು ಕೋಪಗೊಂಡಿದ್ದ. ಆ ಕೋಪ‌ ಕೂಡ ಗಿರೀಶ್​ಗೆ ಇತ್ತು. ಆದರೆ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಎಲ್ಲಾ ಮರೆತಿದ್ದ.

ಇದನ್ನೂ ಓದಿ: ಹೇಳದೆ ಕೇಳದೆ ಉಚಿತ ಬಸ್ ಹತ್ತಿ ತವರಿಗೆ ಹೋದ ಪತ್ನಿ; ಸಿಟ್ಟಿಗೆದ್ದ ಪತಿಯಿಂದ KSRTC ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

ಮಾರ್ಚ್ 30 ರಂದು ಕೂಡ ಫರಿದಾಳನ್ನು ಕರೆದುಕೊಂಡು ಶಾಲಿನಿ‌ ಗ್ರೌಂಡ್ ಗೆ ಬಂದಿದ್ದ. ಆಕೆಯನ್ನ ಕೊಲೆ ಮಾಡಲೇಬೇಕು ಎಂದು ನಿರ್ಧರಿಸಿ ಚಾಕು ಖರೀದಿಸಿದ್ದ. ನಾವು ಮದುವೆ ಆಗೋಣ, ಈ ಕೆಲಸ ಎಲ್ಲಾ ಬಿಡು ಎಂದು ಮನವಿ ಮಾಡಿದ್ದ. ಆದರೆ ಫರಿದಾ ಇದಕ್ಕೆ ಒಪ್ಪದಿದ್ದಾಗ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲದೆ ದೇಹದ ವಿವಿಧೆಡೆ 25ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಆತನ ಕೋಪಕ್ಕೆ ಫರಿದಾ ಕರಳು ಕೂಡ ಆಚೆ ಬಂದಿತ್ತು. ಕೊಲೆ ಬಳಿಕ‌ ಪೊಲೀಸ್ ಠಾಣೆಗೆ ಬಂದು ಗಿರೀಶ್ ಶರಣಾಗಿದ್ದಾನೆ.

ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಆರೋಪಿ

ಇನ್ನು ಕೊಲೆ ಆರೋಪಿ ಗಿರೀಶ್ ಈ ಹಿಂದೆ ಫರಿದಾಳ ಪರಿಚಯಕ್ಕೂ ಮುನ್ನ 2011ರಲ್ಲಿ ಮುಸ್ಲಿಂ ಆಗಿ ಮತಾಂತರಗೊಂಡಿದ್ದ. ಮೂರ್ತಿ ಪೂಜೆ ವಿರೋಧಿಸಿ ಮಸೀದಿಗೆ ತೆರಳಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ರೆಹಾನ್ ಎಂದು ಹೆಸರು ಬದಲಿಸಿಕೊಂಡಿದ್ದ. ಮತಾಂತರ ಬಳಿಕ ಮನೆಯಲ್ಲಿ ಸಮಸ್ಯೆ ಉದ್ಭವವಾಗಿತ್ತು. ಈತನ ತಂಗಿಗೆ ಗಂಡು ಸಿಗೋದು ಕಷ್ಟ ಆಗಿತ್ತು. ಆತನಿಗೂ ಮದುವೆಗೆ ಹೆಣ್ಣು ಸಿಕ್ಕಿರಲಿಲ್ಲ. ಹಾಗಾಗಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದ. ಬಳಿಕ 2022ರಲ್ಲಿ ಫರಿದಾ ಪರಿಚಯವಾಗಿ ಮದುವೆಗೆ ಗಂಟುಬಿದ್ದಿದ್ದ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:52 am, Sun, 31 March 24