AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lok Sabha Election 2024: ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ, ಯಾರ್ಯಾರ್​ಗೆ ಸ್ಥಾನ?

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ 40 ಘಟಾನುಘಟಿ ನಾಯಕರ ಹೆಸರಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ್, ಜೈರಾಮ್ ರಮೇಶ್, ಎಂ.ವೀರಪ್ಪ ಮೊಯ್ಲಿ, ಲಕ್ಷ್ಮಣ ಸವದಿ ಸೇರಿದಂತೆ ರಾಜ್ಯ ನಾಯಕರ ಹೆಸರಿದೆ.

Lok Sabha Election 2024: ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ, ಯಾರ್ಯಾರ್​ಗೆ ಸ್ಥಾನ?
ಕಾಂಗ್ರೆಸ್ ಪಕ್ಷ
Follow us
ಪ್ರಸನ್ನ ಗಾಂವ್ಕರ್​
| Updated By: ಆಯೇಷಾ ಬಾನು

Updated on:Mar 31, 2024 | 1:04 PM

ಬೆಂಗಳೂರು, ಮಾರ್ಚ್​.31: ಲೋಕಸಭಾ ಚುನಾವಣೆ (Lok Sabha Election) ರಂಗೇರಿದ್ದು, ಈ ಸಲ ಶತಾಯಗತಾಯ ಕೇಂದ್ರದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್‌ (Congress) ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿಯಾಗಿದ್ದು ಪ್ರಚಾರ, ಸಭೆಗಳು ಶುರುವಾಗಿದೆ. ಸದ್ಯ ಈಗ ಕಾಂಗ್ರೆಸ್‌ ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆಗೆ ಪ್ರಕಟವಾದ ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ 40 ಘಟಾನುಘಟಿ ನಾಯಕರ ಹೆಸರಿದೆ.

ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಪಟ್ಟಿ ಹೀಗಿದೆ

ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ್, ಜೈರಾಮ್ ರಮೇಶ್, ಎಂ.ವೀರಪ್ಪ ಮೊಯ್ಲಿ, ಲಕ್ಷ್ಮಣ ಸವದಿ, ಬಿ.ವಿ.ಶ್ರೀನಿವಾಸ್, ಕೆ.ಜೆ.ಜಾರ್ಜ್, ಬಿ.ಕೆ.ಹರಿಪ್ರಸಾದ್, ವಿನಯ್ ಕುಮಾರ್ ಸೊರಕೆ, ಆರ್.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ್, ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಹೆಚ್.ಎಂ.ರೇವಣ್ಣ, ಬಿ.ಸೋಮಶೇಖರ್, ಜಿ.ಸಿ.ಚಂದ್ರಶೇಖರ್, ಉಮಾಶ್ರೀ, ಸೈಯದ್ ನಾಸಿರ್ ಹುಸೇನ್, ಜಮೀರ್ ಅಹ್ಮದ್, ಮಧು ಬಂಗಾರಪ್ಪ, ವಿ.ಎಸ್.ಉಗ್ರಪ್ಪ, ಎಲ್.ಹನುಮಂತಯ್ಯ, ಪಿಜಿಆರ್ ಸಿಂಧ್ಯಾ, ಅಭಿಷೇಕ್ ದತ್, ಸತೀಶ್ ಜಾರಕಿಹೊಳಿ, ಪಿ.ಟಿ.ಪರಮೇಶ್ವರ ನಾಯ್ಕ್, ಡಾ.ಪುಷ್ಪಾ ಅಮರನಾಥ್, ತನ್ವೀರ್ ಸೇಠ್, ಮಯೂರ್ ಜಯಕುಮಾರ್​ಗೆ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ: ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಕಾಂಗ್ರೆಸ್, BJP-JDS ಅಭ್ಯರ್ಥಿಗಳು ಯಾರು? ಇಲ್ಲಿದೆ ಪೂರ್ಣ ಪಟ್ಟಿ

ಇನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಅವರ ಹೆಸರು ಕೂಡ ಇದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ನಾಸಿರ್ ಹುಸೇನ್ ಅವರು ವಿವಾದಕ್ಕೊಳಗಾಗಿದ್ದರು. ಇಷ್ಟೇ ಅಲ್ಲದೆ ಟಿಕೆಟ್ ವಂಚಿತ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಎಲ್. ಹನುಮಂತಯ್ಯ ಅವರಿಗೂ ಸ್ಟಾರ್ ಕ್ಯಾಂಪೇನರ್ ಸ್ಥಾನವನ್ನು ನೀಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:42 pm, Sun, 31 March 24