AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಕಾಂಗ್ರೆಸ್, BJP-JDS ಅಭ್ಯರ್ಥಿಗಳು ಯಾರು? ಇಲ್ಲಿದೆ ಪೂರ್ಣ ಪಟ್ಟಿ

ಈಗಾಗಲೇ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ದೇಶಾದ್ಯಂತ ಒಟ್ಟು ಏಳು ಹಂತದಲ್ಲಿ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್‌ 19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಹಾಗಾದ್ರೆ, ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಯಾವ್ಯಾವ ಪಕ್ಷದಿಂದ ಯಾರು-ಯಾರು ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವ ವಿವರ ಇಲ್ಲಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಕಾಂಗ್ರೆಸ್, BJP-JDS ಅಭ್ಯರ್ಥಿಗಳು ಯಾರು? ಇಲ್ಲಿದೆ ಪೂರ್ಣ ಪಟ್ಟಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Mar 30, 2024 | 6:04 PM

ಬೆಂಗಳೂರು, (ಮಾರ್ಚ್ 30): ಕರ್ನಾಟಕದಲ್ಲಿ(Karnataka) ಲೋಕಸಭಾ ಚುನಾವಣೆ (Loksabha Elections 2024) ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್(Congress)​ ಸೋಲಿಸಲು ಜೆಡಿಎಸ್​ ಮತ್ತು ಬಿಜೆಪಿ(BJP) ಮೈತ್ರಿ ಮಾಡಿಕೊಂಡಿವೆ. ಇನ್ನು ರಾಜ್ಯದ 28 ಲೋಕಸಭಾ ಕ್ಷೇತ್ರಕ್ಕೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿವೆ. ಕಾಂಗ್ರೆಸ್​ 28 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಮೈತ್ರಿ ಪಕ್ಷಗಳಾದ ಬಿಜೆಪಿ 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಹಾಗಾದ್ರೆ, ಯಾವ್ಯಾವ ಲೋಕಸಭಾ ಕ್ಷೇತ್ರದಿಂದ ಅಂತಿಮವಾಗಿ ಕಣಕ್ಕಿಳಿದ ಅಭ್ಯರ್ಥಿಗಳು ಯಾರು ?  ಯಾರಿಗೆ ಯಾರು ಎದುರಾಳಿ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.

1. ಚಿಕ್ಕೋಡಿ ಲೋಕಸಭಾ ಕ್ಷೇತ್ರ

  • ಬಿಜೆಪಿ – ಅಣ್ಣಾಸಾಹೇಬ್‌ ಜೊಲ್ಲೆ
  • ಕಾಂಗ್ರೆಸ್ ಅಭ್ಯರ್ಥಿ– ಪ್ರಿಯಾಂಕಾ ಜಾರಕಿಹೊಳಿ

2. ಬೆಳಗಾವಿ ಲೋಕಸಭಾ ಕ್ಷೇತ್ರ

  • ಬಿಜೆಪಿ – – ಜಗದೀಶ್‌ ಶೆಟ್ಟರ್‌
  • ಕಾಂಗ್ರೆಸ್ – ಮೃಣಾಳ್ ಹೆಬ್ಬಾಳ್ಕರ್

3 . ಬಾಗಲಕೋಟೆ ಲೋಕಸಭಾ ಕ್ಷೇತ್ರ

  • ಬಿಜೆಪಿ – ಪಿಸಿ ಗದ್ದಿಗೌಡರ್‌
  • ಕಾಂಗ್ರೆಸ್ – ಸಂಯುಕ್ತಾ ಪಾಟೀಲ್

4. ವಿಜಯಪುರ (SC)

  • ಬಿಜೆಪಿ – ರಮೇಶ್‌ ಜಿಗಜಿಣಗಿ
  • ಕಾಂಗ್ರೆಸ್ – ಪ್ರೊ.ರಾಜು ಆಲಗೂರ್

5. ಕಲಬುರಗಿ (SC)

  • ಬಿಜೆಪಿ – ಡಾ. ಉಮೇಶ್‌ ಜಾಧವ್
  • ಕಾಂಗ್ರೆಸ್ – ರಾಧಾಕೃಷ್ಣ ದೊಡ್ಡಮನಿ

6. ರಾಯಚೂರು (ST)

  • ಬಿಜೆಪಿ – ರಾಜಾ ಅಮರೇಶ್ವರ ನಾಯಕ
  • ಕಾಂಗ್ರೆಸ್ – ಜಿ.ಕುಮಾರ ನಾಯಕ

7. ಬೀದರ್

  • ಬಿಜೆಪಿ – ಭಗವಂತ್‌ ಖೂಬಾ
  • ಕಾಂಗ್ರೆಸ್ – ಸಾಗರ್ ಖಂಡ್ರೆ

8. ಕೊಪ್ಪಳ

  • ಬಿಜೆಪಿ – ಡಾ. ಬಸವರಾಜ್‌ ಕ್ಯಾವಟೂರು
  • ಕಾಂಗ್ರೆಸ್ – ಕೆ. ರಾಜಶೇಖರ ಹಿಟ್ನಾಳ

9. ಬಳ್ಳಾರಿ (ST)

  • ಬಿಜೆಪಿ – ಶ್ರೀರಾಮುಲು
  • ಕಾಂಗ್ರೆಸ್ – ಈ.ತುಕಾರಾಂ

10. ಹಾವೇರಿ

  • ಬಿಜೆಪಿ – ಬಸವರಾಜ ಬೊಮ್ಮಾಯಿ
  • ಕಾಂಗ್ರೆಸ್ – ಆನಂದಸ್ವಾಮಿ ಗಡ್ಡದೇವರಮಠ

11. ಧಾರವಾಡ

  • ಬಿಜೆಪಿ – ಪ್ರಹ್ಲಾದ್‌ ಜೋಶಿ
  • ಕಾಂಗ್ರೆಸ್ – ವಿನೋದ್‌ ಅಸೂಟಿ

12. ಉತ್ತರ ಕನ್ನಡ

  • ಬಿಜೆಪಿ – ವಿಶ್ವೇಶ್ವರ ಹೆಗಡೆ ಕಾಗೇರಿ
  • ಕಾಂಗ್ರೆಸ್ – ಅಂಜಲಿ ನಿಂಬಾಳ್ಕರ್‌

13. ದಾವಣಗೆರೆ

  • ಬಿಜೆಪಿ – ಗಾಯತ್ರಿ ಸಿದ್ದೇಶ್ವರ್‌
  • ಕಾಂಗ್ರೆಸ್ – ಪ್ರಭಾ ಮಲ್ಲಿಕಾರ್ಜುನ್

14. ಶಿವಮೊಗ್ಗ

  • ಬಿಜೆಪಿ – ಬಿ.ವೈ ರಾಘವೇಂದ್ರ
  • ಕಾಂಗ್ರೆಸ್ – ಗೀತಾ ಶಿವರಾಜ್​ಕುಮಾರ್

15. ಮೈಸೂರು

  • ಬಿಜೆಪಿ – ಯದುವೀರ್‌ ಒಡೆಯರ್
  • ಕಾಂಗ್ರೆಸ್ – ಎಂ. ಲಕ್ಷ್ಮಣ್

16. ಉಡುಪಿ-ಚಿಕ್ಕಮಗಳೂರು

  • ಬಿಜೆಪಿ- ಕೋಟ ಶ್ರೀನಿವಾಸ್‌ ಪೂಜಾರಿ
  • ಕಾಂಗ್ರೆಸ್ – ಜಯಪ್ರಕಾಶ್ ಹೆಗ್ಡೆ

17. ದಕ್ಷಿಣ ಕನ್ನಡ

  • ಬಿಜೆಪಿ – ಕ್ಯಾ. ಬ್ರಿಜೇಶ್‌ ಚೌಟಾ
  • ಕಾಂಗ್ರೆಸ್ – ಆರ್.ಪದ್ಮರಾಜ್

18. ಚಿತ್ರದುರ್ಗ (SC)

  • ಬಿಜೆಪಿ – ಗೋವಿಂದ ಕಾರಜೋಳ
  • ಕಾಂಗ್ರೆಸ್ – ಬಿ.ಎನ್ ಚಂದ್ರಪ್ಪ

19. ತುಮಕೂರು

  • ಬಿಜೆಪಿ – ವಿ ಸೋಮಣ್ಣ
  • ಕಾಂಗ್ರೆಸ್ – ಎಸ್.ಪಿ. ಮುದ್ದಹನುಮೇಗೌಡ

20. ಚಾಮರಾಜನಗರ (SC)

  • ಬಿಜೆಪಿ – ಎಸ್‌. ಬಾಲರಾಜ್‌
  • ಕಾಂಗ್ರೆಸ್ – ಸುನೀಲ್ ಬೋಸ್

21. ಬೆಂಗಳೂರು ಗ್ರಾಮಾಂತರ

  • ಬಿಜೆಪಿ – ಡಾ ಸಿ.ಎನ್‌ ಮಂಜುನಾಥ್‌
  • ಕಾಂಗ್ರೆಸ್ – ಡಿ.ಕೆ ಸುರೇಶ್

22. ಬೆಂಗಳೂರು ಉತ್ತರ

  • ಬಿಜೆಪಿ – ಶೋಭಾ ಕರಂದ್ಲಾಜೆ
  • ಕಾಂಗ್ರೆಸ್ – ಎಂ.ವಿ.ರಾಜೀವ್ ಗೌಡ

23. ಬೆಂಗಳೂರು ಕೇಂದ್ರ

  • ಬಿಜೆಪಿ – ಪಿ.ಸಿ ಮೋಹನ್
  • ಕಾಂಗ್ರೆಸ್ – ಮನ್ಸೂರ್ ಅಲಿಖಾನ್‌

24. ಬೆಂಗಳೂರು ದಕ್ಷಿಣ

  • ಬಿಜೆಪಿ – ತೇಜಸ್ವಿ ಸೂರ್ಯ
  • ಕಾಂಗ್ರೆಸ್ – ಸೌಮ್ಯಾ ರೆಡ್ಡಿ

25. ಚಿಕ್ಕಬಳ್ಳಾಪುರ

  • ಬಿಜೆಪಿ – ಡಾ.ಕೆ ಸುಧಾಕರ್‌
  • ಕಾಂಗ್ರೆಸ್ – ರಕ್ಷಾ ರಾಮಯ್ಯ

26. ಮಂಡ್ಯ

  • ಜೆಡಿಎಸ್‌ – ಹೆಚ್‌.ಡಿ ಕುಮಾರಸ್ವಾಮಿ
  • ಕಾಂಗ್ರೆಸ್ – ಸ್ಟಾರ್ ಚಂದ್ರು

27. ಹಾಸನ

  • ಜೆಡಿಎಸ್ – ಪ್ರಜ್ವಲ್‌ ರೇವಣ್ಣ
  • ಕಾಂಗ್ರೆಸ್ – ಶ್ರೇಯಸ್‌ ಪಟೇಲ್‌

28. ಕೋಲಾರ (SC)

  • ಜೆಡಿಎಸ್ – ಮಲ್ಲೇಶ್ ಬಾಬು
  • ಕಾಂಗ್ರೆಸ್ – ಕೆ.ವಿ ಗೌತಮ್

ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ