ದೆಹಲಿಯಲ್ಲಿ ರಸ್ತೆ ಮಧ್ಯೆ ಮಿತಿ ಮೀರಿದ ಜಗಳ; 25 ವರ್ಷದ ಮಹಿಳೆಗೆ ಗುಂಡು ಹಾರಿಸಿ ಹತ್ಯೆ

|

Updated on: Jul 31, 2024 | 8:12 PM

ದೆಹಲಿಯಲ್ಲಿ ರಸ್ತೆ ನಡುವೆ ಇಬ್ಬರು ವಾಹನ ಸವಾರರ ನಡುವೆ ಜಗಳ ನಡೆದು, ಅದು ದುರಂತವಾಗಿ ಅಂತ್ಯವಾಗಿದೆ. ಈ ಜಗಳದ ಭರದಲ್ಲಿ 25 ವರ್ಷದ ಮಹಿಳೆಯನ್ನು ಗೋಕಲ್ಪುರಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ದುಷ್ಕರ್ಮಿಯೊಬ್ಬ ಮಹಿಳೆಯ ಜೊತೆ ತೀವ್ರ ವಾಗ್ವಾದದ ವೇಳೆ ಗುಂಡು ಹಾರಿಸಿದ್ದಾನೆ. ಈ ಘಟನೆ ಸ್ಥಳೀಯ ಸಮುದಾಯದಲ್ಲಿ ವ್ಯಾಪಕ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.

ದೆಹಲಿಯಲ್ಲಿ ರಸ್ತೆ ಮಧ್ಯೆ ಮಿತಿ ಮೀರಿದ ಜಗಳ; 25 ವರ್ಷದ ಮಹಿಳೆಗೆ ಗುಂಡು ಹಾರಿಸಿ ಹತ್ಯೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಈಶಾನ್ಯ ದೆಹಲಿಯ ಗೋಕಲ್ಪುರಿ ಮೇಲ್ಸೇತುವೆಯ ಕೆಳಗೆ ನಡೆದ ಬೈಕ್ ಸವಾರ ಮತ್ತು ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿಯ ನಡುವೆ ಜಗಳ ನಡೆದು, ಹಿಂದೆ ಕುಳಿತಿದ್ದ ಮಹಿಳೆಯನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಆ ಮಹಿಳೆಯ ಗಂಡ ಹಾಗೂ ಇಬ್ಬರು ಮಕ್ಕಳ ಎದುರೇ ಆಕೆ ಗುಂಡೇಟಿಗೆ ಬಲಿಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ರಸ್ತೆ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಇಂದು 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸಿಮ್ರಂಜೀತ್ ಕೌರ್ ಎಂಬ 25 ವರ್ಷದ ಮಹಿಳೆಯ ಮೇಲೆ ಗುಂಡು ಹಾರಿಸಲಾಗಿದೆ. ಆಕೆಯ ಗಂಡ ಹೀರಾ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ನನ್ನ ಪತ್ನಿ ಸಿಮ್ರಂಜೀತ್ ಕೌರ್ ಮತ್ತು ಇಬ್ಬರು ಮಕ್ಕಳೊಂದಿಗೆ ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಂದಿಗೆ ಮಾತಿನ ಚಕಮಕಿ ಉಂಟಾಗಿತ್ತು. ಗೋಕಲ್ಪುರಿ ಮೇಲ್ಸೇತುವೆ ಬಳಿ ಗಲಾಟೆ ಸಂಭವಿಸಿದ್ದು, ದುಷ್ಕರ್ಮಿಗಳು ಫ್ಲೈಓವರ್‌ನಿಂದ ಗುಂಡು ಹಾರಿಸಿ ನನ್ನ ಪತ್ನಿಯನ್ನು ಕೊಂದಿದ್ದಾರೆ. ಆಕೆಯ ಎದೆಗೆ ಗುಂಡು ಬಿದ್ದು ಆಕೆ ಸಾವನ್ನಪ್ಪಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಕೋರಮಂಗಲದ ಪಿಜಿಯಲ್ಲಿ ಯುವತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಮಧ್ಯ ಪ್ರದೇಶದಲ್ಲಿ ಅರೆಸ್ಟ್

“ಗೋಕುಲ್‌ಪುರಿ ಪ್ರದೇಶದಲ್ಲಿ ಪತಿಯೊಂದಿಗೆ ಮೋಟಾರ್‌ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಪ್ರಸ್ತುತ ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ದೆಹಲಿ ಪೊಲೀಸರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ