ಬೆಂಗಳೂರು, ಫೆಬ್ರವರಿ 11: ಸರಗಳ್ಳತನ (Chain snatching) ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಜಯನಗರ ಪೊಲೀಸರು (Police) 26 ವರ್ಷಗಳ ಬಳಿಕ ಬಂಧಿಸಿದ್ದಾರೆ. ಗುಲಾಬ್ ಖಾನ್ ಬಂಧಿತ ಆರೋಪಿ. ಆರೋಪಿ ಗುಲಾಬ್ ಖಾನ್ 1998ರ ಜನವರಿ 20 ರಂದು ಜಯನಗರದ 5ನೇ ಬ್ಲಾಕ್‌ನಲ್ಲಿ ಶ್ರೀಮತಿ ವಸಂತ ಎಂಬುವರ ಸರವನ್ನು ಕದ್ದು ಪರಾರಿಯಾಗಿದ್ದನು. ಜಯನಗರದಲ್ಲಿ ಕಳ್ಳತನ ಮಾಡಿದ ನಂತರ ಆರೋಪಿ ಗುಲಾಬ್ ಖಾನ್ ಯಾವುದೆ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ವೆಲ್ಡಿಂಗ್ ಕೆಲಸ ಮಾಡಿಕೊಂಡು ರಾಮನಗರದಲ್ಲಿ (Ramnagar) ನೆಲೆಸಿದ್ದನು. ಇದೀಗ ಪೊಲೀಸರು ದೂಳು ಹಿಡಿದಿರುವ ಹಳೆ ಪ್ರಕರಣಗಳಿಗೆ ಇತಿಶ್ರೀ ಹೇಳಲು ನಿಂತಾಗ, ಗುಲಾಬ್ ಖಾನ್ ಕೇಸ್ ಆಚೆ ಬಂದಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಗುಲಾಬ್ ಖಾನ್ ರಾಮನಗರದಲ್ಲಿ ಇರುವುದು ತಿಳಿದಿದ್ದು, ಕೂಡಲೆ ಸ್ಥಳಕ್ಕೆ ತೆರಳಿ ಅರೆಸ್ಟ್ ಮಾಡಿದ್ದಾರೆ.
ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಇನ್ನು ಗುಲಾಬ್ ಖಾನ್ 24ನೇ ವಯಸ್ಸಿನಲ್ಲಿ ಸರಗಳ್ಳತನ ಮಾಡಿದ್ದು, 50ನೇ ವಯಸ್ಸಿನಲ್ಲಿ ಅರೆಸ್ಟ್ ಆಗುತ್ತಿದ್ದಾನೆ.
ಇದನ್ನೂ ಓದಿ: ಕಳ್ಳತನದ ಆರೋಪಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಅಮೃತಹಳ್ಳಿ ಪೊಲೀಸರು, ಮಾನವ ಹಕ್ಕುಗಳ ಆಯೋಗ ದಾಳಿ
ಹುಬ್ಬಳ್ಳಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಅಬ್ದುಲ್ ಖಾದರ್ ಬಿಜಾಪುರ, ನವಾಜ್ಖಾನ್ ತರೀನ್ ಎಂಬ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿ ಇದ್ದ 81,600 ರೂ. ಮೌಲ್ಯದ 24 ಕ್ವಿಂಟಾಲ್ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿಗಳು ಫಲಾನುಭವಿಗಳ ಬಳಿ ಕಡಿಮೆ ದರಕ್ಕೆ ಪಡಿತರ ಅಕ್ಕಿ ಖರೀದಿ ಮಾಡಿ, ಬೇರೆ ಕಡೆ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.
ಬಳಿಕ ಆಹಾರ ಇಲಾಖೆ ನಿರೀಕ್ಷಕ ಅಬ್ದುಲ್ ಖತೀಬ ಸಮ್ಮುಖದಲ್ಲಿ ಪೊಲೀಶರು ಪರಿಶೀಲನೆ ನಡೆಸಿದಾಗ ಪಡಿತರ ಅಕ್ಕಿ ಸಾಗಟ ಬಯಲಾಗಿದೆ. ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ