ಬೆಂಗಳೂರು: ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಲಕಿ ಸಾವು: ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ 7 ಜನರ ಬಂಧನ
ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಒಂದರಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಲಕಿ ಮಾನ್ಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಮೃತಪಟ್ಟ ಒಂದೂವರೆ ತಿಂಗಳ ಬಳಿಕ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ 7 ಜನರನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 304ರಡಿ ಪ್ರಕರಣ ದಾಖಲಿಸಿ ವರ್ತೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 10: ಅಪಾರ್ಟ್‌ಮೆಂಟ್‌ನ ಸ್ವಿಮ್ಮಿಂಗ್ ಪೂಲ್ (swimming pool) ನಲ್ಲಿ ಬಾಲಕಿ ಮಾನ್ಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಮೃತಪಟ್ಟ ಒಂದೂವರೆ ತಿಂಗಳ ಬಳಿಕ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ 7 ಜನರ ಬಂಧನ ಮಾಡಲಾಗಿದೆ. ತಂದೆ ರಾಜೇಶ್ ದೂರು ಆಧರಿಸಿ ಎಲೆಕ್ಟ್ರಿಕಲ್ ವಿಂಗ್ ಟೀಂ, ಸ್ವಿಮ್ಮಿಂಗ್ ಪೂಲ್ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಐಪಿಸಿ ಸೆಕ್ಷನ್ 304ರಡಿ ಪ್ರಕರಣ ದಾಖಲಿಸಿ ವರ್ತೂರು ಪೊಲೀಸರು ಬಂಧಿಸಿದ್ದಾರೆ. ಪ್ರೆಸ್ಟೀಜ್ ಹೋಮ್ ಓನರ್ ಅಸೋಸಿಯೇಷನ್ ಅಧ್ಯಕ್ಷ ದಬಾಶಿಶ್ವಸಿನ್ಹಾ, ಸಿಬ್ಬಂದಿಯಾದ ಜಾವೇದ್ ಸಫೀಕ್, ಸಂತೋಷ್ ಮಹಾರಾಣಾ, ಬಿಕಾಸ್ ಕುಮಾರ್, ಭಕ್ತ ಚರಣ್ ಪ್ರಧಾನ್, ಸುರೇಶ್, ಗೋವಿಂದ್ ಮಂಡಲ್ ಬಂಧಿತರು.
ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಒಂದರಲ್ಲಿ ಬಾಲಕಿ ಮಾನ್ಯ ಸ್ವಿಮ್ಮಿಂಗ್ ಪೂಲ್ಗೆ ಇಳಿದಾಗ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಳು. ಬಾಲಕಿ ಜೋರಾಗಿ ಕಿರುಚಿಕೊಂಡಾಗ ಅಲ್ಲಿದ್ದವರು ಆಕೆಯನ್ನು ಹೇಗೋ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಬಾಲಕಿ ಪೋಷಕರು ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ
ರಾಮನಗರ: ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ ಆಗಿದೆ. ಕೆರೆಯ ಬಳಿ ಚಪ್ಪಲಿ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಾಲಕ ವಿರೇಶ್ ನಿರ್ಲಕ್ಷ: ಬೊಲೆರೊ ವಾಹನ ಪಲ್ಟಿಯಾಗಿ ಯುವಕ ಸಾವು
ರಾಯಚೂರು: ಬೊಲೆರೊ ಪಲ್ಟಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಬಳಿಯ ಎನ್ಎಚ್ 150 (C) ಮಾರ್ಗದಲ್ಲಿ ನಡೆದಿದೆ. ಆಂಜನೇಯ(23)ಮೃತ ಪ್ರಯಾಣಿಕ. ಮೃತ ಆಂಜನೇಯ ರಾಯಚೂರು ತಾಲ್ಲೂಕಿನ ಚಂದ್ರಬಂಡಾ ಗ್ರಾಮದ ಯುವಕ.
ಇದನ್ನೂ ಓದಿ: ಧಾರವಾಡದಲ್ಲಿ ಚಿಕ್ಕಮ್ಮನನ್ನೇ ಕೊಂದ ಕೊಲೆಗಾರ ಅಂದರ್; ಹತ್ಯೆಗೆ ಕಾರಣ ಬಾಯ್ಬಿಟ್ಟ ಹಂತಕ
ಬೊಲೆರೊದಲ್ಲಿ ಮೂವರು ಪ್ರಯಾಣಿಸುತ್ತಿದ್ದ ವೇಳೆ ಪಲ್ಟಿ ಆಗಿದೆ. ಚಾಲಕ ವಿರೇಶ್ ನಿರ್ಲಕ್ಷಕ್ಕೆ ಬೊಲೆರೊ ಪಲ್ಟಿ ಆಗಲು ಕಾರಣವೆಂದು ಆರೋಪ ಮಾಡಲಾಗಿದೆ. ಮತ್ತೊಬ್ಬ ಗಾಯಾಳು ನಾಗರಾಜ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ರಾಯಚೂರು ಎಸ್ಪಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.
ಮೋಜು ಮಸ್ತಿಗೆ ಬಂದು ನೀರಿನಲ್ಲಿ ಮುಳುಗಿ ಯುವಕ ಸಾವು!
ಚಿಕ್ಕಬಳ್ಳಾಫುರ: ಬೆಂಗಳೂರಿನ ಬಾಬುಸಾಪಾಳ್ಯ ನಿವಾಸಿ ಸ್ನೇಹಿತರ ಗ್ಯಾಂಗ್, ಒನ್ ಡೇ ಪಿಕ್ನಿಕ್ ಅಂತ ಬೆಂಗಳೂರಿನಿಂದ ಚಿಕ್ಕಬಬಳ್ಳಾಫುರಕ್ಕೆ ಆಗಮಿಸಿ ಕೆಲವು ಪ್ರವಾಸಿ ತಾಣಗಳಿಗೆ ಹೋಗಿದ್ರು. ಕೊನೆಗೆ ಶ್ರೀನಿವಾಸ್ ಸಾಗರ ಜಲಾಶಯಕ್ಕೆ ಹೋಗಿದ್ದಾರೆ. ಮೇಲೆ ಬಿಸಿಲು ಕೆಳಗೆ ನೀರು, ನೀರನ್ನು ನೊಡಿದ್ದೆ ತಡ, 22 ವರ್ಷ ಅಭಿ ಈಜಾಡಲು ನೀರಿಗೆ ಇಳಿದಿದ್ದಾನೆ, ನೋಡನೋಡುತ್ತಿಲೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಕಾರು ಟಚ್ ಆಗಿದ್ದಕ್ಕೆ ಗಲಾಟೆ, ಸಿಟ್ಟಿಗೆದ್ದು ಪ್ಯಾಂಟ್ ಬಿಚ್ಚಿದ ಕ್ಯಾಬ್ ಚಾಲಕ
ಮೃತ ಅಭಿ, ತಂದೆ ತಾಯಿಗೆ ಒಬ್ಬನೆ ಮಗನಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ, ಈಜು ಕಲಿತಿದ್ದ ಕಾರಣ ನೀರಿನಲ್ಲಿ ಕೆಲವೊತ್ತು ಈಜಾಡಿದ್ದಾನೆ, ಮುಂದಕ್ಕೆ ಮುಂದಕ್ಕೆ ಅಂತ ಅತಿಯಾಗಿ ಈಜಾಡಲು ಹೋಗಿ ನೀರು ಪಾಲಾಗಿದ್ದಾನೆ. ರಿಪ್ರೇಶ್ಗೆ ಅಂತ ಪ್ರವಾಸಕ್ಕೆ ಬಂದಿದ್ದ ಯುವಕನೊರ್ವ ನೀರು ಕಂಡು ಹಿಂದೂ ಮುಂದೆ ನೋಡದೆ ನೀರಿಗೆ ಇಳಿದಿದ್ದೆ ಸಾವಿಗೆ ಕಾರಣವಾಗಿದ್ದು, ಮೃತನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.