ಬೆಂಗಳೂರು: ಕಾರು ಟಚ್ ಆಗಿದ್ದಕ್ಕೆ ಗಲಾಟೆ, ಸಿಟ್ಟಿಗೆದ್ದು ಪ್ಯಾಂಟ್ ಬಿಚ್ಚಿದ ಕ್ಯಾಬ್ ಚಾಲಕ
ರಾಜಧಾನಿ ಬೆಂಗಳೂರಲ್ಲಿ ರೋಡ್ ರೇಜ್ ಪ್ರಕರಣವು ಮುಂದುವರಿದಿದೆ. ಕ್ಯಾಬ್‌ಗೆ ಬೇರೊಂದು ಕಾರು ಟಚ್ ಆಗಿದ್ದಕ್ಕೆ ಗಲಾಟೆ ಶುರುವಾಗಿದ್ದು, ಗಲಾಟೆ ವೇಳೆ ಕ್ಯಾಬ್ ಚಾಲಕ ಗಲಾಟೆಯಲ್ಲಿ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿದ್ದು, ಇದೀಗ ಕ್ಯಾಬ್ ಲಾಕನ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು, (ಫೆಬ್ರವರಿ 10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ( ಫೆಬ್ರುವರಿ 9ರ) ರಾತ್ರಿ ಹೆಬ್ಬಾಳ ಫ್ಲೈಓವರ್ ( hebbal flyover) ಮೇಲೆ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದೆ. ಹೌದು..ಕ್ಯಾಬ್‌ಗೆ ಬೇರೊಂದು ಕಾರು ಟಚ್ ಆಗಿದ್ದಕ್ಕೆ ಗಲಾಟೆ ಶುರುವಾಗಿದ್ದು, ಗಲಾಟೆ ವೇಳೆ ಕ್ಯಾಬ್ ಚಾಲಕ ಗಲಾಟೆಯಲ್ಲಿ ಪ್ಯಾಂಟ್ ಬಿಚ್ಚಿಲು ಮುಂದಾಗಿದ್ದಾನೆ. ಕ್ಯಾಬ್ ಚಾಲಕನ ಈ ಅಸಭ್ಯ ವರ್ತನೆಗೆ ಇತರೆ ವಾಹನ ಸವಾರರು ರೊಚ್ಚಿಗೆದಿದ್ದಾರೆ. ಇದರಿಂದ ಗಲಾಟೆ ಮತ್ತೊಷ್ಟು ಹೆಚ್ಚಾಗಿದೆ. ಪ್ಯಾಂಟ್ ಬಿಚ್ಚಿಲು ಮುಂದಾಗಿದ್ದ ಕ್ಯಾಬ್ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಹೋಗುವಾಗ ಕ್ಯಾಬ್‌ಗೆ ಮತ್ತೊಂದು ಕಾರು ಟಚ್ ಆಗಿತ್ತು. ಇದರಿಂದ ಸಿಟ್ಟಿಗೆದ್ದು ಕ್ಯಾಬ್ ಚಾಲಕ ಹಾಗೂ ಕಾರಿನ ಡ್ರೈವರ್ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಕೋಪಗೊಂಡ ಕ್ಯಾಬ್ ಚಾಲಕ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಚಾಲಕನ ವಿಕೃತಿಗೆ ಗಲಾಟೆ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Hit And Run: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ಗೆ ಮಹಿಳೆ ಬಲಿ
@CPBlr Shocked and disgusted by the appalling behavior of a cab driver KA03 AJ 1333 who exposed himself on the road today on Hebbal flyover. Such indecent acts have no place in our community. Requesting swift action @DCPNEBCP to ensure the safety and decency of all road users. pic.twitter.com/a5SnzbPYds
— Gautham Azad (@Gauthamazad) February 9, 2024
ಕ್ಯಾಬ್ ಚಾಲಕನ ವರ್ತನೆಗೆ ಇತರೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಕಾರಲ್ಲಿ ಮಹಿಳೆಯರು ಮಕ್ಕಳು ಇದ್ದರೂ, ಅವರ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕಿಡಿಕಾರಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ