ಪ್ರಿಯಕರನ ಜತೆಗೂಡಿ ಪತಿಯ ಹತ್ಯೆಗೈದು ಮೃತದೇಹವನ್ನು ತನ್ನ ಬೆಡ್ರೂಂನಲ್ಲೇ ಸುಟ್ಟ ಮಹಿಳೆ
ಈ ಘಟನೆ ನಡೆದು ಸುಮಾರು 12 ದಿನಗಳು ನಡೆದಿವೆ ಎಂದು ಅಂದಾಜಿಸಲಾಗಿದ್ದು, ಮಗಳ ಕಣ್ಮುಂದೆಯೇ ಪತಿ ರಯೀಸ್ ಶೇಖ್ನ ಕತ್ತನ್ನು ಮೊನಚಾದ ಆಯುಧದಿಂದ ಕೊಯ್ದು ಕೊಲೆ ಮಾಡಿದ್ದಾರೆ ಎಂದು ಎಂದು ರಶೀದಾ ಶೇಖ್ ಮತ್ತು ಆಕೆಯ ಪ್ರಿಯಕರ ಅಮಿತ್ ಮಿಶ್ರಾರ ಮೇಲೆ ಆರೋಪಿಸಲಾಗಿದೆ.
ಮುಂಬೈ: 28 ವರ್ಷದ ಮಹಿಳೆಯೋರ್ವಳು ತನ್ನ ಪ್ರಿಯಕರನ ಜತೆಗೂಡಿ ಗಂಡನನ್ನು ಹತ್ಯಗೈದು ತನ್ನ ಮನೆಯಲ್ಲೇ ಹೂತಿಟ್ಟ ಘಟನೆಯೊಂದು ಪಶ್ಚಿಮ ಮುಂಬೈನ ಉಪನಗರವೊಂದರಲ್ಲಿ ನಡೆದಿದೆ. ಮಹಿಳೆಯನ್ನು ರಶೀದಾ ಶೇಖ್ ಎಂದು ಗುರುತಿಸಲಾಗಿದ್ದು, ಪ್ರಿಯಕರ ಅಮಿತ್ ಮಿಶ್ರಾ ಎಂಬಾತನ ಜತೆ ಸೇರಿ ಈ ಕೃತ್ಯ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ರಶೀದಾ ಶೇಖ್ಳನ್ನು ಬಂಧಿಸಲಾಗಿದ್ದು, ಆಕೆಯ ಪ್ರಿಯಕರ ಅಮಿತ್ ಮಿಶ್ರಾ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆ ನಡೆದು ಸುಮಾರು 12 ದಿನಗಳು ನಡೆದಿವೆ ಎಂದು ಅಂದಾಜಿಸಲಾಗಿದ್ದು, ಮಗಳ ಕಣ್ಮುಂದೆಯೇ ಪತಿ ರಯೀಸ್ ಶೇಖ್ನ ಕತ್ತನ್ನು ಮೊನಚಾದ ಆಯುಧದಿಂದ ಕೊಯ್ದು ಕೊಲೆ ಮಾಡಿದ್ದಾರೆ ಎಂದು ಎಂದು ರಶೀದಾ ಶೇಖ್ ಮತ್ತು ಆಕೆಯ ಪ್ರಿಯಕರ ಅಮಿತ್ ಮಿಶ್ರಾರ ಮೇಲೆ ಆರೋಪಿಸಲಾಗಿದೆ. ಜತೆಗೆ ರಶೀದಾ ಶೇಖ್ ಗಂಡನ ಮೃತದೇಹವನ್ನು ತನ್ನ ಬೆಡ್ರೂಂನಲ್ಲೇ ಸುಟ್ಟುಹಾಕಿದ್ದಾಳೆ ಎಂದೂ ಹೇಳಲಾಗಿದೆ.
ಹತ್ಯೆಗೊಳಗಾದ ರಯೀಸ್ ಶೇಖ್ ಬಟ್ಟೆ ಅಂಗಡಿ ಒಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಒಂದು ವಾರಗಳಿಂದ ಆತ ಕಾಣದೇ ಇದ್ದಾಗ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ಬೆಡ್ರೂಂನಲ್ಲಿ ಸುಡಲ್ಪಟ್ಟ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ದೇಶ ಮತ್ತು ರಾಜ್ಯದಲ್ಲಿ ಕೊವಿಡ್ನಿಂದ ಅನಾಥರಾದ ಮಕ್ಕಳೆಷ್ಟು ಗೊತ್ತೆ? ಇಲ್ಲಿದೆ ಅಂಕಿ ಅಂಶ
ಕೊವಿಡ್ನಿಂದ ಬೇಗ ಗುಣಮುಖರಾಗೋದು ಹೇಗೆ?; ತಾವು ಉಪಯೋಗಿಸಿದ ತಂತ್ರ ಹೇಳಿದ ಅಭಿಷೇಕ್ ಬಚ್ಚನ್
(28 year old woman kills husband with her lover in Mumbai)