ಮನೆಯಲ್ಲಿದ್ದ ಗೃಹಿಣಿ ಕೊಲೆ ಮಾಡಿ 5 ವರ್ಷದ ಮಗು ಕಿಡ್ನ್ಯಾಪ್, ಪ್ರಿಯಕರ ಕೃತ್ಯವೆಸಗಿರುವ ಶಂಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 13, 2023 | 9:55 AM

ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ಮನೆಯಲ್ಲಿದ್ದ ಗೃಹಿಣಿಯನ್ನ ಕೊಲೆ ಮಾಡಿ, 5ವರ್ಷದ ಮಗುವನ್ನ ಅಪಹರಿಸಿದ ಘಟನೆ ನಡೆದಿದೆ. ಕೊಳೂರು ಗ್ರಾಮದ ನಿವಾಸಿ ಭಾರತಿ(27) ಕೊಲೆಯಾದ ಗೃಹಿಣಿ.

ಮನೆಯಲ್ಲಿದ್ದ ಗೃಹಿಣಿ ಕೊಲೆ ಮಾಡಿ 5 ವರ್ಷದ ಮಗು ಕಿಡ್ನ್ಯಾಪ್, ಪ್ರಿಯಕರ ಕೃತ್ಯವೆಸಗಿರುವ ಶಂಕೆ
ಮೃತ ಮಹಿಳೆ
Follow us on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ಕೊಳೂರು ಗ್ರಾಮದಲ್ಲಿ ಮನೆಯಲ್ಲಿದ್ದ ಗೃಹಿಣಿಯನ್ನ ಕೊಲೆ ಮಾಡಿ, 5ವರ್ಷದ ಮಗುವನ್ನ ಅಪಹರಿಸಿದ ಘಟನೆ ನಡೆದಿದೆ. ಕೊಳೂರು ಗ್ರಾಮದ ನಿವಾಸಿ ಭಾರತಿ(27) ಕೊಲೆಯಾದ ಗೃಹಿಣಿ. ಪತಿ ಮನೆಗೆ ಬಂದಾಗ ಪತ್ನಿ ಭಾರತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಅತ್ತ ಮಗುವನ್ನ ಹುಡುಕಿದರೂ ಎಲ್ಲಿಯೂ ಸಿಕ್ಕಿಲ್ಲ. ಕೂಡಲೇ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೇಲ್ನೊಟಕ್ಕೆ ಕಳೆದ ರಾತ್ರಿ ಮನೆಗೆ ನುಗ್ಗಿ ಪ್ರಿಯಕರ ಹರೀಶ್​ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಜಮೀನು ವಿವಾದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ

ಚಿಕ್ಕಮಗಳೂರು: ಜಮೀನು ವಿವಾದ ಹಿನ್ನಲೆ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತರೀಕೆರೆ ತಾಲೂಕಿನ ಗೋಪಾಲ ಗ್ರಾಮದಲ್ಲಿ ನಿನ್ನೆ(ಜು.12) ನಡೆದಿದೆ. ಗಂಗಮ್ಮ, ಗೋಪಾಲ ಮತ್ತು ಲೋಕೇಶ್ ಎಂಬುವವರ ನಡುವೆ ಜಮೀನು ವಿವಾದವಿದೆ. ಈ ಹಿನ್ನಲೆ ಗಂಗಮ್ಮ ಹೈ ಕೋರ್ಟ್​ನಲ್ಲಿ ಜಮೀನಿಗೆ ಸ್ಟೇ ತಂದಿದ್ದರು. ಕೋರ್ಟ್​ಯಿಂದ ಸ್ಟೇ ತಂದಿದ್ದಕ್ಕೆ ಗಂಗಮ್ಮ ಮೇಲೆ ಲೋಕೇಶ್ ಹಲ್ಲೆ ಮಾಡಿದ್ದಾನೆ. ತೆಂಗಿನ ತೋಟದಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ಬಂದು, ಜಗಳ ತಗೆದು ಬಟ್ಟೆ ಹರಿದು ಮನಸ್ಸೋ‌ ಇಚ್ಛೆ ಥಳಿಸಿದ್ದಾನೆ. ಗಂಭೀರ ಹಲ್ಲೆಗೊಳಗಾದ ಗಂಗಮ್ಮ ಅವರನ್ನ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪತಿಯ ಪಾಲಿನ ಆಸ್ತಿ ಕೇಳಿದ್ದಕ್ಕೆ ಶತ್ರುಗಳಾದ ಸಂಬಂಧಿಕರು; ಮಹಿಳೆಯ ಬರ್ಬರ ಕೊಲೆ

ಔಷಧ ಸಾಗಿಸುತ್ತಿದ್ದ ವಾಹನದಲ್ಲಿ ಆಕಸ್ಮಿಕ ಬೆಂಕಿ; ಸುಟ್ಟು ಕರಕಲಾದ ಬಹುಪಾಲು ಮೆಡಿಸನ್​

ಉತ್ತರ ಕನ್ನಡ: ಔಷಧ ಸಾಗಿಸುತ್ತಿದ್ದ ವಾಹನದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ವಾಹನದಲ್ಲಿದ್ದ ಔಷಧಗಳು ಬಹುಪಾಲು ಸುಟ್ಟು ಕರಕಲಾದ ಘಟನೆ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 66ರ ಶಾಂತಿ ಸಾಗರ ಹೋಟೆಲ್ ಬಳಿ ನಡೆದಿದೆ. ಕಾರವಾರದಿಂದ ಹೊನ್ನಾವರ ಪಶು ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದ ಔಷಧ ಇದಾಗಿದ್ದು, ಊಟಕ್ಕೆಂದು ಚಾಲಕ ಹೆದ್ದಾರಿ ಪಕ್ಕ ವಾಹನ ನಿಲ್ಲಿಸಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸೂಕ್ತ ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದರಿಂದ ಹೆಚ್ಚಿನ ಹಾನಿಯಾಗಿಲ್ಲ. ಈ ಕುರಿತು ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ