ಒಂದೆಡೆ ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಎನ್ನುವವರಿದ್ದರೆ, ಇನ್ನೊಂದೆಡೆ ಪ್ರೀತಿ ಮಾಯೆ ಹುಷಾರು…ಇಲ್ಲಿ ಏನು ಬೇಕಾದ್ರೂ ನಡೆಯುತ್ತೆ ಎಂಬುದನ್ನು ನಿರೂಪಿಸುವವರು ಇದ್ದಾರೆ. ಹೌದು, ಇಲ್ಲಿ ಪ್ರೀತಿ ಕುರುಡು ನಿಜ, ವಯಸ್ಸು ಕೂಡ ಲೆಕ್ಕಕ್ಕಿಲ್ಲ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ ಈ ಜೋಡಿ. ಇದು ಅಂತಿಂಥ ಜೋಡಿಯಲ್ಲ. ಈ ಪ್ರಕರಣದಲ್ಲಿ ವಧುಗೆ ಕೇವಲ 19 ವರ್ಷವಾದರೆ, ವರ 67 ವರ್ಷದ ಮುದುಕ ಎಂದರೆ ನಂಬಲೇಬೇಕು. ಇಂತಹದೊಂದು ಘಟನೆ ನಡೆದಿರುವುದು ಪಂಜಾಬ್-ಹರ್ಯಾಣ ಗಡಿ ಭಾಗ ಹಂಚ್‌ಪುರಿಯ ಹಠ್ನಿಯಲ್ಲಿ.
ಆಕೆಗೆ ಅದಾಗಲೇ ಮದುವೆಯಾಗಿತ್ತು. ಇದೀಗ 19 ವರ್ಷ ತುಂಬಿ 20ನೇ ವರ್ಷಕ್ಕೆ ಕಾಲಿಡಳಿದ್ದಳು. ಅತ್ತ 67 ವರ್ಷದ ಅಜ್ಜ ಏಳು ಮಕ್ಕಳ ತಂದೆ. ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಅದು ಕೂಡ ಭೂ ವಿವಾದಕ್ಕೆ ಸಂಬಂಧಿಸಿದ ವಿಷಯದಲ್ಲಿ ಎಂಬುದು ಇನ್ನೂ ರೋಚಕ. ಗ್ರಾಮದಲ್ಲಿ ಜಮೀನಿನ ವಿಚಾರದಲ್ಲಿ ಹುಡುಗಿಯ ಕುಟುಂಬವು ವಿವಾದ ಹೊಂದಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುದುಕ ಯುವತಿಯ ಕುಟುಂಬಕ್ಕೆ ಸಹಾಯ ಮಾಡಲು ಬರುತ್ತಿದ್ದರು. ಈ ಸಮಯದಲ್ಲಿ ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಅತ್ತ ನಾಲ್ಕು ವರ್ಷಗಳ ಹಿಂದೆ ಮುದುಕನ ಪತ್ನಿ ಕೂಡ ಮೃತಪಟ್ಟಿದ್ದರು. ಹೀಗಾಗಿ ಮತ್ತೊಂದು ಮದುವೆಯಾಗುವ ಬಗ್ಗೆ ಯೋಚಿಸಿದ್ದ.
ಇದೇ ಸಮಯದಲ್ಲಿ ಅಜ್ಜನ ಪ್ರೇಮಪಾಶದಲ್ಲಿ ಮುಳುಗಿದ್ದ ಯುವತಿ ಕೂಡ ಗಂಡನಿಗೆ ಕೈ ಕೊಡಲು ರೆಡಿಯಾಗಿದ್ದಳು. ಅದರಂತೆ ಪತಿಯನ್ನು ಬಿಟ್ಟು ಬಿಟ್ಟು ಓಡಿ ಹೋಗಿ ಯುವತಿ ಮುದುಕನನ್ನು ಮದುವೆಯಾಗಿದ್ದಾಳೆ. ಇದರ ಬೆನ್ನಲ್ಲೇ ಎರಡು ಕುಟುಂಬದಿಂದ ಬೆದರಿಕೆಗಳು ಬರಲಾರಂಭಿಸಿದೆ. ಅಷ್ಟೇ ಅಲ್ಲದೆ ಯುವತಿ ಕುಟುಂಬಸ್ಥರು ಅಜ್ಜನ ಮೇಲೆ ಕೇಸ್ ದಾಖಲಿಸಿದ್ದಾರೆ.
ಇದರಿಂದ ಬೇರೆ ದಾರಿ ಕಾಣದೇ ಯುವತಿ ಹಾಗೂ ಮುದುಕ ಕೋರ್ಟ್ ಮೊರೆ ಹೋಗಿದ್ದಾರೆ. ನನ್ನ ಪತ್ನಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ ಇದೆ ಎಂದು ಪಂಜಾಬ್-ಹರ್ಯಾಣ ಕೋರ್ಟ್ಗೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಗಮನಿಸಿದ ಜಡ್ಜ್ ದಂಗಾಗಿದ್ದಾರೆ. ಅಷ್ಟೇ ಅಲ್ಲದೆ ಮದುವೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತಷ್ಟು ತನಿಖೆ ನಡೆಸುವಂತೆ ನ್ಯಾಯಮೂರ್ತಿ ಪೊಲೀಸರಿಗೆ ನಿರ್ದೇಶಿಸಿದೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಇಬ್ಬರೂ ಪ್ರೀತಿಸಿ ಮದುವೆಯಾಗಿರುವುದು ತಿಳಿದು ಬಂದಿದೆ. ಆದರೆ ಇದೀಗ ಮನವೊಲಿಸಲು ಯತ್ನಿಸಲಾದರೂ ಮುದಕನನ್ನು ಬಿಟ್ಟಿರಲು ಯುವತಿ ಒಪ್ಪುತ್ತಿಲ್ಲ. ಅತ್ತ ಯುವತಿಯನ್ನು ಬಿಟ್ಟಿರಲು ಮುದುಕ ಕೂಡ ರೆಡಿಯಿಲ್ಲ. ಹೀಗಾಗಿ ಪೊಲೀಸರು ಕೂಡ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದು, ಈ ಪ್ರಕರಣವನ್ನು ಇತ್ಯರ್ಥ ಪಡಿಸುವುದು ಹೇಗೆ ಎಂದು ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತಾ ಕಾಲ ಕಳೆಯಬೇಕಿದ್ದ ಮುದುಕ 19 ರ ಹರೆಯದ ಹುಡುಗಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: Crime News: ಯುವಕನನ್ನು ಮದುವೆಯಾಗಲು ಖತರ್ನಾಕ್ ಪ್ಲ್ಯಾನ್ ಮಾಡಿದ ಆಂಟಿ
ಇದನ್ನೂ ಓದಿ: KL Rahul: ಕೆಎಲ್ ರಾಹುಲ್ ಮೇಲೆ ಪ್ರೇಕ್ಷಕರಿಂದ ಬಾಟಲ್ ಕಾರ್ಕ್ ದಾಳಿ: ತಿರುಗಿಸಿ ಹೊಡಿ ಎಂದ ಕಿಂಗ್ ಕೊಹ್ಲಿ
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ