Crime News: ಹಣ ಬಿಟ್ಟು 129 ಬಾಕ್ಸ್ ಮದ್ಯ ದೋಚಿದ ಕಳ್ಳರು..!
Crime News: ಪೊಲೀಸ್ ಅಧಿಕಾರಿ ರಾಹುಲ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಮದ್ಯಪ್ರಿಯ ಕಳ್ಳರ ಹುಡುಕಾಟಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ಕಳ್ಳರ ಗ್ಯಾಂಗ್ವೊಂದು ಹಣದ ಬದಲು ಇಡೀ ಮದ್ಯದಂಗಡಿಯನ್ನೇ ದೋಚಿದ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ್ ಜಿಲ್ಲೆಯ ಖೋರಬಾರ್ ಪ್ರದೇಶದಲ್ಲಿ ನಡೆದಿದೆ. ಮೊದಲೇ ಪ್ಯ್ಲಾನ್ ಮಾಡಿದಂತೆ ಪಿಕಪ್ ಜೀಪ್ನಲ್ಲಿ ಬಂದ ಯುವಕರ ತಂಡ ಮೂರು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಮದ್ಯದೊಂದಿಗೆ ಪರಾರಿಯಾಗಿದ್ದಾರೆ. ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಮದ್ಯ ಕಳ್ಳರ ಗ್ಯಾಂಗ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮದ್ಯದ ಅಂಗಡಿ ಮಾಲೀಕ ರಿತು ಶ್ರೀವಾಸ್ತವ ತಮ್ಮ ಶಾಪ್ಗೆ ಬೀಗ ಹಾಕಿ ಮನೆಗೆ ಮರಳಿದ್ದರು. ಇದೇ ಸಮಯಕ್ಕಾಗಿ ಜೀಪ್ನೊಂದಿಗೆ ಯುವಕರ ತಂಡವೊಂದು ಮದ್ಯದಂಗಡಿಯ ಬಳಿಯೇ ಹೊಂಚು ಹಾಕಿ ಕಾದು ಕುಳಿತಿದ್ದರು. ಇತ್ತ ಜನರ ಓಡಾಟ ಕಡಿಮೆಯಾಗುತ್ತಿದ್ದಂತೆ ಮದ್ಯದಂಗಡಿಯ ಬೀಗ ಮುರಿದ ತಂಡ 129 ಬಾಕ್ಸ್ ಮತ್ತು 12 ಬಾಟಲಿ ಮದ್ಯವನ್ನು ಕದ್ದಿದ್ದಾರೆ. ಇದಾಗ್ಯೂ ಮದ್ಯದಂಗಡಿಯಲ್ಲಿದ್ದ ಹಣವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
ಫುಲ್ ಲೋಡ್ ಆಗಿರುವ ಪಿಕಪ್ ಜೀಪ್ ವೇಗವಾಗಿ ಚಲಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡಿದ್ದಾರೆ. ಇದೇ ವೇಳೆ ಖೋರಬಾರ್ ಪ್ರದೇಶದ ಮದ್ಯದಂಗಡಿ ಬಾಗಿಲು ಕೂಡ ಮುರಿದಿರುವುದು ಬೆಳಕಿ ಬಂದಿದೆ. ತಕ್ಷಣವೇ ಅಂಗಡಿ ಮಾಲೀಕ ರಿತು ಶ್ರೀವಾಸ್ತವ ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು.
ಇದೀಗ ಮದ್ಯ ಕದ್ದ ಯುವಕರ ತಂಡಕ್ಕಾಗಿ ಖೋರಬಾರ್ ಪೊಲೀಸರು ಬಲೆ ಬೀಸಿದ್ದು, ಪೊಲೀಸ್ ಅಧಿಕಾರಿ ರಾಹುಲ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಮದ್ಯಪ್ರಿಯ ಕಳ್ಳರ ಹುಡುಕಾಟಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
(youths came from pickup absconded with liquor worth three lakhs in gorakhpur)