AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಡಬಲ್ ಆ್ಯಕ್ಟಿಂಗ್ ಮೂಲಕ 2ನೇ ಮದುವೆಗೆ ಮುಂದಾದ ಭೂಪ..!

ನಿಶ್ಚಿತಾರ್ಥವನ್ನೂ ಯುವತಿಯ ಕುಟುಂಬದವರು ನಡೆಸಿಕೊಟ್ಟಿದ್ದರು. ಇದೇ ವೇಳೆ ರಾಯನ್​ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಪಡೆದುಕೊಂಡಿದ್ದ.

Crime News: ಡಬಲ್ ಆ್ಯಕ್ಟಿಂಗ್ ಮೂಲಕ 2ನೇ ಮದುವೆಗೆ ಮುಂದಾದ ಭೂಪ..!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 16, 2021 | 9:48 PM

Share

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದರಂತೆ ಯಾರ ಹಣೆಬರಹದಲ್ಲಿ ಯಾರಿರುತ್ತಾರೋ ಅವರೇ ಸಿಗುತ್ತಾರೆ. ಆದರೆ ಇಲ್ಲೊಬ್ಬ ಭೂಪ ತನ್ನ ಹಣೆಬರಹವನ್ನು ಬದಲಿಸಿ ಎರಡು ಮದುವೆಯಾಗಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಹೌದು, ಚೆನ್ನೈನ ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎಂಬ ವ್ಯಕ್ತಿಗೆ ಎರಡನೇ ಮದುವೆಯಾಗಲು ಭರ್ಜರಿ ಪ್ಲ್ಯಾನ್ ರೂಪಿಸಿದ್ದ. ಅದು ಕೂಡ ಸಿನಿಮೀಯ ಶೈಲಿಯ ಡಬಲ್ ಆ್ಯಕ್ಟಿಂಗ್ ಮೂಲಕ ಎಂಬುದು ವಿಶೇಷ. ಆರೋಪಿ ರಾಯನ್​ಗೆ ಈ ಹಿಂದೆಯೇ ಮದುವೆಯಾಗಿತ್ತು. ಈ ದಂಪತಿಗೆ ಒಂದು ಪುಟ್ಟ ಕೂಡ ಇದೆ. ಇದಾಗ್ಯೂ 30 ವರ್ಷದ ರಾಯನ್ ತನ್ನ ಸಹೋದ್ಯೋಗಿ 21 ವರ್ಷದ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿದ್ದ.

ಈ ಸ್ನೇಹ ಪ್ರೇಮಕ್ಕೆ ತಿರುಗಿದೆ. ಆದರೆ ಮೊದಲ ಪತ್ನಿ ಹಾಗೂ ಮಗುವಿರುವ ವಿಷಯವನ್ನು ರಾಯನ್ ಆಕೆಯೊಂದಿಗೆ ಮರೆಮಾಚಿದ್ದ. ಅಲ್ಲದೆ ತನ್ನ ಪ್ರೇಯಸಿಯನ್ನು ವಿವಾಹವಾಗಲು ನಿರ್ಧರಿಸಿದ್ದ. ಅದರಂತೆ ನಿಶ್ಚಿತಾರ್ಥವನ್ನೂ ಯುವತಿಯ ಕುಟುಂಬದವರು ನಡೆಸಿಕೊಟ್ಟಿದ್ದರು. ಇದೇ ವೇಳೆ ರಾಯನ್​ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ಇನ್ನು ತನ್ನ ಮೊದಲ ಮದುವೆ ವಿಚಾರ ಬಹಿರಂಗವಾದರೂ ಸಂಶಯ ಮೂಡದಂತೆ ಮಾಡಲು ತನಗೆ ಸಹೋದರನೊಬ್ಬನಿದ್ದಾನೆ ಎಂದು ಮೊದಲೇ ಕಥೆ ಕಟ್ಟಿದ್ದ.

ನಾವಿಬ್ಬರೂ ಅವಳಿ-ಜವಳಿ ಎಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿದ್ದನು. ಈಗ ಅವನು ದುಬೈನಲ್ಲಿದ್ದಾನೆ ಎಂದು ತಿಳಿಸಿದ್ದ. ಅಷ್ಟೇ ಅಲ್ಲದೆ ಆಕೆಯನ್ನು ಮತ್ತಷ್ಟು ನಂಬಿಸಲು ಬೇರೊಂದು ಹೆಸರಿನಲ್ಲಿ ತನ್ನದೇ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದನು. ಆದರೆ ಮದುವೆಗೆ ಇನ್ನೇನು ದಿನಗಳಿರುವಾಗ ಸಂಬಂಧಿಕರೊಬ್ಬರು ರಾಯನ್​ಗೆ ಮದುವೆಯಾಗಿರುವ ವಿಚಾರವನ್ನು ಯುವತಿಗೆ ತಿಳಿಸಿದ್ದಾರೆ.

ಇದರಿಂದ ಸಂಶಯಗೊಂಡ ಯುವತಿ ಪ್ರಶ್ನಿಸಿದಾಗ, ನಕಲಿ ದಾಖಲೆಗಳನ್ನು ಮುಂದಿಟ್ಟಿದ್ದಾನೆ. ಆದರೆ ಆತನ ನಡವಳಿಕೆ ಬಗ್ಗೆ ಮತ್ತಷ್ಟು ಅನುಮಾನಗೊಂಡ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಇದರೊಂದಿಗೆ ಯುವತಿಗೆ ತನ್ನ ಪ್ರಿಯಕರನ ಅಸಲಿಯತ್ತು ಗೊತ್ತಾಗಿದೆ. ಇದೀಗ ಮೋಸ ಹೋದ ಯುವತಿಯ ಕುಟುಂಬ ನೀಡಿದ ದೂರಿನಂತೆ ಆವಡಿ ಪೊಲೀಸರು ರಯಾನ್ ಹಾಗೂ ಆತನ ತಾಯಿ ಸೆಲಿನಾರನ್ನು ವಶಕ್ಕೆ ಪಡೆದುಕೊಂಡಿದೆ.

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ

ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್​ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

(Crime News:To marry again, man creates a non existing twin brother story)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್