ಪಿಸ್ತೂಲ್ನಲ್ಲಿ ಆಟವಾಡುತ್ತಾ ಅಮ್ಮನಿಗೇ ಗುಂಡು ಹಾರಿಸಿದ ಮಗು; ವಿಡಿಯೋ ಕಾಲ್ನಲ್ಲಿದ್ದಾಗಲೇ ತಾಯಿ ಸಾವು!
Crime News Today | ವಿಡಿಯೋ ಕಾನ್ಫರೆನ್ಸ್ನಲ್ಲಿದ್ದ ತಾಯಿ ಆಫೀಸಿಗೆ ಸಂಬಂಧಿಸಿದ ಚರ್ಚೆಯಲ್ಲಿ ಬ್ಯುಸಿಯಾಗಿದ್ದಾಗ ಆಟವಾಡುತ್ತಿದ್ದ ಮಗುವಿನ ಕೈಗೆ ಪಿಸ್ತೂಲ್ ಸಿಕ್ಕಿದೆ. ಆ ಪಿಸ್ತೂಲ್ ಜೊತೆ ಆಟವಾಡುತ್ತಾ ಮಗು ಗುಂಡು ಹಾರಿಸಿದೆ.
ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಕಾಗುವುದಿಲ್ಲ. ಅಪಾಯಕಾರಿ ವಸ್ತುಗಳನ್ನು ಮಕ್ಕಳಿಂದ ದೂರ ಇಡುವುದು ಒಳ್ಳೆಯದು. ಇಲ್ಲದಿದ್ದರೆ ಕೊಂಚ ಯಾಮಾರಿದರೂ ಅಪಾಯ ಖಂಡಿತ. ತಾಯಿ ಆಫೀಸ್ ಕೆಲಸದ ನಿಮಿತ್ತ ಜೂಮ್ ವಿಡಿಯೋ ಕಾಲ್ ಮಾಡುತ್ತಿದ್ದಾಗ ಮಗುವಿನ ಬಗ್ಗೆ ಸ್ವಲ್ಪ ಗಮನ ಕೊಡದೇ ಇದ್ದುದಕ್ಕೆ ಆಕೆ ಪ್ರಾಣವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.
ಮೊಬೈಲ್ನಲ್ಲಿ ವಿಡಿಯೋ ಕಾಲ್ ಮಾಡುತ್ತಿದ್ದ ತಾಯಿ ಆಫೀಸಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಆಟವಾಡುತ್ತಿದ್ದ ಮಗುವಿನ ಕೈಗೆ ಬುಲೆಟ್ ತುಂಬಿದ್ದ ಪಿಸ್ತೂಲ್ ಸಿಕ್ಕಿದೆ. ಆ ಪಿಸ್ತೂಲ್ ಜೊತೆ ಆಟವಾಡುತ್ತಾ ಮಗು ಗುಂಡು ಹಾರಿಸಿದೆ. ಆ ಗುಂಡು ತಾಯಿಗೆ ತಾಗಿ, ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ತಮ್ಮ ಬಾಸ್ ಜೊತೆ ಜೂಮ್ ಕಾಲ್ನಲ್ಲಿದ್ದ ತಾಯಿ ಕೊಂಚ ನಿರ್ಲಕ್ಷ್ಯ ವಹಿಸಿದ್ದರಿಂದ ಈ ದುರಂತ ಸಂಭವಿಸಿದೆ.
ಜೂಮ್ ವಿಡಿಯೋ ಕಾಲ್ನಲ್ಲೇ ಇದ್ದ 21 ವರ್ಷದ ಮಹಿಳೆ ಇದ್ದಕ್ಕಿದ್ದಂತೆ ಜೋರಾಗಿ ಕಿರುಚಿ ಕೆಳಗೆ ಬಿದ್ದುದನ್ನು ಹಾಗೂ ಮಗುವಿನ ಕೈಯಲ್ಲಿ ಗನ್ ಇದ್ದುದನ್ನು ವಿಡಿಯೋ ಕಾಲ್ನಲ್ಲಿ ನೋಡಿದ ಆಕೆಯ ಆಫೀಸಿನ ಸಹೋದ್ಯೋಗಿಯೊಬ್ಬರು ಪೊಲೀಸ್ ತುರ್ತು ಸಹಾಯವಾಣಿಗೆ ಫೋನ್ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗುವ ಮೊದಲೇ ಆ ಮಹಿಳೆ ಸಾವನ್ನಪ್ಪಿದ್ದಾರೆ.
ಲೋಡ್ ಆಗಿದ್ದ ಗನ್ ಅನ್ನು ಟೀಪಾಯಿ ಮೇಲಿಟ್ಟಿದ್ದರಿಂದ ಅದನ್ನು ತೆಗೆದುಕೊಂಡು ಆಟವಾಡುತ್ತಿದ್ದ ಮಗು ಅಕಸ್ಮಾತ್ ಆಗಿ ಗುಂಡು ಹಾರಿಸಿದೆ. ಆ ಗನ್ ಆ ಮಗುವಿನ ತಂದೆಗೆ ಸೇರಿದ್ದಾಗಿದ್ದು, ಅವರು ಮನೆಯಲ್ಲಿ ಇಲ್ಲದಿದ್ದಾಗ ಈ ಘಟನೆ ನಡೆದಿದೆ. ಅವರನ್ನು ವಿಚಾರಣೆ ನಡೆಸಲಾಗುವುದು. ಗನ್ ಇಟ್ಟುಕೊಂಡವರು ಅದನ್ನು ಲಾಕ್ ಮಾಡಿಡುವುದು ಬಹಳ ಅಗತ್ಯ ಎಂದು ಪೊಲೀಸರು ತಿಳಿಸಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯಲ್ಲಿ ಮಗುವಿಗೆ ಯಾವುದೇ ಗಾಯಗಳಾಗಿಲ್ಲ.
ಇದನ್ನೂ ಓದಿ: Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್
(Shocking News: Child shoots and kills Mother during Zoom video call after Playing with gun in Florida)
Published On - 6:36 pm, Sat, 14 August 21