AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡದೊಡ್ಡ ಕಾರುಗಳಲ್ಲಿ ಓಡಾಡುತ್ತಿರುವವರಿಗೆ ಬುದ್ಧಿ ಕಲಿಸಬೇಕೆಂದು ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿಯಿಟ್ಟರು? 3 ಆರೋಪಿಗಳ ಬಂಧನ

MLA Sathish Reddy Car: ಆರೋಪಿಗಳು ಮೂವರು ಬಡವರಾಗಿದ್ದು, ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳನ್ನು ತಿರುಗುವುದನ್ನ ನೋಡಿ ಕೋಪಗೊಂಡಿದ್ದರು.

ದೊಡ್ಡದೊಡ್ಡ ಕಾರುಗಳಲ್ಲಿ ಓಡಾಡುತ್ತಿರುವವರಿಗೆ ಬುದ್ಧಿ ಕಲಿಸಬೇಕೆಂದು ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿಯಿಟ್ಟರು? 3 ಆರೋಪಿಗಳ ಬಂಧನ
ಸುಟ್ಟು ಕರಕಲಾದ ಶಾಸಕ ಸತೀಶ್ ರೆಡ್ಡಿ ಕಾರುಗಳು
TV9 Web
| Edited By: |

Updated on:Aug 13, 2021 | 10:26 PM

Share

ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. ಗಾರ್ವೆಬಾವಿಪಾಳ್ಯದ ಶಿವಕುಮಾರ, ಸಾಗರ್ ಮತ್ತು ನವೀನ್ ಎಂಬುವವರೇ ಬಂಧಿತರು. ಪೊಲೀಸರು ಬಂಧಿತರಿಂದ ಬಜಾಜ್ ಪ್ಲ್ಯಾಟಿನಾ ಬೈಕ್ ಕೆಎ 51, ಎಲ್ 4411 ಜಪ್ತಿ ಮಾಡಿದ್ದಾರೆ ಆರೋಪಿಗಳು. ಬಡವರು ಮತ್ತು ಶ್ರೀಮಂತರು ಎನ್ನುವ ಕಾರಣಕ್ಕೆ ಕೃತ್ಯವೆಸಗಿದ್ದರು ಎಂದು ಹೇಳಲಾಗಿದೆ. ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತ್ತಿದ್ದರು. ದೊಡ್ಡವರಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಸತೀಶ್ ರೆಡ್ಡಿ ಮನೆ ಆವರಣಕ್ಕೆ ನುಗ್ಗಿ ಕಾರಿಗೆ ಬೆಂಕಿ ಹಚ್ಚಿದ್ದರು ಎಂದು ಮೂಲಗಳು ತಿಳಿಸಿವೆ. ಆರೋಪಿಗಳು ಮೂವರು ಬಡವರಾಗಿದ್ದು, ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳನ್ನು ತಿರುಗುವುದನ್ನು ನೋಡಿ ಕೋಪಗೊಂಡಿದ್ದರು. ಇದೇ ಕಾರಣಕ್ಕೆ ದೊಡ್ಡವರಿಗೆ ಬುದ್ದಿ ಕಳಿಸಬೇಕು ಎಂಬ ಕಾರಣಕ್ಕೆ ಕಾರಿಗೆ ಬೆಂಕಿ ಇಟ್ಟಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಕುರಿತು ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಆಗಸ್ಟ್ 11ರ ಮಧ್ಯರಾತ್ರಿ ಆರೋಪಿಗಳು ಕೃತ್ಯವೆಸಗಿದ್ದರು. ಶಾಸಕರ ಮನೆ ಆವರಣದಲ್ಲಿದ್ದ 2 ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರು ತೆರಳಿದ್ದರು. ಸ್ಥಳ ಪರಿಶೀಲನೆ ಬಳಿಕ ಬೊಮ್ಮನಹಳ್ಳಿ ಠಾಣೆಯಲ್ಲಿ ಮೊಕದ್ದಮೆ ದಾಕಲಾಗಿತ್ತು. ಪ್ರಕರಣ ಸಂಬಂಧ 5 ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸಿಸಿಟಿವಿ ದೃಶ್ಯ ಮಾತ್ರ ಸಿಕ್ಕಿತ್ತು, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಸಂಜೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆಗ್ನೇಯ ಡಿಸಿಪಿ ಜೋಶಿ ನೇತೃತ್ವದಲ್ಲಿ ಆರೋಪಿಗಳ ಬಂಧಿಸಲಾಗಿದೆ. ಅರೋಪಿಗಳ ಪೈಕಿ ಸತೀಶ್ ರೆಡ್ಡಿ ಮನೆ ಕಾಂಪೌಂಡ್ ಒಳಗೆ ಬಂದು ಬೆಂಕಿ ಇಟ್ಟವನು ಒಬ್ಬ ಮಾತ್ರ, ಆತನೇ ಸಾಗರ್. ಉಳಿದ ಇಬ್ಬರು ಗೇಟ್ ಹೊರಗೆ ಇದ್ದಾರೆ. ಸಾಗರ್ ಎಂಬ ಬಂಧಿತ ಆರೋಪಿ ಮೂಲತಃ ನೇಪಾಳದವ, ಹುಟ್ಟಿಬೆಳೆದಿರೋದು ಬೆಂಗಳೂರಿನಲ್ಲಿ ಕಮಲ್ ಪಂತ್ ತಿಳಿಸಿದರು.

ಬೆಂಕಿ ಹಚ್ಚಿದ ಬಳಿಕ ಆರೋಪಿಗಳು ಬೈಕ್ ಕಳ್ಳತನ ಮಾಡಿದ್ದರು. ಬೈಕ್‌ ಜಾಡು ಹಿಡಿದು ಹೋದಾಗ ಆರೋಪಿಗಳ ಬಗ್ಗೆ ಸುಳಿವು ದೊರಕಿತ್ತು. ಮೊದಲು ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ. ಓರ್ವ ಆರೋಪಿ ಸತೀಶ್ ರೆಡ್ಡಿ ಭೇಟಿಯಾಗಲು ಯತ್ನಿಸಿದ್ದ. ಪ್ರಕರಣ ಪತ್ತೆ ಹಚ್ಚಿದ ಪೊಲೀಸರ ತಂಡಕ್ಕೆ ಅಭಿನಂದನೆ ಸಲ್ಲಿಸಿ ಪ್ರಕರಣ ಪತ್ತೆ ಹಚ್ಚಿದ ಪೊಲೀಸರಿಗೆ 1 ಲಕ್ಷ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಾಗರ್ ಸತೀಶ್ ರೆಡ್ಡಿ ನಿವಾಸಕ್ಕೆ ಕೆಲಸ ಕೇಳಿಕೊಂಡು ಬಂದಿದ್ದ. ಆದರೆ ಸತೀಶ್ ರೆಡ್ಡಿ ನಿವಾಸದ ಒಳಗೆ ಹೋಗಲು ಬಿಟ್ಟಿರಲಿಲ್ಲ. ಈ ವೇಳೆ ಕೊಪ ಮಾಡಿಕೊಂಡು ಗೆಳೆಯರು ಜೊತೆ ಹೇಳಿಕೊಂಡಿದ್ದ. ಮೂವರು ಸೇರಿ ಏನಾದರೂ ಮಾಡೋಣ ಎಂದು ತೀರ್ಮಾನ ಮಾಡಿದ್ದರು. ಸಾಗರ್ ಮನೆಯವರ ಜೊತೆ ಜಗಳ ಮಾಡಿಕೊಂಡಿದ್ದ. ಏನೂ ಕೆಲಸ ಇಲ್ಲದೆ ಅಪ್ಪ ಅಮ್ಮ ಆತನನ್ನು ಹೊರಗೆ ಹಾಕಿದ್ದರು. ರಸ್ತೆಬದಿಯಲ್ಲಿ ಮಲಗೋದು ಹಾಗೆ ಅಲೆಮಾರಿ ತರ ಇರ್ತಿದ್ದ. ಸಿಸಿಟಿವಿಯಲ್ಲಿ  ಸೆರೆಯಾಗಿರುವ ಪೈಕಿ ತಲೆಗೆ ಟೋಪಿ ಹಾಕಿಕೊಂಡಿದ್ದವನು ಸಾಗರ್ ಎಂದು  ಕಮಲ್ ಪಂತ್ ತಿಳಿಸಿದರು.

ಇದನ್ನೂ ಓದಿ: 

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಕೊಳ್ಳಿಯಿಟ್ಟವರು ಎರಡು ಗಂಟೆ ಕಾಲ ಅದೇ ಏರಿಯಾದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದರು!

ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ; ಸಿಸಿಟಿವಿ ದೃಶ್ಯದಲ್ಲಿ ಇದ್ದ ಓರ್ವ ಶಂಕಿತನನ್ನು ವಶಕ್ಕೆ ಪಡೆದ ಪೊಲೀಸರು

(MLA Sathish Reddy car fire incident Bengaluru Special police arrest 3 accused)

Published On - 9:15 pm, Fri, 13 August 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ