ಅಮ್ಮಾ ಕಾಪಾಡು!; ತಾಯಿಯ ಎದುರಲ್ಲೇ ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ, ವಿಷ ಕುಡಿಸಿ ಕೊಲೆ

Sonipat Gang Rape: | ಹರಿಯಾಣದ ಸೋನಿಪತ್​ನಲ್ಲಿ 11 ಮತ್ತು 15 ವರ್ಷದ ಬಾಲಕಿಯರ ಮೇಲೆ ತಾಯಿಯ ಕಣ್ಣೆದುರಲ್ಲೇ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿ, ವಿಷಯ ಕುಡಿಸಿ ಕೊಲೆ ಮಾಡಿದ್ದಾರೆ.

ಅಮ್ಮಾ ಕಾಪಾಡು!; ತಾಯಿಯ ಎದುರಲ್ಲೇ ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ, ವಿಷ ಕುಡಿಸಿ ಕೊಲೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 13, 2021 | 4:36 PM

ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಒಳ್ಳೆ ಉದ್ಯೋಗ ಸಿಕ್ಕಿದ ನಂತರ ಮದುವೆ ಮಾಡಬೇಕು ಎಂದೆಲ್ಲ ಯಾವ ತಂದೆ-ತಾಯಿಗೆ ಆಸೆ ಇರುವುದಿಲ್ಲ? ಗಂಡನನ್ನು ಕಳೆದುಕೊಂಡಿದ್ದ ಆ ಮಹಿಳೆಗೂ ಅದೇ ರೀತಿಯ ಆಸೆಯಿತ್ತು. ತನ್ನ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳ ಬಗ್ಗೆ ಏನೇನೋ ಕನಸು ಕಟ್ಟಿಕೊಂಡಿದ್ದ ಆಕೆಗೆ ಆ ರಾತ್ರಿ ಕರಾಳ ದಿನವಾಗಿತ್ತು. ರೂಮಿನಲ್ಲಿ ಮಲಗಿದ್ದ ಆ ಮಹಿಳೆಯ 11 ಮತ್ತು 15 ವರ್ಷದ ಹೆಣ್ಣುಮಕ್ಕಳು ರಾತ್ರಿ ಜೋರಾಗಿ ಕಿರುಚಿಕೊಂಡ ಸದ್ದಾಯಿತು. ಅವರ ರೂಮಿನ ಬಳಿ ಓಡಿಹೋಗಿ ನೋಡಿದರೆ ಒಳಗಿನಿಂದ ಲಾಕ್ ಆಗಿತ್ತು. ಕಿಟಕಿಯ ಬಳಿ ಹೋದ ಮಹಿಳೆ ಆ ರೂಮಿನೊಳಗೆ ಪಕ್ಕದ ಮನೆಯ ನಾಲ್ವರು ತನ್ನಿಬ್ಬರು ಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಿರುವುದನ್ನು ನೋಡಿ ಕಂಗಾಲಾದಳು. ಅಮ್ಮಾ ಬಾರಮ್ಮ ಎಂದು ಆ ಇಬ್ಬರು ಬಾಲಕಿಯರು ಕಿರುಚಾಡುತ್ತಿದ್ದರೂ ಆಕೆ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅತ್ಯಾಚಾರ ನಡೆಸಿದ ಬಳಿಕ ಸುಮ್ಮನಾಗದ ಆ ನೀಚರು ಇಬ್ಬರು ಬಾಲಕಿಯರಿಗೂ ವಿಷ ಕುಡಿಸಿ ಪರಾರಿಯಾಗಿದ್ದಾರೆ. ಆ ಇಬ್ಬರು ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ.

ಉತ್ತರ ಭಾರತದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಹರಿಯಾಣದ ಸೋನಿಪತ್​ನಲ್ಲಿ ಈ ಘಟನೆ ನಡೆದಿದ್ದು, ಹಳ್ಳಿಯೊಂದರಲ್ಲಿ ವಾಸವಾಗಿದ್ದ ಈ ಕುಟುಂಬದ ಮನೆಯ ಸ್ವಲ್ಪ ದೂರದಲ್ಲೇ ಬಿಹಾರ ಮೂಲದ ನಾಲ್ವರು ಯುವಕರು ವಾಸಿಸುತ್ತಿದ್ದರು. ಕೂಲಿ ಕಾರ್ಮಿಕರಾಗಿದ್ದ ಅವರು ಆಗಾಗ ಮನೆಗೆ ಬಂದು ಅಡುಗೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಅವರಿಂದಲೇ ತನ್ನ ಮಕ್ಕಳು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂಬ ಸುಳಿವು ಕೂಡ ಆ ಮಹಿಳೆಗೆ ಇರಲಿಲ್ಲ.

ನಾಲ್ವರಿಂದ ಅತ್ಯಾಚಾರಕ್ಕೊಳಗಾದ 11 ಹಾಗೂ 15 ವರ್ಷದ ಮಕ್ಕಳಿಬ್ಬರನ್ನೂ ಆಸ್ಪತ್ರೆಗೆ ಸೇರಿಸಿದಾಗ ಆಸ್ಪತ್ರೆಯವರೇ ಪೊಲೀಸರಿಗೆ ವಿಷಯ ತಿಳಿಸಿದ್ದರು. ಆಗ ಅವರು ವಿಚಾರಣೆ ನಡೆಸಿದಾಗ ಹಾವು ಕಚ್ಚಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆಕೆ ಹೇಳಿದ್ದರು.

ಆದರೆ, ವೈದ್ಯರು ಆ ಮಕ್ಕಳ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿದಾಗ ಪೊಲೀಸರು ಆ ತಾಯಿಯನ್ನು ಕರೆದು ವಿಚಾರಣೆ ನಡೆಸಿದರು. ಆಗ ಬಿಹಾರ ಮೂಲದ ನಾಲ್ವರು ಇದಕ್ಕೆಲ್ಲ ಕಾರಣ ಎಂಬುದು ಗೊತ್ತಾಯಿತು. ಆ ನಾಲ್ವರನ್ನೂ ಈಗ ಪೊಲೀಸರು ಬಂಧಿಸಿದ್ದಾರೆ. ನನ್ನ ಕಣ್ಣೆದುರಲ್ಲೇ ಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಿದ್ದರೂ ನನಗೆ ಅವರನ್ನು ಕಾಪಾಡಿಕೊಳ್ಳಲು ಆಗಲಿಲ್ಲ. ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ಹೆದರಿಸಿದ ಆ ನಾಲ್ವರು ಮನೆಯಲ್ಲಿದ್ದ ಕೀಟನಾಶಕವನ್ನು ನನ್ನಿಬ್ಬರು ಮಕ್ಕಳಿಗೆ ಕುಡಿಸಿ ಓಡಿಹೋದರು. ಇದೀಗ ನನ್ನ ಇಬ್ಬರು ಗಂಡುಮಕ್ಕಳ ಪ್ರಾಣಕ್ಕೂ ಏನಾದರೂ ಅಪಾಯವಾಗಬಹುದು ಎಂಬ ಆತಂಕ ಕಾಡುತ್ತಿದೆ ಎಂದು 35 ವರ್ಷದ ಮಹಿಳೆ ಹೇಳಿಕೊಂಡಿದ್ದಾರೆ.

ಈ ವಿಷಯವನ್ನು ಯಾರಿಗೂ ಹೇಳಬಾರದು, ಹೇಳಿದರೆ ನಿನ್ನ ಗಂಡುಮಕ್ಕಳ ಪ್ರಾಣವನ್ನೂ ತೆಗೆಯುತ್ತೇವೆ ಎಂದು ಅತ್ಯಾಚಾರಿಗಳು ಬೆದರಿಕೆ ಹಾಕಿದ್ದರಿಂದ ಆಕೆ ಹಾವು ಕಚ್ಚಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ಹೇಳಿಕೆ ದಾಖಲಿಸಿದ್ದರು. ಬಳಿಕ ವಿಚಾರಣೆ ವೇಳೆ ಸಾಮೂಹಿಕ ಅತ್ಯಾಚಾರದ ವಿಷಯ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: Rape Case: ಸಂತ್ರಸ್ತೆಯೇ ಮುಂದೆ ಬಂದರೂ ಅತ್ಯಾಚಾರಿ ಜೊತೆ ಮದುವೆಗೆ ಒಪ್ಪಿಗೆ ನೀಡದ ಸುಪ್ರೀಂ ಕೋರ್ಟ್

Murder: ಇದು ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಕತೆ!; ಸೇಡಿಗಾಗಿ ಹನಿಮೂನ್​ನಲ್ಲೇ ಹೆಂಡತಿಯನ್ನು ಕೊಂದ ಗಂಡ

(Two Minor Sisters Gang raped and Murdered in front of Mother in Haryana Sonipat)