30ಕ್ಕೂ ಹೆಚ್ಚು ಬೀದಿನಾಯಿಗಳನ್ನು ಅತ್ಯಾಚಾರ ಮಾಡಿದ್ದ 68ರ ವೃದ್ಧ ಅರೆಸ್ಟ್​; ‘ಅವು ಯಾವುದೇ ಪ್ರತಿರೋಧ ತೋರುತ್ತಿರಲಿಲ್ಲ’ ಎಂಬ ಸಮರ್ಥನೆ ಬೇರೆ !

ವೃದ್ಧನ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು #Sorrysheru ನಡಿ ನಾಯಿಗಳ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

30ಕ್ಕೂ ಹೆಚ್ಚು ಬೀದಿನಾಯಿಗಳನ್ನು ಅತ್ಯಾಚಾರ ಮಾಡಿದ್ದ 68ರ ವೃದ್ಧ ಅರೆಸ್ಟ್​; ‘ಅವು ಯಾವುದೇ ಪ್ರತಿರೋಧ ತೋರುತ್ತಿರಲಿಲ್ಲ’ ಎಂಬ ಸಮರ್ಥನೆ ಬೇರೆ !
ಆರೋಪಿ ಅಹ್ಮದ್​ ಶಾಹಿ
Follow us
Lakshmi Hegde
|

Updated on:Mar 15, 2021 | 6:32 PM

ಮುಂಬೈ: ಈ 68ವರ್ಷದ ವೃದ್ಧ ಅದೆಂಥಾ ವಿಕೃತ ಕಾಮಿ..30ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಅತ್ಯಾಚಾರ ಮಾಡಿ ಇದೀಗ ಪೊಲೀಸರಿಂದ ಬಂಧಿತನಾಗಿದ್ದಾನೆ. ಸೋಷಿಯಲ್​ ಮೀಡಿಯಾದಲ್ಲಂತೂ ಕಾಮುಕ ವೃದ್ಧನಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ. ವೃದ್ಧನ ಹೆಸರು ಅಹ್ಮದ್​ ಶಾಹಿ. ಮುಂಬೈನ ಅಂಧೇರಿಯ ಜುಹು ಗಲ್ಲಿಯ ನಿವಾಸಿಯಾಗುವ ಈತ ತರಕಾರಿ ವ್ಯಾಪಾರಿ. ಎಡಗೈ ಇಲ್ಲದ ಅಂಗವಿಕಲ. ರಾತ್ರಿ 3 ರಿಂದ 4 ಗಂಟೆಯ ವೇಳೆಯಲ್ಲಿ ಬೀದಿ ನಾಯಿಗಳಿಗೆ ತಿಂಡಿಯ ಆಸೆ ತೋರಿಸಿ, ಹತ್ತಿರ ಕರೆದು ಬಳಿಕ ರೇಪ್​ ಮಾಡುತ್ತಿದ್ದ ಎಂದು ಡಿಎನ್​ ನಗರ ಪೊಲೀಸರು ತಿಳಿಸಿದ್ದಾರೆ.

ಬಾಂಬೆ ಪ್ರಾಣಿ ಹಕ್ಕು ರಕ್ಷಣಾ ಎನ್​ಜಿಒದ ವಿಜಯ್​ ಮೋಹ್ನಾನಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಹ್ಮದ್​ ಶಾ ಹೆಣ್ಣುನಾಯಿಯೊಂದನ್ನು ರೇಪ್​ ಮಾಡುತ್ತಿರುವ ವಿಡಿಯೋವೊಂದನ್ನು ವಿಜಯ್​ ಪೊಲೀಸರಿಗೆ ನೀಡಿದ್ದಾರೆ. ಅಹ್ಮದ್​ ಶಾಹಿ ನಾಯಿಗಳಿಗೆ ಲೈಂಗಿಕ ಹಿಂಸೆ ನೀಡುತ್ತಿದ್ದುದನ್ನು ಕೆಲವರು ಸ್ಥಳೀಯರು ನೋಡಿ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ ಆತ ಕೇಳುತ್ತಿರಲಿಲ್ಲ. ಮತ್ತೆಮತ್ತೆ ಅದೇ ಹೊಲಸು ಕೆಲಸ ಮಾಡುತ್ತಿದ್ದ ಎಂದೂ ವಿಜಯ್​ ಮೋಹ್ನಾನಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಮೋಹ್ನಾನಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ವೃದ್ಧ ಜುಹು ಗಲ್ಲಿಯಲ್ಲಿ ವಾಸವಾಗಿದ್ದ. ಅಲ್ಲಿನವರೇ ಆದ ಅಸ್ಲಾಂ ಶೇಖ್​ ಎಂಬುವರು ಒಂದು ದಿನ ನನಗೆ ಕರೆ ಮಾಡಿ, ಅಹ್ಮದ್​ ಶಾಹಿ ಕೃತ್ಯದ ಬಗ್ಗೆ ತಿಳಿಸಿದರು. ಆತ ಪ್ರತಿದಿನವೂ ಬೀದಿ ನಾಯಿಗಳನ್ನು ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಹೇಳಿದರು. ಅದಕ್ಕೆ ನಾನು ಸಾಕ್ಷಿ ಕೇಳಿದೆ.. ಆಗ 2020ರ ಡಿಸೆಂಬರ್​ನಲ್ಲಿ ಚಿತ್ರೀಕರಿಸಲಾಗಿದ್ದ ವಿಡಿಯೋವೊಂದನ್ನು ನನಗೆ ಕಳಿಸಿದರು. ಅದನ್ನು ನೋಡಿ ನನಗೆ ತುಂಬ ಶಾಕ್​ ಆಯಿತು. ಕೂಡಲೇ ಡಿಎನ್​ ನಗರ ಪೊಲೀಸ್​ ಠಾಣೆಗೆ ತೆರಳಿ ದೂರು ಕೊಟ್ಟೆ. ವಿಡಿಯೋವನ್ನೂ ನೀಡಿದೆ ಎಂದು ತಿಳಿಸಿದ್ದಾರೆ.

ಶಾಹಿ ವಿಚಾರಣೆ ವೇಳೆ ತಾನು 30-40 ನಾಯಿಗಳನ್ನು ರೇಪ್​ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ತಿಂಡಿ, ಮಾಂಸದ ಆಸೆ ತೋರಿಸಿ ಹತ್ತಿರ ಕರೆಯುತ್ತಿದ್ದೆ. ನಾನು ರೇಪ್​ ಮಾಡುತ್ತಿದ್ದರೂ ನಾಯಿಗಳು ಪ್ರತಿರೋಧ ಒಡ್ಡುತ್ತಿರಲಿಲ್ಲ. ಹಾಗಾಗಿ ಅಪರಾಧ ಎನ್ನಿಸಲಿಲ್ಲ ಎಂದೂ ಹೇಳಿದ್ದಾನೆ. ಇದೊಂದು ಭೀಕರ, ಅಮಾನವೀಯ ಕೃತ್ಯ. ಜುಹು ಗಲ್ಲಿಯಲ್ಲಿರುವ ಎಲ್ಲ ಹೆಣ್ಣು ನಾಯಿಗಳ ಆರೋಗ್ಯವನ್ನೂ ನಮ್ಮ ಎನ್​ಜಿಒದಿಂದ ತಪಾಸಣೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಅತ್ಯಾಚಾರಕ್ಕೆ ಒಳಗಾದ ನಾಯಿಗಳ ಪಟ್ಟಿಯನ್ನು ನೀಡುತ್ತೇವೆ ಎಂದು ಮೊಹ್ನಾನಿ ಹೇಳಿದ್ದಾರೆ. ಡಿಎನ್​ ನಗರ ಠಾಣೆ ಹಿರಿಯ ಪೊಲೀಸ್​ ಅಧಿಕಾರಿ ಭರತ್ ಗಾಯಕ್​ವಾಡ್​ ಪ್ರತಿಕ್ರಿಯೆ ನೀಡಿ, ಶಾಹಿಯನ್ನು ಆತನ ಮನೆಯಿಂದಲೇ ಬಂಧಿಸಲಾಗಿದೆ. ವಿಡಿಯೋ ಚಿತ್ರೀಕರಣ ಆದ ದಿನಾಂಕ ಗೊತ್ತಿಲ್ಲ. ನಾವು ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಟ್ವಿಟರ್​​ನಲ್ಲಿ ಟ್ರೆಂಡ್ ಆದ SorrySheru ವೃದ್ಧನ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು #Sorrysheru ನಡಿ ನಾಯಿಗಳ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆಯಿಂದಲೂ Sorry Sheru ಟ್ವಿಟರ್​​ನಲ್ಲಿ ಟ್ರೆಂಡ್ ಆಗುತ್ತಿದೆ. ಕಾಮುಕ ಶಾಹಿಯನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.ವೃದ್ಧನ ವಿರುದ್ಧ ಪೇಟಾ ಇಂಡಿಯಾ (Peta India) ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸುತ್ತಾರೆ.

Published On - 6:31 pm, Mon, 15 March 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ