Crime News: 70ರ ವೃದ್ಧನಿಗೆ ಬಂದೂಕು ತೋರಿಸಿ, 1 ಲಕ್ಷ ರೂ, ಹಣವನ್ನು ಕಸಿದುಕೊಂಡು ಪರಾರಿಯಾದ ದರೋಡೆಕೋರರು

ದೆಹಲಿಯ ಹರ್ಷ್ ವಿಹಾರ್ ಪ್ರದೇಶದಲ್ಲಿ 70 ವರ್ಷ ವಯಸ್ಸಿನ ಅಂಗಡಿ ಮಾಲೀಕನ ಕೈಯಿಂದ 1 ಲಕ್ಷ ರೂ. ಹಣವನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Crime News: 70ರ ವೃದ್ಧನಿಗೆ ಬಂದೂಕು ತೋರಿಸಿ, 1 ಲಕ್ಷ ರೂ, ಹಣವನ್ನು ಕಸಿದುಕೊಂಡು ಪರಾರಿಯಾದ ದರೋಡೆಕೋರರು
Crime Scene
Image Credit source: Times Of India

Updated on: Jun 27, 2023 | 5:43 PM

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ನಡೆದ ಭಯಾನಕ ಘಟನೆಯೊಂದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಸೋಮವಾರ ರಾತ್ರಿ ದೆಹಲಿಯ ಹರ್ಷ್ ವಿಹಾರ್ ಪ್ರದೇಶದಲ್ಲಿ 70 ವರ್ಷ ವಯಸ್ಸಿನ ಅಂಗಡಿ ಮಾಲೀಕನ ಕೈಯಿಂದ 1 ಲಕ್ಷ ರೂ. ಹಣವನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯು ಆ ವ್ಯಕ್ತಿ ಅಂಗಡಿಯ ಮುಂದೆನೇ ನಡೆದಿದೆ ಎಂದು ಹೇಳಿದೆ.

ಪೊಲೀಸರ ಪ್ರಕಾರ, ಸಂಸಾರ್ ಸಿಂಗ್ ರಾತ್ರಿ 9 ಗಂಟೆ ಸುಮಾರಿಗೆ ತನ್ನ ಅಂಗಡಿಯನ್ನು ಬಂದ್​​ ಮಾಡಿ ಮೋಟಾರ್‌ ಸೈಕಲ್‌ನಲ್ಲಿ ಹೋಗುವ ಹೊತ್ತಿಗೆ, ಇಬ್ಬರು ವ್ಯಕ್ತಿಗಳು ಅವರ ಬಳಿಗೆ ಬಂದು, ಅವರ ಕೈಯಲ್ಲಿದ್ದ ಹಣ ಬ್ಯಾಗನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ, ಆದರೆ ಸಂಸಾರ್ ಸಿಂಗ್ ಆ ಕಳ್ಳರ ಜತೆಗೆ ಹೋರಾಡಿದ್ದಾರೆ. ಆದರೆ ದರೋಡೆಕೋರರು ಬಂದೂಕನ್ನು ತೋರಿಸಿ ಸಂಸಾರ್ ಸಿಂಗ್​​ಗೆ ಬೆದರಿಕೆ ಹಾಕಿದ್ದಾರೆ. ಈ ಸಮಯದಲ್ಲಿ ಪ್ರಾಣ ಉಳಿಸಿಕೊಂಡರೆ ಸಾಕು ಎಂದು ಹಣವನ್ನು ಆ ದರೋಡೆಕೋರರಿಗೆ ನೀಡಿದ್ದಾರೆ, ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Bengal Crime: ಮಹಿಳೆ ಕಾಣೆಯಾಗಿ 3 ವರ್ಷಗಳ ಬಳಿಕ ಸೆಪ್ಟಿಕ್ ಟ್ಯಾಂಕ್​ನಲ್ಲಿ ಪತ್ತೆಯಾಯ್ತು ಅಸ್ಥಿಪಂಜರ

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us