ಹೈದರಾಬಾದ್: ಅಂತರ್ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಹೈದ್ರಾಬಾದ್ನ ಶಾಹಿನಾತ್ಗುಂಜ್ನ ಬೇಗಂ ಬಜಾರ್ನಲ್ಲಿ ನಡೆದಿದೆ. ಬೇಗಂ ಬಜಾರ್ನ ನಿವಾಸಿ ನಿರಜ್ ಪನ್ವಾರ್ (24) ಕೊಲೆಯಾದ ದುರ್ದೈವಿ. ನಿರಜ್ ಪನ್ವಾರ್ನನ್ನು ತಂದೆಯ ಮುಂದೆ ಸರ್ವಾಜನಿಕ ಸ್ಥಳದಲ್ಲಿ ದುಷ್ಕರ್ಮಿಕಗಳು ಭೀಕರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿಂದೆ ನನಗೆ ಜೀವಬೇದರಿಕೆ ಇದೆ ಎಂದು ನಿರಜ್ ದೂರು ನೀಡಿದ್ದನು. ಸಂಜನ ಎಂಬುವ ಅಂತರ್ ಜಾತಿಯ ಯುವತಿಯನ್ನು ಮದುವೆ ಆಗಿದ್ದನು.
ಇದನ್ನು ಓದಿ: ಧಾರಾಕಾರ ಮಳೆ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
ಮಂಡ್ಯದ ನುರುಗಲು ಗ್ರಾಮದ ಮಿಸ್ಸಿಂಗ್ ಕೇಸ್, ನಾಪತ್ತೆಯಾದ ವ್ಯಕ್ತಿ ಇಂದು ಶವವಾಗಿ ಪತ್ತೆ
ಮಂಡ್ಯ: ಮಂಡ್ಯ (Mandya) ಜಿಲ್ಲೆ ನಾಗಮಂಗಲ (Nagmangal) ತಾಲೂಕು ನರಗಲು ಗ್ರಾಮದ ನಿವಾಸಿ ಮೋಹನ್ ನಾಪತ್ತೆ ಪ್ರಕರಣ ತೀರುವು ಪಡೆದುಕೊಂಡಿದೆ. ಭಾನುವಾರ ಮದ್ಯಾಹ್ನ ಜಮೀನಿಗೆ ಹೋಗಿದ್ದ ಮೋಹನ್ ನಾಪತ್ತೆಯಾಗಿದ್ದನು. ಇಂದು ಹಾಸನದ ಹೊಳೆನರಸಿಪುರದ ಬಂಟರ ತಾಲಾಳು ಬಳಿ ಮೋಹನ್ ಶವ ಪತ್ತೆಯಾಗಿದೆ. ಮೋಹನ್ ಕಾಣೆಯಾದ ಕುರಿತು ಕುಟುಂಬಸ್ಥರು ಬಿಂಡಗನವಿಲೆ ಪೊಲೀಸ್ (Police) ಠಾಣೆಯಲ್ಲಿ ದೂರು ನೀಡಿದ್ದರು. ಮೋಹನ್ ಬೈಕ್ ನ ಯಾರೋ ದುಷ್ಕರ್ಮಿಗಳು ತಳ್ಳಿ ಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನ ಕುಟುಂಬಸ್ಥರು ಬಿಂಡಗನವಿಲೆ ಪೊಲೀಸರಿಗೆ ನೀಡಿದ್ದರು.
ಕುಟುಂಸ್ಥರು ಕಿಡ್ನ್ಯಾಪ್ ಅಂತ ದೂರು ನೀಡಿದರೂ ನಾಪತ್ತೆ ಪ್ರಕರಣ ಅಂತ ಬಿಂಡಗನವಿಲೆ ಠಾಣೆಯ ಪಿಎಸ್ಐ ರಿಜಿಸ್ಟರ್ ಮಾಡ್ಕೊಂಡಿದ್ದರು. ಆರೋಪಿ ಕುಮಾರ್ ನ ಮೇಲೆ ಮೋಹನ್ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರೂ, ಪೊಲೀಸರು ನಿರ್ಲಕ್ಷ ವಹಸಿದ್ದಾರೆ. ಕುಮಾರ್ನ ಬೆನ್ನಿಗೆ ನಿಂತು ಪಿಎಸ್ಐ ಸಹಕರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಪೊಲೀಸ್ ಇಲಾಖೆಯ ಮೇಲೆ ಗ್ರಾಮಸ್ಥರ ಕೂಡ ಗಂಭೀರ ಆರೋಪ ಮಾಡುತ್ತಿದ್ದಾರೆ.
ಇದನ್ನು ಓದಿ: ಬೆತ್ತಲಾಗಿ ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್ ಮೇಲೆ ನಡೆದ ಯುವತಿ; ಮುಜುಗರ ತಂದ ಘಟನೆ
ಸದ್ಯ ಮೃತ ದೇಹ ಮೇಲೆತ್ತಿರುವ ಪೊಲೀಸರು ಮೃತ ದೇಹ ಮೋಹನನದ್ದೆ ಎಂದು ಕುಟುಂಬಸ್ಥರು ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಕುಮಾರ್ ಸೇರಿದಂತೆ ಮೂವರು ಆರೋಪಿಗಳು ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 7:10 pm, Sat, 21 May 22