ಗೋವಾದ ಮಾಪ್ಸಾ ಬಳಿ ಭೀಕರ ಕಾರು ಅಪಘಾತ: ಬೆಳಗಾವಿಯ ಮೂವರು ಯುವಕರ ದುರ್ಮರಣ

ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ನಗರದ ಟಿ.ಜಿ.ಟ್ಯಾಂಕ್ ರಸ್ತೆಯಲ್ಲಿ ನಡೆದಿದೆ. ಆಂಧ್ರ ಮೂಲದ ಮಮತಾ(30) ಕೊಲೆಯಾದ ಮಹಿಳೆ.

ಗೋವಾದ ಮಾಪ್ಸಾ ಬಳಿ ಭೀಕರ ಕಾರು ಅಪಘಾತ: ಬೆಳಗಾವಿಯ ಮೂವರು ಯುವಕರ ದುರ್ಮರಣ
ಅಪಘಾತಕ್ಕೀಡಾದ ಕಾರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 22, 2022 | 12:22 PM

ಬೆಳಗಾವಿ: ಗೋವಾದ ಮಾಪ್ಸಾ ಬಳಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಬೆಳಗಾವಿಯ ಮೂವರು ಯುವಕರ ದುರ್ಮರಣ ಹೊಂದಿದ್ದಾರೆ. ಮಾಪ್ಸಾ ಜಿಲ್ಲೆಯ ಕುಛೇಲಿ ಬಳಿ ಇಂದು ಬೆಳಗ್ಗೆ ಅಪಾಘಾತ ನಡೆದಿದೆ. ನಾಯರ್ ಅನಗೋಲ್ಕರ್ (28), ರೋಹನ್ ಗದಗ (26), ಸನ್ನಿ ಅವನೇಕರ್ (31) ಮೃತ ಯುವಕರು. ಮತ್ತೋರ್ವ ಯುವಕ ವಿಶಾಲ್ ಕರಜೇಕರ್‌ಗೆ ಗಂಭೀರ ಗಾಯವಾಗಿದೆ. ಗಾಯಾಲು ವಿಶಾಲ್‌ನನ್ನು ಗೋವಾದ ಜೆಎಂಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕಾಲುವೆಗೆ ಬಿದ್ದು ಬಾಲಕ ಸಾವು:

ಕಾರವಾರ: ಮನೆಯ ಹಿಂಬದಿಯ ಕಾಲುವೆಗೆ ಬಿದ್ದು ಬಾಲಕ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪಡುಶಿರಾಲಿಯಲ್ಲಿ ನಡೆದಿದೆ. ವಿಜೇತ ಗಣಪತಿ ನಾಯಕ್ (4) ಸಾವನ್ನಪ್ಪಿದ ಬಾಲಕ. ನಿನ್ನೆ ತಮ್ಮ ಮನೆ ಹಿಂಬದಿಯ ಹಿತ್ತಲದಲ್ಲಿ ಆಟವಾಡುತ್ತಿದ್ದಾಗ ಕಾಲುವೆಗೆ ಬಾಲಕ ಬಿದ್ದಿದ್ದಾನೆ. ಕಾಲುವೆಗೆ ಬಿದ್ದು ತೀವ್ರ ನೀರು ಕುಡಿದು ಅಸ್ತವ್ಯಸ್ತತವಾಗಿದ್ದ ಬಾಲಕ, ಶಿರಾಲಿ ಪ್ರಾಥಮಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Trending: 80ರ ವರ್ಷದಲ್ಲಿ ಡೆಡ್‌ಲಿಫ್ಟ್‌ ಮಾಡುತ್ತಿರುವ ಅಜ್ಜಿಯ ವಿಡಿಯೋ ವೈರಲ್

ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ನಗರದ ಟಿ.ಜಿ.ಟ್ಯಾಂಕ್ ರಸ್ತೆಯಲ್ಲಿ ನಡೆದಿದೆ. ಆಂಧ್ರ ಮೂಲದ ಮಮತಾ(30) ಕೊಲೆಯಾದ ಮಹಿಳೆ. ಮಮತಾ ಪತಿ ಅರವಿಂದನನ್ನು ವಶಕ್ಕೆ ಪಡೆದಿರುವ ಪೊಲೀಸರು, ಸ್ಥಳಕ್ಕೆ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಫಲ್ಟಿ

ಚಿಕ್ಕಬಳ್ಳಾಪುರ: ನಡುರಸ್ತೆಯಲ್ಲಿದ್ದ ನಾಗರಹಾವು ತಪ್ಪಿಸಲು ಹೋಗಿ ಟಿಪ್ಪರ್ ಫಲ್ಟಿಯಾದಂತಹ ಭೀಕರ ಘಟನೆ ತಾಲೂಕಿನ ಅಗಲಗುರ್ಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಟಿಪ್ಪರ್ ಚಕ್ರಕ್ಕೆ ಸಿಲುಕಿ ನಡುರಸ್ತೆಯಲ್ಲಿ ನಾಗರಹಾವು ವಿಲ ವಿಲ ಒದ್ದಾಡಿದೆ. ಟಿಪ್ಪರ್ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾನೆ. ಎಸ್.ಆರ್.ಸಿ ಇನ್ ಪ್ರಾಸ್ಟ್ರಕ್ಚರ್ ಸಂಸ್ಥೆಗೆ ಸೇರಿದ ಟಿಪ್ಪರಾಗಿದ್ದು, ಜಲ್ಲಿ ಕಲ್ಲು ಸಾಗಿಸಲಾಗುತ್ತಿತ್ತು. ನಡುರಸ್ತೆಯಲ್ಲಿ ಚಲ್ಲಿ ಕಲ್ಲು ಬಿದ್ದು ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ಥ ಉಂಟಾಗಿತ್ತು. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಗೆಳೆಯರ ಗಲಾಟೆ ಕೊಲೆಯಲ್ಲಿ ಅಂತ್ಯ ಕೇಸ್: ಆರೋಪಿ ಬಂಧನ

ಚಿತ್ರದುರ್ಗ: ಗೆಳೆಯರ ಗಲಾಟೆ ಕೊಲೆಯಲ್ಲಿ ಅಂತ್ಯ ಕೇಸ್​ಗೆ ಸಂಬಂಧ ಆರೋಪಿ ಖಾದರ್ ಭಾಷಾನನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಕಾಮನಬಾವಿ ಬಡಾವಣೆಯಲ್ಲಿ ನಿನ್ನೆ ಘಟನೆ ನಡೆದಿತ್ತು. ಕಾರ್ಮಿಕ ಮಹ್ಮದ್ ಅಲಿ(30)ಗೆ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ಕೂಲಿ ಹಣದ ವಿಚಾರಕ್ಕೆ ಗೆಳೆಯರ ಮದ್ಯೆ ಗಲಾಟೆ ನಡೆದಿತ್ತು. ಮಹ್ಮದ್ ಅಲಿ, ಖಾದರ್ ಭಾಷಾ 20ವರ್ಷದ ಸ್ನೇಹಿತರಾಗಿದ್ದರು. ಇಬ್ಬರೂ ಸೇರಿ ಗಾರೆ ಕೆಲಸ ಮಾಡುತ್ತಿದ್ದರು. ಖಾದರ್ ಭಾಷಾಗೆ ಸಾವಿರ‌ ರೂ. ಕೇಳಿದ್ದಕ್ಕೆ ಗಲಾಟೆ ನಡೆದಿತ್ತು. ಖಾದರ್ ಭಾಷಾ ಇಟ್ಟಿಗೆಯಿಂದ ಹೊಡೆದು ಮಹ್ಮದ್ ಅಲಿಯ ಹತ್ಯೆ ಮಾಡಿದ್ದನು. ಹತ್ಯೆ ಬಳಿಕ ಆರೋಪಿ ಖಾದರ್ ಭಾಷಾ ಪರಾರಿ ಆಗಿದ್ದ. ನಗರ ಠಾಣೆ ಪೊಲೀಸರಿಂದ ಆರೋಪಿಯ ಬಂಧನ ಮಾಡಲಾಗಿದೆ.

ಈಜಾಡಲು ತೆರಳಿದ್ದ ಬಾಲಕ ಶವವಾಗಿ ಪತ್ತೆ

ಆನೇಕಲ್: ಈಜಾಡಲು ತೆರಳಿದ್ದ ಬಾಲಕ ಶವವಾಗಿ ಪತ್ತೆಯಾಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ನೆರಳೂರಿನಲ್ಲಿ ನಡೆದಿದೆ. ಅಜಯ್ (14) ಮೃತಪಟ್ಟ ಬಾಲಕ. ನೆರಳೂರಿನ ಕೃಷಿ ಹೊಂಡಾದಲ್ಲಿ ಮುಳುಗಿ ಮೃತನಾಗಿದ್ದು, ಮೂರು ದಿನಗಳ ಹಿಂದೆ ಮನೆ ಬಿಟ್ಟು ತೆರಳಿದ್ದ. ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.  ಮೂರು ದಿನಗಳ ಬಳಿಕ ಅಜಯ್ ಶವ ತೇಲಿ ಬಂದಿದೆ. ರಾಮಚಂದ್ರ ರೆಡ್ಡಿ ಎಂಬುವವರಿಗೆ ಕೃಷಿ ಹೊಂಡಾ ಸೇರಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.