ಬ್ರಿಗೇಡ್​ ರೋಡ್ ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಯುವಕ ಯುವತಿ ಬಿದ್ದ ಪ್ರಕರಣ: ನಾವಿಬ್ಬರೂ ಲವರ್ಸ್ ಎಂದು ಬದುಕುಳಿದ ಯುವಕ ಹೇಳಿದ್ದೇ ಬೇರೆ, ಏನದು?

ಬ್ರಿಗೇಡ್​ ರೋಡ್ ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಯುವಕ ಯುವತಿ ಬಿದ್ದ ಪ್ರಕರಣ: ನಾವಿಬ್ಬರೂ ಲವರ್ಸ್ ಎಂದು ಬದುಕುಳಿದ ಯುವಕ ಹೇಳಿದ್ದೇ ಬೇರೆ, ಏನದು?
ಬ್ರಿಗೇಡ್​ ರೋಡ್ ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಯುವಕ ಯುವತಿ ಬಿದ್ದ ಪ್ರಕರಣ: ನಾವಿಬ್ಬರೂ ಲವರ್ಸ್ ಎಂದು ಬದುಕುಳಿದ ಯುವಕ ಹೇಳಿದ್ದೇ ಬೇರೆ, ಏನದು?

ಇಂದು ಬರ್ಥಡೇ ಪಾರ್ಟಿಗೆ ತೆರಳಲು ನಮ್ಮಿಬ್ಬರದೂ ಪ್ಲ್ಯಾನ್ ಇತ್ತು. ಸಂಜೆ ಸ್ನೇಹಿತನ ಬರ್ಥ ಡೇ ಪಾರ್ಟಿಗೆ ಹೋಗಬೇಕಿತ್ತು. ಇಂದು ಥರ್ಡ್ ಸಾಟರ್ಡೇ ಸೆಂಟ್​ ಜೋಸೆಫ್ಸ್​ನಲ್ಲಿ ಕಾಲೇಜಿಗೆ ರಜೆ ಇತ್ತು. ಬೆಳಗ್ಗೆಯಿಂದ ಮನೆಯಲ್ಲೇ ಇದ್ದು ಬೋರ್ ಆಗ್ತಿದೆ, ಶಾಪಿಂಗ್ ಮುಗಿಸಿಕೊಂಡು, ಪಾರ್ಟಿಗೆ ಹೋಗೋಣ ಅಂತಾ ಬಂದಿದ್ದೆವು ಎಂದು ಯುವಕ ಪೊಲೀಸರಿಗೆ ತಿಳಿಸಿದ್ದಾನೆ.

TV9kannada Web Team

| Edited By: sadhu srinath

May 21, 2022 | 7:40 PM

ಬೆಂಗಳೂರು: ಇಂದು ಮಧ್ಯಾಹ್ನ ಪ್ರತಿಷ್ಠಿತ ಬ್ರಿಗೇಡ್​ ರೋಡ್ ನಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಯುವಕ-ಯುವತಿ ಜೋಡಿ ಮೇಲಿನ ಅಂತಸ್ತಿನಿಂದ ಜಾರಿಬಿದ್ದು ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾರೆ. ಅದರಲ್ಲಿ ಯುವತಿ ನಿಮ್ಹಾನ್ಸ್​ ಆಸ್ಪತ್ರೆಗೆ ಸೇರಿಸುವಾಗ ಕೊನೆಯುಸಿರೆಳೆದಿದ್ದಾಳೆ. ಯುವಕ ಯುವತಿಯ ಮೇಲೆ ಬಿದ್ದಿದ್ದರಿಂದ ಗಂಭೀರ ಗಾಯಗಳಾಗದೆ ಬಚಾವಾಗಿದ್ದಾನೆ. ಮೃತಪಟ್ಟ ಯುವತಿ ಲಿಯಾ (18) ಆಂಧ್ರದವಳು. ಇನ್ನು ಯುವಕ‌‌ ಕ್ರಿಸ್ ಪೀಟರ್ (18) ಬೆಂಗಳೂರಿನವನು. ಇಬ್ಬರೂ ಪ್ರತಿಷ್ಠಿತ ಸೆಂಟ್ ಜೋಸೆಫ್ಸ್​ ಕಾಲೇಜಿನಲ್ಲಿ ಕ್ಲಾಸ್​ ಮೇಟುಗಳು.

ಮೊದಲು ಇಬ್ಬರೂ ಯುವಕ-ಯವತಿಯರು ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ ಬಳಿಕ ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಸ್ಪಷ್ಟನೆ ನೀಡಿ, ಸ್ಟೇರ್ ಕೇಸ್‌ನಿಂದ ಆಯತಪ್ಪಿ, ಆಕಸ್ಮಿಕವಾಗಿ ಬಿದ್ದಿದ್ದಾರೆ ಎಂದಿದ್ದರು.

ಬಳಿಕ, ಕಾಲುಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ‌‌ ಕ್ರಿಸ್ ಪೀಟರ್ ನನ್ನು ಪೊಲೀಸರು ಮಾತನಾಡಿಸಿದ್ದು, ಆ ವೇಳೆ ಆತ ತಮ್ಮಿಬ್ಬರ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ್ದಾನೆ. ನಾವಿಬ್ಬರೂ ಲವರ್ಸ್ ಎಂಬ ಮಾಹಿತಿಯನ್ನ ಬಿಚ್ಚಿಟ್ಟ ಯುವಕ ಪೊಲೀಸರ ಮುಂದೆ ಎಳೆ ಎಳೆಯಾಗಿ ಇನ್ನಷ್ಟು ಸೀಕ್ರೆಟ್ಸ್​ ರಿವೀಲ್ ಮಾಡಿದ್ದಾನೆ.

ಇಂದು ಬರ್ಥಡೇ ಪಾರ್ಟಿಗೆ ತೆರಳಲು ನಮ್ಮಿಬ್ಬರದೂ ಪ್ಲ್ಯಾನ್ ಇತ್ತು. ಸಂಜೆ ಸ್ನೇಹಿತನ ಬರ್ಥ ಡೇ ಪಾರ್ಟಿಗೆ ಹೋಗಬೇಕಿತ್ತು. ಇಂದು ಥರ್ಡ್ ಸಾಟರ್ಡೇ ಸೆಂಟ್​ ಜೋಸೆಫ್ಸ್​ನಲ್ಲಿ ಕಾಲೇಜಿಗೆ ರಜೆ ಇತ್ತು. ಬೆಳಗ್ಗೆಯಿಂದ ಮನೆಯಲ್ಲೇ ಇದ್ದು ಬೋರ್ ಆಗ್ತಿದೆ, ಶಾಪಿಂಗ್ ಮುಗಿಸಿಕೊಂಡು, ಪಾರ್ಟಿಗೆ ಹೋಗೋಣ ಅಂತಾ ಯುವತಿ ಲಿಯಾಳನ್ನು ಕ್ರಿಸ್ ಪೀಟರ್ ಕರೆದಿದ್ದನಂತೆ. ಎಂಜಿ ರಸ್ತೆಯ ಪಬ್ ಒಂದರಲ್ಲಿ ಸಂಜೆ ಪಾರ್ಟಿ ಫಿಕ್ಸ್ ಆಗಿತ್ತು ಎಂದು ತಿಳಿಸಿದ್ದಾನೆ. ಆದ್ರೆ ವಿಧಿಯಾಟ ಸಂಜೆಗೂ ಮೊದಲೇ ಯುವತಿಯ ಜೀವ ಕಸಿದಿದೆ ಎಂದು ಟಿವಿ9ಗೆ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಶಾಪಿಂಗ್ ಕಾಂಪ್ಲೆಕ್ಸ್ ನಿಂದ ಯುವಕ-ಯುವತಿ ಬಿದ್ದ ಪ್ರಕರಣದಲ್ಲಿ ಯುವತಿ ಲಿಯಾಳನ್ನು ಆಸ್ಪತ್ರೆಗೆ ಕರೆತಂದಾಗಲೇ ಮೃತ ಪಟ್ಟಿದ್ದಳು. ಯುವಕನಿಗೆ ತಲೆಯ ಸಿಟಿ ಸ್ಕ್ಯಾನ್ ಮಾಡಲಾಗಿ, ಆತನ ತಲೆಗೆ ಯಾವುದೇ‌ ರೀತಿಯ ಪೆಟ್ಟು ಬಿದ್ದಿಲ್ಲ. ಕಾಲಿಗೆ ಪೆಟ್ಟು ಬಿದ್ದಿರುವುದರಿಂದ ಮೂಳೆ ತಜ್ಞರ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಿಮ್ಹಾನ್ಸ್ ಆಸ್ಪತ್ರೆಗೆ ಕರೆತಂದಾಗಲೇ ಯುವತಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಹೀಗಾಗಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡೋದಿಲ್ಲ. ಬದಲಿಗೆ ವಿಕ್ಟೋರಿಯಾ ಅಥವಾ ಬೌರಿಂಗ್ ಆಸ್ಪತ್ರೆಗೆ ಯುವತಿಯ ಮೃತದೇಹ ರವಾನಿಸಲಾಗುತ್ತೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕಾಗುತ್ತೆ ಎಂದು ಟಿವಿ9 ಗೆ ನಿಮ್ಹಾನ್ಸ್ ಆಸ್ಪತ್ರೆಯ RMO ಮಾಹಿತಿ ನೀಡಿದ್ದಾರೆ.

ಆಯತಪ್ಪಿ ಕಿಟಕಿಯಿಂದ ಕೆಳಗೆ ಬಿದ್ದ ಲಿಯಾಳ ಕೈ ಹಿಡಿದುಕೊಂಡು ನಾನೂ ಬಿದ್ದೆ:

ಇಂದು ಬಿಕಾಂ ನಾಲ್ಕನೇ ಸೆಮಿಸ್ಟರ್ ಕೊನೆಯ ಪರೀಕ್ಷೆ ಮುಗಿಸಿ ಲವರ್ಸ್​ ಇಬ್ಬರೂ ಔಟಿಂಗ್ ಹೊರಟಿದ್ದರು. ಅಲ್ಲದೆ ನಾಳೆ ಭಾನುವಾರಕ್ಕೆ ಸ್ನೇಹಿತನ ಹುಟ್ಟು ಹಬ್ಬ ನಿಗದಿಯಾಗಿತ್ತು. ಆದರೆ ಪರೀಕ್ಷೆ ಮುಗಿದ ಕಾರಣ ನಾಳೆಯಿಂದ ಯಾರೂ ಸಿಗೋದಕ್ಕೆ ಆಗೋಲ್ಲ. ಹಾಗಾಗಿ ಇಂದೇ ಬರ್ತಡೇ ಪಾರ್ಟಿ ಪ್ಲಾನ್ ಮಾಡಿಕೊಂಡಿದ್ರು. ಈ ಮಧ್ಯೆ ಇವರಿಬ್ಬರೂ ಬ್ರಿಗೇಡ್ ರಸ್ತೆಯ 5th ಅವೆನ್ಯೂ ನಲ್ಲಿ ಜ್ಯೂಸ್ ಕುಡಿಯಲು ಹೋಗಿದ್ದರು. ಸ್ನೇಹಿತರೆಲ್ಲ ಜ್ಯೂಸ್ ಕುಡಿದು ಹೊರಕ್ಕೆ ಬಂದಿದ್ರು. ಆದರೆ ಇವರಿಬ್ಬರೇ ಎರಡನೇ ಪ್ಲೋರ್ ನಲ್ಲಿ ನಿಂತು ಮಾತಾನಾಡುತ್ತಾ ಇದ್ರು. ಆಗ ಆಯತಪ್ಪಿ ಕಿಟಕಿಯಿಂದ ಕೆಳಗೆ ಬಿದ್ದಳು ಲಿಯಾ, ನಾನು ಅವಳ ಕೈ ಹಿಡಿದುಕೊಂಡೆ, ಈ ವೇಳೆ ನಾನೂ ಜೊತೆ ಜೊತೆಗೆ ಬಿದ್ದೆ ಎಂದು ಪೊಲೀಸರ ಮುಂದೆ ಘಟನೆ ಬಗ್ಗೆ ವಿವರಿಸಿದ್ದಾನೆ ಬದುಕುಳಿದ ಯುವಕ‌‌ ಕ್ರಿಸ್ ಪೀಟರ್.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Also Read:  Common Superstitions: ನದಿಯಲ್ಲಿ ನಾಣ್ಯ ಹಾಕುವುದು, ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದು ಏಕೆ ಗೊತ್ತಾ!?

Also Read: Health Tips: ರಾತ್ರಿಯ ವೇಳೆ ಮರೆತು ಕೂಡ ಈ ಹಣ್ಣುಗಳನ್ನು ಸೇವಿಸಬೇಡಿ: ಅವು ಯಾವುವು? ಯಾಕೆ? ತಿಳಿಯೋಣ

Follow us on

Related Stories

Most Read Stories

Click on your DTH Provider to Add TV9 Kannada