ಹೊಡೆದು ಬಡಿದು ಹಸಿವಿನಿಂದ ಸಾಯುವಂತೆ ಮಾಡುವುದಕ್ಕೆ ಕ್ಯಾಲಿಫೋರ್ನಿಯಾದ ಈ ದುಷ್ಟ ಮತ್ತು ಕ್ರೂರ ಕುಟುಂಬ ಮೂರು ಮಕ್ಕಳನ್ನು ದತ್ತು ಪಡೆಯಿತೇ?
ಪೊಲೀಸರಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಕ್ಕಳನ್ನು ಹಿಂಸಿಸುವ ಕೆಲಸದ ರಿಂಗ್ ಲೀಡರ್ ಲೆಟಿಸಿಯ ಮ್ಯಾಕೊರ್ಮ್ಯಾಕ್ ಅಗಿದ್ದಳು ಮತ್ತು ಉಳಿದವರು-ಬ್ರಿಯಾನ್, ಸ್ಟ್ಯಾನ್ಲೀ ಮತ್ತು ಅಡೆಲ್ಲ ಟಾಮ್ ಒಟ್ಟಿಗೆ ಸೇರಿ ಮಕ್ಕಳನ್ನು ಹಸಿವಿನಿಂದ ಕಂಗಾಲಾಗುವಂತೆ ಮಾಡುತ್ತಿದ್ದರು.
ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಚರ್ಚೊಂದರ ಲೀಡರ್ (church leader) ಆಗಿದ್ದ ಮಹಿಳೆಯೊಬ್ಬಳು ತನ್ನ ಮೂರು ಸಾಕುಮಕ್ಕಳನ್ನು ಉಪವಾಸ ಹಾಕಿ, ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ನೀಡಿ ಅಂತಿಮವಾಗಿ ಅವರಲ್ಲೊಬ್ಬಳನ್ನು ಕೊಂದ ಆರೋಪ ಎದುರಿಸುತ್ತಿದ್ದಾಳೆ. 49-ವರ್ಷ-ವಯಸ್ಸಿನ ಲೆಟಿಸಿಯ ಮ್ಯಾಕೊರ್ಮ್ಯಾಕ್ (Leticia McCormack) ವಿರುದ್ಧ ಮಕ್ಕಳ ನಿಂದನೆ, ಕಿರುಕುಳ ಮತ್ತು ಕೊಲೆಯ ಚಾರ್ಜ್ ಗಳನ್ನು ವಿಧಿಸಲಾಗಿದೆ. ಮಾಜಿ ಎನ್ ಎಫ್ ಎಲ್ ಆಟಗಾರ ಮೈಲ್ಸ್ ಮ್ಯಾಕ್ ಪೆರ್ಸನ್ (Miles McPherson) ನೇತೃತ್ವದ ಕ್ಯಾಲಿಫೋರ್ನಿಯದಲ್ಲಿರುವ ರಾಕ್ಚರ್ಚ್ನಲ್ಲಿ ಮ್ಯಾಕೊರ್ಮ್ಯಾಕ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ, ಚರ್ಚ್ ನ ವೆಬ್ಸೈಟ್ ನಿಂದ ಅವಳ ಹೆಸರನ್ನು ಈಗ ತೆಗೆದು ಹಾಕಲಾಗಿದೆ.
ಲೆಟಿಸಿಯ ಮ್ಯಾಕೊರ್ಮ್ಯಾಕ್ ಮತ್ತು ಅವಳ ಗಂಡ ಬ್ರಿಯಾನ್ ಮ್ಯಾಕೊರ್ಮ್ಯಾಕ್ 2017 ರಿಂದ ತಾವು ಸಾಕುತ್ತಿದ್ದ ಮಕ್ಕಳನ್ನು 2019ರಲ್ಲಿ ದತ್ತು ಪಡೆದಿದ್ದರು. ದಾಖಲೆಗಳ ಪ್ರಕಾರ ಮ್ಯಾಕೊರ್ಮ್ಯಾಕ್ ಮತ್ತವಳ ತಂದೆತಾಯಿ ಸ್ಟ್ಯಾನ್ಲಿ ಮತ್ತು ಅಡೆಲ್ಲ ಟಾಮ್ ಮಕ್ಕಳಿಗೆ ಕೋಲು, ಬ್ಯಾಟ್ ಗಳಿಂದ ಹೊಡೆದು ವಿಪರೀತವಾಗಿ ಹಿಂಸಿಸುತ್ತಿದ್ದರು. ಮಕ್ಕಳಿಗೆ ಅವರು ಬಾತ್ ರೂಮ್ ಉಪಯೋಗಿಸಲು ಬಿಡುತ್ತಿರಲಿಲ್ಲ ಮತ್ತು ತಿನ್ನಲು ಆಹಾರ ಮತ್ತು ಕುಡಿಯಲು ನೀರು ಸಹ ಕೊಡುತ್ತಿರಲಿಲ್ಲ.
ಆಗಸ್ಟ್ ತಿಂಗಳಲ್ಲಿ ಅರಬೆಲ್ಲ ಮ್ಯಾಕೊರ್ಮ್ಯಾಕ್ ಹೆಸರಿನ ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಮಗು ಕುಪೋಷಣೆಯಿಂದ ಬಳಲುತಿತ್ತು ಮತ್ತು ಅವಳ ತೂಕ ಕೇವಲ 22 ಕೆಜಿ ಮಾತ್ರ ಆಗಿತ್ತು. ಸಾಯುವ ಮುಂಚಿನ ತಿಂಗಳುಗಳಲ್ಲಿ ತನ್ನ ದೇಹದಲ್ಲಿ 15 ಮೂಳೆ ಮುರಿತಗಳಿಂದ ಅರಬೆಲ್ಲ ಚೇತರಿಸಿಕೊಳ್ಳುತ್ತಿದ್ದಳು! ತನಿಖೆ ಕೈಗೆತ್ತಿಕೊಂಡ ಪೊಲೀಸರು ವಿಚಾರಣೆಗೆಂದು ಬ್ರಿಯಾನ್ ಮ್ಯಾಕೊರ್ಮ್ಯಾಕ್ ಅವರಲ್ಲಿಗೆ ಹೋದಾಗ ಅವನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಡಿಸ್ಟ್ರಿಕ್ಟ್ ಅಟಾರ್ನಿ ಅವರ ಪ್ರಕಾರ ಲೆಟಿಸಿಯ ಮ್ಯಾಕೊರ್ಮ್ಯಾಕ್ ಮತ್ತು ಬ್ರಿಯಾನ್ ಮ್ಯಾಕೊರ್ಮ್ಯಾಕ್ ನಡುವೆ ವಿನಿಮಯಗೊಂಡಿರುವ ಟೆಕ್ಸ್ಟ್ ಮೆಸೇಜುಗಳು ಬಯಲಾಗಿದ್ದು ಒಂದು ಮೆಸೇಜ್ ಪ್ರಕಾರ ಅರಾಬೆಲ್ಲ ‘ಹಸಿವಿನಿಂದ ಸಾಯತ್ತಿದ್ದಾಳೆ ಮತ್ತು ಅವಳು ನಿಶ್ಚಿತವಾಗಿ ಸಾಯುವ’ ಸಂಗತಿ ಬ್ರಿಯಾನ್ ಗೆ ಗೊತ್ತಿತ್ತು.
ಪೊಲೀಸರಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಕ್ಕಳನ್ನು ಹಿಂಸಿಸುವ ಕೆಲಸದ ರಿಂಗ್ ಲೀಡರ್ ಲೆಟಿಸಿಯ ಮ್ಯಾಕೊರ್ಮ್ಯಾಕ್ ಅಗಿದ್ದಳು ಮತ್ತು ಉಳಿದವರು-ಬ್ರಿಯಾನ್, ಸ್ಟ್ಯಾನ್ಲೀ ಮತ್ತು ಅಡೆಲ್ಲ ಟಾಮ್ ಒಟ್ಟಿಗೆ ಸೇರಿ ಮಕ್ಕಳನ್ನು ಹಸಿವಿನಿಂದ ಕಂಗಾಲಾಗುವಂತೆ ಮಾಡುತ್ತಿದ್ದರು.
ಲೆಟಿಸಿಯ ಮ್ಯಾಕೊರ್ಮ್ಯಾಕ್, ಸ್ಟ್ಯಾನ್ಲೀ ಮತ್ತು ಅಡೆಲ್ಲ ಟಾಮ್ ವಿರುದ್ಧ ಮಕ್ಕಳ ನಿಂದನೆ, ಕಿರುಕುಳ ಗಳ ಚಾರ್ಜ್ ವಿಧಿಸಲಾಗಿದೆ. ಲೆಟಿಸಿಯ ಮತ್ತು ಸ್ಟ್ಯಾನ್ಲೀ ಮೇಲೆ ಕೊಲೆ ಆರೋಪ ಕೂಡ ಇದೆ.
ಮೂವರಿಗೂ ಜಾಮೀನು ನಿರಾಕರಿಸಲಾಗಿದೆ.
ಲೆಟಿಸಿಯ ಮ್ಯಾಕೊರ್ಮ್ಯಾಕ್ ಪರ ವಕೀಲ ನ್ಯಾಯಾಲಯದಲ್ಲಿ, ತನ್ನ ಕಕ್ಷಿದಾರಳು ‘ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಹೇಳಿರುವುದಕ್ಕೆ ಯಾವುದೇ ಪುರಾವೆ ಇಲ್ಲದ ಕಾರಣ ಆಕೆಗೆ ಜಾಮೀನು ನೀಡಬೇಕೆಂದು’ ಮಾಡಿದ ಮನವಿಯನ್ನೂ ನ್ಯಾಯಾಧೀಶರು ತಿರಸ್ಕರಿಸಿದರು. ಅಡೆಲ್ಲ ಪರ ವಾದಿಸಿದ ವಕೀಲ, ತನ್ನ ಕಕ್ಷಿದಾರಳು ಈಗಾಗಲೇ 70-ವರ್ಷದವಳಾಗಿರುವವುದರಿಂದ ಆಕೆಯಿಂದ ಸಮಾಜಕ್ಕೇನೂ ಹಾನಿಯಿಲ್ಲ ಎಂದು ವಾದಿಸಿದರು.
ತನಗೆ ಜಾಮೀನು ನೀಡದಿರುವ ಅಂಶವನ್ನು ಪ್ರಶ್ನಿಸುವ ಹಕ್ಕನ್ನು ಸ್ಟ್ಯಾನ್ಲೀ ಸರೆಂಡರ್ ಮಾಡಿದ್ದಾನೆ.
ಮತ್ತಷ್ಟು ಕ್ರೈಮ್ ಸುದ್ದಿಗಳನ್ನಿ ಓದಲು ಇಲ್ಲಿ ಕ್ಲಿಕ್ ಮಾಡಿ