ರಾಯಚೂರು: ಕುಡಿಯುವ ನೀರಿಗಾಗಿ ನದಿಗೆ ಇಳಿದಿದ್ದ ಬಾಲಕನನ್ನ ಮೊಸಳೆ ಹೊತ್ತೊಯ್ದ ಘಟನೆ ತಾಲೂಕಿನ ಕುರವಕಲಾ ಗ್ರಾಮದಲ್ಲಿ ನಡೆದಿದೆ. ನವೀನ್(9) ಮೃತ ಬಾಲಕ. ಪೋಷಕರ ಜತೆ ನದಿ ಬಳಿ ಇರುವ ಜಮೀನಿಗೆ ನವೀನ್ ತೆರಳಿದ್ದ. ಈ ವೇಳೆ ಪೋಷಕರು ನದಿಗೆ ಹೋಗಿ ಕುಡಿಯಲು ನೀರು ತರಲು ಹೇಳಿದ್ದರು. ಕುಡಿಯುವ ನೀರಿಗಾಗಿ ನದಿಗೆ ತೆರಳಿದ್ದ ನವೀನ್ ಹಾಗೂ ಮತ್ತೊಬ್ಬ ಬಾಲಕ, ಬಾಟಲಿಗೆ ನೀರು ತುಂಬಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ನವೀನನ ಮೇಲೆ ಮೊಸಳೆ ದಾಳಿ ಮಾಡಿದ್ದು, ಹೊತ್ತೊಯ್ದಿದೆ. ನವೀನ್ ಜತೆ ಇದ್ದ ಮತ್ತೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಬಾಲಕ ನವೀನ್ಗಾಗಿ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭವಾಗಿದ್ದು, ಯಾಪಲದಿನ್ನಿ ಪೊಲೀಸರು, ಅಗ್ನಿಶಾಮಕ ದಳ ಜೊತೆ ಸ್ಥಳೀಯರಿಂದ ಕಾರ್ಯಾಚರಣೆ. ನಡೆಸಿದ್ದಾರೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈಜಲು ತುಂಗಾ ನದಿಗೆ ಇಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಚಿಕ್ಕಮಗಳೂರು: ಈಜಲೆಂದು ತುಂಗಾ ನದಿಗೆ ಇಳಿದ ಇಬ್ಬರು ವಿದ್ಯಾರ್ಥಿಗಳಿಬ್ಬರು ನೀರುಪಾಲದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ (20) ಹಾಗೂ ರಕ್ಷಿತ್ (20) ನೀರುಪಾಲಾದ ವಿದ್ಯಾರ್ಥಿಗಳು. ಶೃಂಗೇರಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ರಕ್ಷಿತ್, ಪ್ರಜ್ವಲ್ ನೆಮ್ಮಾರಿನ ಸುಂಕದಮಕ್ಕಿ ತೂಗುಸೇತುವೆ ಬಳಿ ಈಜಲೆಂದು ನದಿಗಿಳಿದಿದ್ದಾರೆ. ಈ ವೇಳೆ ನೀರು ಪಾಲಾಗಿದ್ದಾರೆ. ಘಟನೆ ಸಂಬಂಧ ಶೃಂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Vijayapura: ಟ್ರ್ಯಾಕ್ಟರ್ ಹಾಗೂ ಕ್ರೂಸರ್ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು, ಇತರರಿಗೆ ಗಾಯ
ಇಬ್ಬರ ನಡುವೆ ಜಗಳ; ಬಿಡಿಸಲು ಹೋದವನನ್ನ ಚಾಕುವಿನಿಂದ ಇರಿದು ಕೊಲೆ
ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ತಂದುಕೊಟ್ಟಿದೆ. ಚುನಾವಣೆ ಮುಗಿದ ಕೂಡಲೇ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳು ಆಗುತ್ತಿವೆ ಎಂದು ಬಿಜೆಪಿ ಪಕ್ಷದಿಂದ ಆರೋಪಗಳು ಕೇಳಿ ಬಂದಿದೆ. ಅದರಂತೆ ಯಾದಗಿರಿ ನಗರದಲ್ಲೂ ಚುನಾವಣೆ ಮುಗಿದ ಎರಡೇ ದಿನಕ್ಕೆ ಕೊಲೆಯೊಂದು ನಡೆದು ಹೋಗಿದೆ. ಇಲ್ಲಿ ಕೊಲೆಯಾದ ವ್ಯಕ್ತಿ 44 ವರ್ಷದ ಶ್ರೀನಿವಾಸ್. ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ನಿವಾಸಿಯಾಗಿರುವ ಶ್ರೀನಿವಾಸ್ ಮೇ.15 ರ ರಾತ್ರಿ ಕೆಲಸವನ್ನ ಮುಗಿಸಿಕೊಂಡು ಹೈದ್ರಾಬಾದ್ ರಸ್ತೆಯಲ್ಲಿರುವ ರಾಯಲ್ ಗಾರ್ಡನ್ ಎನ್ನುವ ಹೋಟೆಲ್ಗೆ ಊಟಕ್ಕೆ ಹೋಗಿದ್ದ. ಊಟಕ್ಕೆ ಕುಳಿತ್ತಿದ್ದ ಕೂಡ. ಹೀಗೆ ಕುಳಿತುಕೊಂಡಾಗ ಹೋಟೆಲ್ ಹೊರಗಡೆ ಹೋಟೆಲ್ ಮಾಲೀಕ ಹಾಗೂ ಪಕ್ಕದಲ್ಲೇ ಇರುವ ಬಾರ್ ಮಾಲೀಕನ ಮದ್ಯ ಜಗಳ ನಡೆದಿತ್ತು. ಊಟಕ್ಕೆ ಕುಳಿತ್ತಿದ್ದ ಶ್ರೀನಿವಾಸ್ ಎದ್ದು ಹೊರಗಡೆ ಬಂದು ಜಗಳ ಬಿಡಿಸಲು ಮುಂದಾಗಿದ್ದ. ಇದೇ ಅವನ ಜೀವವನ್ನ ಕಸಿದುಕೊಂಡಿದೆ.
ಹೌದು ಜಗಳ ಬಿಡಿಸಿದ ಕೂಡಲೇ ಜಗಳ ಕೂಡ ತಣ್ಣಗಾಗಿತ್ತು. ಆದ್ರೆ, ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಮಹ್ಮದ್ ಅನಾಸ್ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು ಬಾರ್ ಮಾಲೀಕ ಚಂದ್ರಶೇಖರ್ಗೆ ಕೊಲೆ ಮಾಡಲು ಮುಂದಾಗುತ್ತಾನೆ. ಆದ್ರೆ, ಚಂದ್ರಶೇಖರ್ ಸ್ವಲ್ಪದರಲ್ಲೇ ಪಾರಾಗಿದ್ದು, ಪಕ್ಕದಲ್ಲೇ ನಿಂತಿದ್ದ ಶ್ರೀನಿವಾಸ್ ಹೊಟ್ಟೆಗೆ ಚಾಕು ಬಿದ್ದಿದೆ. ಹೊಟ್ಟೆಗೆ ಚಾಕು ಬಿಳುತ್ತಿದ್ದ ಹಾಗೆ ಶ್ರೀನಿವಾಸ್ ಕೆಳಗಡೆ ಕುಸಿದು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪುತ್ತಾನೆ. ಸ್ಥಳದಲ್ಲೇ ನೆರದಿದ್ದ ಜನ ಏಕ್ ದಮ್ ಹೌಹಾರಿ ಹೋಗುತ್ತಾರೆ. ಇಲ್ಲಿ ಕೊಲೆ ನಡೆಯುತ್ತೆಂದು ಯಾರು ಕೂಡ ಊಹಿಸರಲಿಲ್ಲ. ಆದ್ರೆ, ಕ್ಷಣಮಾತ್ರದಲ್ಲೇ ಸ್ಥಳದಲ್ಲೇ ಕೊಲೆ ನಡೆದು ಹೋಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ